ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಸಿಹಿ ಸುದ್ದಿ.. ಈ ಮೂಲಕ ಬೈಟ್‌ಡ್ಯಾನ್ಸ್‌ಗೆ ಮೆಟಾ (Meta) ಟಾಂಗ್ ನೀಡಿದೆ. ಇದು ವಿಶೇಷವಾಗಿ ರೀಲ್ಸ್ ಕ್ರಿಯೆಟರ್ಸ್ಗೆ ಬೆಸ್ಟ್! ಹೌದು, ಜನಪ್ರಿಯ ಸೋಶಿಯಲ್ ಮೀಡಿಯಾ ದೈತ್ಯ ಇನ್‌ಸ್ಟಾಗ್ರಾಮ್ ಹೊಸ ಅಪ್ಲಿಕೇಶನ್ ಅನ್ನು (Instagram New App) ಬಿಡುಗಡೆ ಮಾಡಿದೆ. ಈ ಆಪ್‌ನ ಹೆಸರು 'ಎಡಿಟ್ಸ್' (Edits). ಮೆಟಾ ಇದನ್ನು ವಿಶೇಷವಾಗಿ ಹೆಚ್ಚು ರೀಲ್‌ಗಳನ್ನು ಮಾಡುವ ಕ್ರಿಯೆಟರ್ಸ್ಗಾಗಿ ವಿನ್ಯಾಸಗೊಳಿಸಿದೆ. ಬನ್ನಿ, ಈ ಹೊಸ ಆಪ್‌ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳೇನು? ಯಾರೆಲ್ಲಾ ಬಳಕೆ ಮಾಡಬಹುದು? ಎಂಬ ಬಗ್ಗೆ ತಿಳಿಯೋಣ.
ಮೆಟಾ ಸಂಸ್ಥೆಯು 'ಎಡಿಟ್ಸ್' ಎಂಬ ನೂತನ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಅನ್ನು (Meta launches Edits) ಪ್ರಾರಂಭಿಸಿದೆ. ಇದು ಬಳಕೆದಾರರು ಹೆಚ್ಚಿನ ರೀಲ್‌ಗಳನ್ನು ಮಾಡಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್ ಅಂಗಡಿಗಳಲ್ಲಿ ಲಭ್ಯವಿದೆ. ಇನ್‌ಸ್ಟಾಗ್ರಾಮ್ ಈ ಅಪ್ಲಿಕೇಶನ್ ಅನ್ನು ಮೂರು ತಿಂಗಳ ಹಿಂದೆ ಘೋಷಿಸಿತ್ತು. ಮೊಬೈಲ್ ಮೂಲಕವೇ ರೀಲ್ ಅನ್ನು ಸುಲಭವಾಗಿ ಕ್ರಿಯೇಟ್ ಮಾಡಬಹುದು. ಇದು ಉತ್ತಮ ಗುಣಮಟ್ಟದ ವಿಡಿಯೋವನ್ನು ರೆಕಾರ್ಡ್ ಮಾಡಲು ಮತ್ತು ಸಂಪಾದಿಸಲು ನಿಮಗೆ ಅನುಮತಿಸುತ್ತದೆ.

ಮೆಟಾದ ಈ ಆಪ್ ಟಿಕ್‌ಟಾಕ್‌ನ ಕ್ಯಾಪ್‌ಕಟ್‌ಗೆ (CapCut) ಪೈಪೋಟಿ ನೀಡುವುದು ಖಚಿತ. ಈ ಹೊಸ 'ಎಡಿಟ್ಸ್' ಆಪ್ ಕುರಿತು ಮೆಟಾ ಬ್ಲಾಗ್ ಪೋಸ್ಟ್ ಸಹ ಬಿಡುಗಡೆ ಮಾಡಿದೆ. ವಿಡಿಯೋ ಮಾಡುವ ಪ್ರಕ್ರಿಯೆಯು ತುಂಬಾ ಸಂಕೀರ್ಣವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆ ಕಷ್ಟಕರ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ಇನ್‌ಸ್ಟಾಗ್ರಾಮ್‌ನ ಈ ಹೊಸ ಆಪ್‌ನಲ್ಲಿ ವಿಡಿಯೋ ಪ್ರಾಜೆಕ್ಟ್ಗಳನ್ನು ರಚಿಸುವುದನ್ನು ಕ್ರಿಯೆಟರ್ಸ್ ಎಂಜಾಯ್ ಮಾಡುತ್ತಾರೆ. ಇದು ಅವರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಮೆಟಾ ತಿಳಿಸಿದೆ.
ಕ್ರಿಯೆಟಿವಿಟಿ ಹೆಚ್ಚಿಸಲು ಈ ಆಪ್ ಬಳಸಿ
ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಸ್ವತಃ ಒಂದು ರೀಲ್ ಅಪ್ಲೋಡ್ ಮಾಡಿದ್ದಾರೆ. ಈ ಎಡಿಟ್ಸ್ ಆಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಕೇವಲ ವಿಡಿಯೋ ಎಡಿಟಿಂಗ್ ಆಪ್ ಆಗಿಲ್ಲ. ಇದು ಕ್ರಿಯೆಟಿವಿಟಿ ಅನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ಈ ಆಪ್‌ನಲ್ಲಿ ಇನ್ಸ್ಪಿರೇಶನ್ ಹೆಸರಿನ ಟ್ಯಾಬ್ ಸಹ ಗೋಚರಿಸುತ್ತದೆ. ನೀವು ಇತರರ ಕ್ರಿಯೆಟಿವಿಟಿ ಐಡಿಯಾಗಳನ್ನು ಸಹ ನೋಡಲು ಸಾಧ್ಯವಿದೆ. ಈ ಎಡಿಟ್ಸ್ ಆಪ್‌ನ ಸಹಾಯದಿಂದ ಕ್ರಿಯೆಟರ್ಸ್ ವಿಡಿಯೋ ಡ್ರಾಫ್ಟ್‌ಗಳನ್ನು ಸಹ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅವಕಾಶವಿದೆ. ಇದಲ್ಲದೆ, ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದರೆ, ಅವರು ಅದರ ಕಾರ್ಯಕ್ಷಮತೆಗೆ ಸಂಬಂಧಿಸಿದ ಡೇಟಾ ಸಹ ನೋಡಬಹುದು.
ಎಐ ಸಹಾಯದಿಂದ ಫೋಟೋವನ್ನು ವಿಡಿಯೋ ಮಾಡಬಹುದು
ಎಡಿಟ್ಸ್ ಅಪ್ಲಿಕೇಶನ್ ಮೂಲಕ ಬ್ಯಾಕ್ಗ್ರೌಂಡ್ ತೆಗೆದುಹಾಕಬಹುದು. ಜೊತೆಗೆ ಆಟೋಮೆಟಿಕ್ ಕ್ಯಾಪ್ಷನ್ಗಳನ್ನು ನೀಡಬಹುದು. ಎಐ (AI) ವೈಶಿಷ್ಟ್ಯದ ಸಹಾಯದಿಂದ ಫೋಟೋವನ್ನು ವಿಡಿಯೋನ್ನಾಗಿ ಮಾಡುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಕ್ರಿಯೆಟರ್ಸ್ ತಮ್ಮ ಖಾತೆಯ ಕಾರ್ಯಕ್ಷಮತೆಗೆ ಸಂಬಂಧಿಸಿದ ಡೇಟಾವನ್ನು ಸಹ ನೋಡಲು ಸಾಧ್ಯವಿದೆ. ಬೈಟ್‌ಡ್ಯಾನ್ಸ್‌ನ ಕ್ಯಾಪ್‌ಕಟ್‌ನಂತೆ ಈ ವೈಶಿಷ್ಟ್ಯಗಳೊಂದಿಗೆ ಎಡಿಟ್ಸ್ ಅತ್ಯುತ್ತಮ ಮೊಬೈಲ್ ಮತ್ತು ಡೆಸ್ಕ್‌ಟಾಪ್ ವಿಡಿಯೋ ಎಡಿಟಿಂಗ್ ಸಾಧನ ಎಂದು ಸಾಬೀತುಪಡಿಸುತ್ತದೆ.
ಟಿಕ್‌ಟಾಕ್‌ನ ಕ್ಯಾಪ್‌ಕಟ್‌ನಂತೆಯೇ ವೈಶಿಷ್ಟ್ಯಗಳಿವೆ!
ಎಡಿಟ್ಸ್ ಆಪ್ ಸಹಾಯದಿಂದ ಕ್ರಿಯೆಟರ್ಸ್ ತಮ್ಮ ವಿಡಿಯೋ ಪ್ಲಾನ್ ಬಹಳ ಸುಲಭವಾಗಿ ಶೂಟ್ ಮಾಡಬಹುದು. ಎಡಿಟ್ ಮತ್ತು ಆರ್ಗನೈಜ್ ಮಾಡಲು ಸಾಧ್ಯವಾಗಲಿದೆ. ಇದು ಟಿಕ್‌ಟಾಕ್‌ನ ಕ್ಯಾಪ್‌ಕಟ್ ಎಡಿಟಿಂಗ್ ಆಪ್‌ಗೆ ಪ್ರಬಲ ಪೈಪೋಟಿ ನೀಡಲಿದೆ. ಪ್ರಸ್ತುತ ಕ್ರಿಯೆಟರ್ಸ್ ತಮ್ಮ ರೀಲ್ಸ್ ಮತ್ತು ಇತರೆ ವಿಡಿಯೋಗಳನ್ನು ಎಡಿಟ್ ಮಾಡಲು ಬೇರೆ ಬೇರೆ ಆಪ್‌ಗಳನ್ನು ಬಳಕೆ ಮಾಡುತ್ತಾರೆ. ಅವರಿಗೆ ಅನುಕೂಲವಾಗುವಂತೆ ಇನ್‌ಸ್ಟಾಗ್ರಾಮ್ ಈ ಪ್ರತ್ಯೇಕ ಎಡಿಟ್ಸ್ ಆಪ್ ತಂದಿದೆ. ಇದರಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು ಟಿಕ್‌ಟಾಕ್‌ನ ಕ್ಯಾಪ್‌ಕಟ್ ಆಪ್‌ನಂತೆಯೇ ಇವೆ.


Click it and Unblock the Notifications