ಎಲ್‌ಐಸಿ ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲು ಆದ್ಯತೆ ನೀಡಲಾಗುವುದು: ಅನುರಾಗ್ ಠಾಕೂರ್

ಸರ್ಕಾರದ ಹೊಸ ಚಿಂತನೆಯಾದ ಸರ್ಕಾರಿ ಸ್ವಾಮ್ಯದ ದೈತ್ಯ ಸಂಸ್ಥೆಯಾದ ಭಾರತೀಯ ಜೀವವಿಮೆ ನಿಗಮದ(ಎಲ್‌ಐಸಿ) ಮುಂದಿನ ಹಣಕಾಸು ವರ್ಷದಲ್ಲಿ ಷೇರುಪೇಟೆ ವಹಿವಾಟು ನಡೆಸಲಿದೆ. ಈ ಕುರಿತಾಗಿ ಎಲ್‌ಐಸಿ ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

'ಷೇರು ಪೇಟೆಯಲ್ಲಿ ಎಲ್‌ಐಸಿ ವಹಿವಾಟು ನಡೆಸಬೇಕು ಎನ್ನುವುದು ಸರ್ಕಾರದ ಹೊಸ ಚಿಂತನೆಯಾಗಿದೆ. ಶೀಘ್ರದಲ್ಲಿಯೇ ವಿವರಗಳನ್ನು ಪ್ರಕಟಿಸಲಾಗುವುದು. ನಿಗಮ ಮತ್ತು ಅದರ ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲು ಆದ್ಯತೆ ನೀಡಲಾಗುವುದು' ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್‌ಸಿಂಗ್ ಠಾಕೂರ್‌ ಹೇಳಿದ್ದಾರೆ.

ಎಲ್‌ಐಸಿ ಪಾಲಿಸಿದಾರರ ಹಿತಾಸಕ್ತಿ ರಕ್ಷಣೆಗೆ ಆದ್ಯತೆ: ಅನುರಾಗ್ ಠಾಕೂರ್

'ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಅವಕಾಶ ಮಾಡಿಕೊಡುವುದರಿಂದ ಆರಂಭಿಕ ಸಾರ್ವಜನಿಕ ನೀಡಿಕೆಯಲ್ಲಿ(ಐಪಿಒ) ಸಾರ್ವಜನಿಕರೂ ಭಾಗಿಯಾಗಿದ್ದಾರೆ. ಇದರಿಂದ ನಿಗಮದ ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚಲಿದೆ. ಷೇರು ಮಾರುಕಟ್ಟೆಯ ವಹಿವಾಟು ಕೂಡ ವೃದ್ಧಿಸಲಿದೆ' ಎಂದು ಅನುರಾಗ್‌ಸಿಂಗ್ ಠಾಕೂರ್ ಸಂದರ್ಶನದಲ್ಲಿ ಹೇಳಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಸರ್ಕಾರದ ಪಾಲು ಬಂಡವಾಳ ಮಾರಾಟ ಮಾಡಲಾಗುವುದು ಎನ್ನುವುದು ಎಲ್‌ಐಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರವೇ ಸ್ಪಷ್ಟ ಚಿತ್ರಣ ದೊರೆಯಲಿದೆ. ಸದ್ಯಕ್ಕೆ ಯಾವ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಬೇಕು ಎನ್ನುವುದನ್ನು ಎಲ್‌ಐಸಿಯು ಸ್ವತಂತ್ರವಾಗಿ ನಿರ್ಧರಿಸುತ್ತದೆ ಎಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+