ಚೀನಾ ನಂಟಿನ 52 ಆಪ್ ಬಳಸದಿರಲು ಗುಪ್ತಚರ ಇಲಾಖೆ ಮಾಹಿತಿ; ಇಲ್ಲಿದೆ ಪಟ್ಟಿ

ಭಾರತದ ಗುಪ್ತಚರ ಇಲಾಖೆಯು 50ಕ್ಕೂ ಹೆಚ್ಚು ಚೀನಾಗೆ ತಳುಕು ಹಾಕಿಕೊಂಡಂಥ ಅಪ್ಲಿಕೇಷನ್ ಗಳ ಪಟ್ಟಿಯೊಂದನ್ನು ಸಿದ್ಧ ಮಾಡಿ, ಇವುಗಳಿಂದ ರಾಷ್ಟ್ರೀಯ ಭದ್ರತೆಗೆ ಆತಂಕ ಇದೆ ಎಂದು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಒಂದೋ ಇವುಗಳನ್ನು ಬ್ಲಾಕ್ ಮಾಡಬೇಕು ಅಥವಾ ಬಳಸದಿರುವಂತೆ ಜನರಿಗೆ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದೆ.

ಈ ಅಪ್ಲಿಕೇಷನ್ ಗಳನ್ನು ಭಾರತೀಯ ಬಳಕೆದಾರರು ಬಹಳ ಹೆಚ್ಚಾಗಿ ಬಳಸುತ್ತಾರೆ. ಈ ಅಪ್ಲಿಕೇಷನ್ ಗಳು ಸುರಕ್ಷಿತವಲ್ಲ ಹಾಗೂ ದೊಡ್ಡ ಪ್ರಮಾಣ ಡೇಟಾವನ್ನು ಭಾರತದಿಂದ ಹೊರಗೆ ಒಯ್ಯುವ ಸಾಧ್ಯತೆಯೂ ಇದೆ ಎಂದು ಗುಪ್ತಚರ ಇಲಾಖೆಯು ಮಾಹಿತಿಯನ್ನು ನೀಡಿದೆ. ವಿಡಿಯೋ ಕಾನ್ಫರೆನ್ಸ್ ಅಪ್ಲಿಕೇಷನ್ 'ಜೂಮ್' ಬಳಕೆ ಬಗ್ಗೆಯೂ ಆತಂಕ ವ್ಯಕ್ತಪಡಿಸಲಾಗಿತ್ತು.

ಚೀನಾ ನಂಟಿನ 52 ಆಪ್ ಬಳಸದಿರಲು ಗುಪ್ತಚರ ಇಲಾಖೆ ಮಾಹಿತಿ; ಇಲ್ಲಿ ಪಟ್ಟಿ

ಹಾಗಿದ್ದರೆ ಯಾವುದೆಲ್ಲ ಅಪ್ಲಿಕೇಷನ್ ಗಳು ಆತಂಕಕಾರಿ ಎಂಬ ಪಟ್ಟಿ ಹೀಗಿದೆ:
360 Security, APUS Browser, Baidu Map, Baidu Translate, BeautyPlus, Bigo Live, CacheClear DU apps studio, Clash of Kings, Clean Master - Cheetah, ClubFactory, CM Browser, DU Battery Saver, DU Browser, DU Cleaner, DU Privacy, DU recorder,

ES File Explorer, Helo, Kwai, LIKE, Mail Master, Mi Community, Mi Store, Mi Video call-Xiaomi, NewsDog, Parallel Space, Perfect Corp, Photo Wonder, QQ International, QQ Launcher, QQ Mail, QQ Music, QQ NewsFeed, QQ Player, QQ Security Centre,

ROMWE, SelfieCity, SHAREit, SHEIN, TikTok, UC Browser, UC News, Vault-Hide, Vigo Video, Virus Cleaner (Hi Security Lab), VivaVideo- QU Video Inc, WeChat, Weibo, WeSync, Wonder Camera, Xender and YouCam Makeup.

ಇಲ್ಲಿಯ ತನಕ ಈ ಐವತ್ತೆರಡೂ ಅಪ್ಲಿಕೇಷನ್ ಗಳು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಐಒಎಸ್ ಆಪ್ ಸ್ಟೋರ್ ನಲ್ಲಿ ಲಭ್ಯ ಇವೆ. ಇದೇ ರೀತಿ ಪಾಶ್ಚಾತ್ಯ ರಾಷ್ಟ್ರಗಳು ಪದೇ ಪದೇ ಚೀನಿ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಲೇ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+