ನಿರೀಕ್ಷೆಯಂತೆಯೇ ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿ ದರ ಕಡಿಮೆ ಮಾಡಿದೆ. ಈ ಕಾರಣದಿಂದ ಭಾರತೀಯ ಷೇರುಪೇಟೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಷೇರು ಪೇಟೆ ಅಲ್ಲೋಲ ಕಲ್ಲೋಲವಾಗಿದೆ ಎಂದೇ ಹೇಳಬಹುದು. ಹಾಗಿದ್ರೆ, ಇಂದು ಮಾರುಕಟ್ಟೆಯಲ್ಲಿ ಯಾವೆಲ್ಲಾ ಷೇರುಗಳು ನಷ್ಟ ಕಂಡಿವೆ ಎನ್ನುವುದನ್ನು ತಿಳಿಯೋಣ ಬನ್ನಿ.
ಹೌದು,ಇಂದು ನಿಫ್ಟಿ ಸೂಚ್ಯಂಕ ಸುಮಾರು 240 ಅಂಕಗಳ ಕುಸಿತ ಕಂಡಿದೆ. ಸೆನ್ಸೆಕ್ಸ್ ಅದೇ ರೀತಿಯಲ್ಲಿ ಕಡಿಮೆಯಾಗಿ 1,000 ಅಂಕಗಳನ್ನು ಕಳೆದುಕೊಂಡಿದೆ. ಈ ಎರಡು ಪ್ರಮುಖ ಸೂಚ್ಯಂಕಗಳು ಶೇ. 1ಕ್ಕಿಂತಲೂ ಹೆಚ್ಚು ನಷ್ಟವನ್ನು ಷೇರು ಮಾರಕಟ್ಟೆಯಲ್ಲಿ ಕಂಡಿವೆ. 17, 18 ರಂದು ನಡೆದ ಫೆಡರಲ್ ಸಭೆಯಲ್ಲಿ ಅಮೆರಿಕದಲ್ಲಿ ಬಡ್ಡಿದರವನ್ನು ಶೇ. 4.25 ರಿಂದ 4.50 ಶ್ರೇಣಿಗೆ ಇಳಿಸಲಾಗಿದೆ.

ರೂಪಾಯಿ ಮೌಲ್ಯ ದ ಮೇಲೆ ಡಾಲರ್ ಪ್ರಭಾವ
ಅಮೆರಿಕದ ಡಾಲರ್ ಎದುರು ರುಪಾಯಿ ಕರೆನ್ಸಿಯ ಮೌಲ್ಯ ಕುಸಿದಿದೆ ಎಂದೇ ಹೇಳಬಹುದು. ಒಂದು ಡಾಲರ್ಗೆ 85.3 ರೂಪಾಯಿ ಮಟ್ಟಕ್ಕೆ ಇಳಿಕೆಯಾಗಿದೆ. ವಿದೇಶೀ ಹೂಡಿಕೆಗಳಿಗೆ ಇದು ಅನುವು ಮಾಡಿಕೊಟ್ಟಿರಬಹುದು.ಕಳೆದ ಮೂರು ಸೆಷನ್ಗಳಲ್ಲಿ 8,000 ಕೋಟಿ ರೂ ನಷ್ಟು ಇದ್ದು, ವಿದೇಶೀ ಹೂಡಿಕೆಗಳು ಹೊರ ಬಂದಿವೆ.
ಇನ್ನೂ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಲಿಸ್ಟೆಡ್ ಕಂಪನಿಗಳು ನಷ್ಟ ಕಂಡ ಮಾರುಕಟ್ಟೆ ಬಂಡವಾಳ 13 ಲಕ್ಷ ಕೋಟಿ ರೂ ನಷ್ಟವಾಗಿದೆ.
ಖಾಸಗಿ ಕಂಪನಿಗಳ ಆದಾಯ ಕುಸಿತ
ಭಾರತದ ಕಂಪನಿಗಳ ಮೂರು ತಿಂಗಳ ಹಣಕಾಸು ವರದಿಗಳು ಅಷ್ಟು ಪ್ರಭಾವ ಬೀರಿಲ್ಲ. ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್ಗಳಲ್ಲಿ ವರದಿಗಳು ಬಂದಿವೆ. ಇವು ಒಟ್ಟಾರೆ ಮಾರುಕಟ್ಟೆಯ ಬಲವನ್ನು ದುರ್ಬಲ ಗೊಂಡಿವೆ.ಹೀಗಾಗಿ, ಹೂಡಿಕೆದಾರರು ಷೇರುಗಳನ್ನು ಮಾರುವುದನ್ನು ಮಾಡಿರಬಹುದು.
ಷೇರು ಮಾರುಕಟ್ಟೆ ಋಣಾತ್ಮಕವಾಗಿ ಸ್ಪಂದಿಸಿದ್ದು ಹೇಗೆ ?
ಫೆಡರಲ್ ರಿಸರ್ವ್ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ ಮಾಡಿದ್ದು ನಿರೀಕ್ಷಿತವೇ ಆಗಿದ್ದರೂ 2025ರಲ್ಲಿ ಅದು ಹೆಚ್ಚಿನ ಬಡ್ಡಿದರ ಕಡಿತ ಮಾಡುವುದಿಲ್ಲ ಎನ್ನುವ ಸುಳಿವನ್ನು ನೀಡಿರುವುದು ಸಹ ಅಚ್ಚರಿಯೆಂದೇ ಹೇಳಬಹುದು. ಇನ್ನೂ ಬಡ್ಡಿದರ ಇಳಿಕೆಯನ್ನು ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಹೆಚ್ಚಿಗೆ ಮಾಡಬಹುದು ಎಂಬ ನೀರಿಕ್ಷೆಯನ್ನು ಹೊಡುಕೆದಾರರು ಇಟ್ಟುಕೊಂಡಿದ್ದಾರೆ. ವರದಿಗಳ ಪ್ರಕಾರ 2025ರಲ್ಲಿ ನಾಲ್ಕು ಬಾರಿ ಬಡ್ಡಿದರ ಕಡಿತ ಆಗಬಹುದು ಎಂದು ಎಣಿಸಲಾಗಿತ್ತು. ಆದರೆ, ಫೆಡರಲ್ ರಿಸರ್ವ್ ಸಂಸ್ಥೆಯು ಮುಂದಿನ ವರ್ಷ ಎರಡು ಬಾರಿ ಮಾತ್ರವೇ ಬಡ್ಡಿದರ ಇಳಿಸುವುದಾಗಿ ಪರೋಕ್ಷವಾಗಿ ಸುಳಿವು ನೀಡಿದೆ. ಈ ನಿರ್ಧಾರಗಳು ಕ್ವಿಟಿ ಹೂಡಿಕೆದಾರರನ್ನು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಷೇರು ಮಾರುಕಟ್ಟೆ ಕುಸಿದಿರಬಹುದು.
ಯಾವೆಲ್ಲಾ ವಲಯ ಷೇರು ಹೆಚ್ಚು ಕುಸಿತ?
ಬಹುತೇಕ ಎಲ್ಲಾ ವಲಯಗಳಲ್ಲೂ ಸಹ ಕುಸಿತ ಕಂಡುಬಂದಿದೆ. ನಿಫ್ಟಿ ಬ್ಯಾಂಕ್, ಫೈನಾನ್ಷಿಯಲ್ ಸರ್ವೀಸಸ್, ಐಟಿ ಮತ್ತು ಕನ್ಸೂಮರ್ ಡ್ಯೂರೇಬಲ್ಸ್ ಪರ್ಸೆಂಟ್‌ನಷ್ಟು ಕುಸಿದಿದೆ. ಮತ್ತೊಂದೆಡೆ ನಿಫ್ಟಿ ಫಾರ್ಮಾ ಸೂಚ್ಯಂಕ ಶೇಕಡಾ 2ರಷ್ಟು ಏರಿಕೆಗೊಂಡಿದೆ.ಹೀಗೆ ಅಮೆರಿಕದಲ್ಲಿ ಬಡ್ಡಿದರ ಪರಿಷ್ಕರಣೆ ಬಳಿಕ ಭಾರತದ ಷೇರು ಮಾರುಕಟ್ಟೆ ಕುಸಿಯುತ್ತಿವೆ.


Click it and Unblock the Notifications