ಬದುಕಿನಲ್ಲಿ ಪ್ರತಿದಿನ ಮಹಿಳೆಯ ಪಾತ್ರ ಇದ್ದೇ ಇರುತ್ತದೆ.ಸಮಾಜದಲ್ಲಿ ಕುಟುಂಬದ ಹಲವು ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸುಂದರವಾಗಿ ಮುನ್ನಡೆಸುವ ಶಕ್ತಿ ಮಹಿಳೆಗಿದೆ. ಅಂತಹ ಎಲ್ಲಾ ಮಹಿಳೆ ಮಹಿಳಾ ಮಣಿಗಳಿಗೆ ʼನಿಮ್ಮʼ ದಿನದ ಶುಭಾಶಯಗಳು.
ಹೌದು, ಸಮಾಜದಲ್ಲಿ ಮಹಿಳೆಯ ಪಾತ್ರ ಆರಂಭವಾಗುವುದು ಅವಳ ಮನೆಯಿಂದಲೇ. ಪ್ರತಿನಿತ್ಯವು ಅವಳಿಗೆ ಬಿಡುವಿಲ್ಲದೆ ಎಲ್ಲರ ಬಗ್ಗೆ ಕಾಳಜಿ ಮಾಡುತ್ತಾಳೆ. ನಿರ್ಮಲ ಮನಸ್ಸು, ಸಹಜತೆ, ಕರುಣಾ ಮನೋಭಾವ ಎಲ್ಲವನ್ನು ಅನುಸರಿಸಿಕೊಂಡು ಜೀವನ ನಡೆಸುವ ಅವಳ ಸ್ಥಾನ ತುಂಬಲು ಯಾರಿಂದಲ್ಲೂ ಸಾಧ್ಯವಿಲ್ಲ. ಈಕೆಯ ಸಾಧನೆ ಮನೆಗೆ ಮಾತ್ರ ಸಮೀತವಾಗಿಲ್ಲ ಪ್ರತಿಯೋಂದು ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿ ಇತರರಿಗೆ ಮಾದರಿಯಾಗಿದ್ದಾಳೆ. ಇಂತಹ ಮಹಿಳೆಯರ ಶಕ್ತಿ, ಅವರ ಕೊಡುಗೆ ಮತ್ತು ಹಕ್ಕುಗಳನ್ನು ಆಚರಿಸಲು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇನ್ನು ಇಂತಹ ಶುಭ ಸಂದರ್ಭದಲ್ಲಿ ನಿಮ್ಮ ತಾಯಿ, ಹೆಂಡತಿ, ಸಹೋದರಿಯರಿಗೆ ಅಥವಾ ಜೀವನದಲ್ಲಿವಿಶೇಷವಾದ ಮಹಿಳೆ,ಸಹೋದ್ಯೋಗಿಗೆ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

ಅಕ್ಕನಾಗಿ, ತಂಗಿಯಾಗಿ, ತಾಯಿಯಾಗಿ, ಹೆಂಡತಿಯಾಗಿ, ಅತ್ತೆಯಾಗಿ ತನ್ನ ಪಾತ್ರವನ್ನು ನಿರ್ವಹಿಸಿಕೊಂಡು ಪ್ರತಿ ದಿನವು ಕಳೆಯುತ್ತಾಳೆ. ಒಂದು ಜೀವಕ್ಕೆ ಜೀವ ನೀಡಿ ಅದರ ಬೆಳವಣೆಗೆಗೆ ಆಧಾರದ ದೀಪವಾಗಿ ಸಹಾಯಕಾರಿಯಾಗುವ ಮಹಿಳೆಗೆ ನೀವವು ಈ ರೀತಿಯಾಗಿ ಶುಭಾಶಯವನ್ನು ತಿಳಿಸಿ
ನೀವು ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದಿಗೂ ಕೃತಜ್ಞ. ನಿಮ್ಮ ಶಕ್ತಿಯು ನನಗೆ ಸದಾ ಪ್ರೇರಣೆ ಆಗಿದೆ. ನಿಮ್ಮ ದಿನ ಶುಭವಾಗಲಿ ಎಂದು ಶುಭಾಶಯ ತಿಳಿಸಿ
ಅಮ್ಮ... ನಿರ್ಮಲ ಪ್ರೀತಿ, ಕಾಳಜಿ ತೋರಿದ ನಿಮಗೆ ನಾನು ಎಂದೆಂದೂ ಚಿರಕೃತಜ್ಞ. ವಿಶ್ವ ಮಹಿಳಾ ದಿನದ ಶುಭಾಶಯಗಳು!
ಅಮ್ಮನ ಸ್ಥಾನ ತುಂಬಿದ ಅಕ್ಕ. ನಿಮ್ಮಂತಹ ಸಹೋದರಿಯನ್ನು ಪಡೆದ ನಾನೇ ಧನ್ಯ. ಮಹಿಳಾ ದಿನಾಚರಣೆಯ ಶುಭಾಶಯಗಳು! ಎಂದು ನಿಮ್ಮ ಅಕ್ಕನಿಗೆ ಶುಭಾಶಯ ತಿಳಿಸಬಹುದು.
ಮಗು ಮನಸ್ಸಿನ ತಂಗಿ, ನಿನ್ನೊಂದಿಗಿರುವ ಪ್ರತಿಕ್ಷಣವೂ ಸಿಹಿ. ಮಹಿಳಾ ದಿನಾಚರಣೆಯ ಶುಭಾಶಯಗಳು!"ಮಹಿಳೆ ಬೆಳಕಿನ ದಾರಿ ದೀಪ. ಮಹಿಳೆಯಿಂದಲೇ ಎಲ್ಲೆಡೆ ಶಾಂತಿ ನೆಲೆಸುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
ಮಹಿಳೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ. ನಿಮಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು
ಮಹಿಳೆ ನಿನಗೆ ಸರಿ ಸಾಟಿ ಯಾವುದು ಇದೆ ಈ ಪ್ರಪಂಚದಲ್ಲಿ ನಿನ್ನ ದಿನದ ಶುಭಾಶಯಗಳು
ತಾಯ್ತನದಿಂದ ಹಿಡಿದು ಹೆಂಡತಿಯ ತನಕ, ಸಹೋದರಿಯಿಂದ ಹಿಡಿದು ಮಗಳವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ 'ಮಹಿಳೆ'ಯ ಪಾತ್ರ ಅಗಾಧ ಮಹಿಳಾ ದಿನಾಚರಣೆಯ ಶುಭಾಶಯಗಳು.
ನನ್ನ ಬದುಕಿಗೆ ಶಕ್ತಿ ತುಂಬಿದ ಪತ್ನಿ... ಬಿದ್ದಾಗ ಮೇಲಕ್ಕೆತ್ತುವ, ನೊಂದಾಗ ಧೈರ್ಯ ತುಂಬುವ ಕರುಣಾಮಯಿ. ನನ್ನ ಬದುಕಿಗೆ ಅರ್ಥ ತಂದ ನಿನಗೆ ಹ್ಯಾಪಿ ವುಮೆನ್ಸ್ ಡೇ!"
ಅಪ್ಪನಾಗಿ ಸಂಭ್ರಮಿಸುವಂತೆ ಮಾಡಿದ ಮಗಳು. ನನ್ನ ಬದುಕಿನ ದೊಡ್ಡ ಉಡುಗೊರೆ ನೀನೇ... ಮಹಿಳಾ ದಿನದ ಶುಭಾಶಯಗಳು!
ಅಂತರರಾಷ್ಟ್ರೀಯ ಮಹಿಳಾ ದಿನದ ಮಹತ್ವ
ಅಂತಾರಾಷ್ಟ್ರೀಯ ಮಹಿಳಾ ದಿನವು ಪ್ರಪಂಚಾದ್ಯಾಂತ ಮಹಿಳೆಯರ ಸಾಧನೆಗಳನ್ನು ಗೌರವಿಸಲು ಮತ್ತು ಲಿಂಗ ಸಮಾನತೆಗಾಗಿ ಹೋರಾಡಲು ಪ್ರೇರಣೆಯಾಗುತ್ತದೆ. 1995ರಲ್ಲಿ ಬೀಜಿಂಗ್ ಘೋಷಣೆ ಮತ್ತು ಕ್ರಿಯಾ ವೇದಿಕೆಯ 30ನೇ ವಾರ್ಷಿಕೋತ್ಸವವು, ಅದರ ಮಾದರಿಯಲ್ಲಿಯೇ, 189 ಸರ್ಕಾರಗಳಿಂದ ಅನುಮೋದಿತ ಆದ ಐತಿಹಾಸಿಕ ಕಾರ್ಯಸೂಚಿಯಾಗಿದೆ. ಈ ಘೋಷಣೆ ಅವುಗಳನ್ನು ಸಕಾರಾತ್ಮಕವಾಗಿ ಮಹಿಳೆಯರು ಪ್ರಗತಿಪರವಾಗಿ ಸಾಗಿಸಲು ಸಹಾಯಕವಾಗಿದೆ.ಲಿಂಗ ಆಧಾರಿತ ಹಿಂಸೆ, ಆರ್ಥಿಕ ಅಸಮಾನತೆಗಳು, ಮತ್ತು ರಾಜಕೀಯ ಪ್ರಾತಿನಿಧ್ಯದ ಕೊರತೆ ಮುಂತಾದವುಗಳನ್ನು ಮಹಿಳೆಯರು ಎದುರಿಸುತ್ತಿದ್ದಾರೆ.
ತಾಯ್ತನದಿಂದ ಹಿಡಿದು ಹೆಂಡತಿಯ ತನಕ, ಸಹೋದರಿಯಿಂದ ಹಿಡಿದು ಮಗಳವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ 'ಮಹಿಳೆ'ಯ ಪಾತ್ರ ಅಗಾಧವಾಗಿದೆ


Click it and Unblock the Notifications