ಇಂದಿನ ಹೂಡಿಕೆಯೇ ನಾಳಿನ ಸಂಪತ್ತು ಅನ್ನೂವಂತೆ ನಾವು ಕಷ್ಟ ಪಟ್ಟು ದುಡಿದ ದುಡ್ಡನ್ನು ಇಂತಿಷ್ಟು ಉಳಿಸಿದರೆ ಭವಿಷ್ಯ ಉಜ್ವಲವಾಗುತ್ತದೆ ಜೊತಗೆ ನಿಮ್ಮ ಆರ್ಥಿಕ ಸಂಪತ್ತು ಕೂಡ ವೃದ್ದಿಯಾಗುತ್ತದೆ. ಆದರೆ ನಿಮ್ಮ ಹೂಡಿಕೆಯ ಆಯ್ಕೆ ಉತ್ತಮವಾಗಿರಬೇಕಷ್ಟೇ.
ಹೌದು,ಸಣ್ಣ ಮೊತ್ತದ ಮೂಲಕ ಹೂಡಿಕೆಯನ್ನು ಮಾಡಿದ್ದರೆ ಮುಂದಿನ ಭವಿಷ್ಯವು ಸುಖಕರವಾಗಿರುತ್ತದೆ. ಅಂದರೆ ನೀವು ಹೂಡಿಕೆ ಮಾಡುವ ಮೊದಲು ಸರಿಯಾದ ಹೂಡಿಕೆ ವಿಧಾನದಲ್ಲಿ ಹೂಡಿಕೆಯನ್ನು ಮಾಡಿದ್ದರೆ ನೀವು 49 ಲಕ್ಷದಷ್ಟು ಹಣವನ್ನು ಪಡೆದುಕೊಳ್ಳವುದು ಅದು ಹೇಗೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ನೀವು ತಿಂಗಳಿಗೆ ಕೇವಲ ಐನ್ನೂರು(500) ರೂಪಾಯಿಗಳನ್ನು ಹೂಡಿಕೆಯನ್ನು ಮಾಡಿದ್ದರೆ ನಿಮ್ಮಗೆ ಸುಮಾರು 49 ಲಕ್ಷದಷ್ಟು ಹಣವನ್ನು ಪಡೆದುಕೊಳ್ಳಬಹುದು.ಆದ್ರೆ ನೀವು ಇದಕ್ಕಾಗಿ ದೀರ್ಘಕಾಲದವರೆಗೆ ಹೂಡಿಕೆ ಮಾಡಬೇಕು ಅಷ್ಟೇ.
49 ಲಕ್ಷವನ್ನು ಪಡೆಯುವುದು ಹೇಗೆ..?
ನೀವು ಒಂದು ತಿಂಗಳಲ್ಲಿ 500 ರೂಪಾಯಿಯನ್ನು ಉಳಿತಾಯವನ್ನು ಮಾಡಬೇಕಾಗುತ್ತದೆ. ನೀವು ಇದೇ 500 ರೂಪಾಯಿಂದ 49 ಲಕ್ಷ ಮಾಡಬೇಕು ಅಂದ್ರೆ ನೀವು 40 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕು.ಇದನ್ನ ನೀವು ಮಕ್ಕಳ ಪಾಕೆಟ್ ಮನಿಯಿಂದಲೂ ಕೂಡ ಹಣವನ್ನು ಉಳಿಸಿ ಉಳಿತಾಯವನ್ನು ಮಾಡಬಹುದು.
ನೀವು ಎಸ್‌ಐಪಿನಲ್ಲಿ ತಿಂಗಳಿಗೆ 500 ರೂ ಹೂಡಿಕೆ ಮಾಡಿದ್ದರೆ 40 ವರ್ಷಗಳಿಗೆ ಒಟ್ಟು 2,40,000 ರೂ ಹೂಡಿಕೆ ಮಾಡ್ತೀರಿ. ಈಗ, SIP ನಲ್ಲಿ ನಿಮ್ಮಗೆ ಸರಾಸರಿ ಶೇ. 12 ಲಾಭ ಸಿಗುತ್ತೆ ಅಂತ ಅಂದುಕೊಂಡರೆ ಬಡ್ಡಿಯಿಂದಲೇ 46,56,536 ರೂ. ಲಾಭ ಸಿಗುತ್ತದೆ. 40 ವರ್ಷಗಳ ನಂತರ, ನೀವು ಹಾಕಿದ ಹಣ ಮತ್ತು ಬಂದ ಲಾಭ ಸೇರಿಸಿದ್ರೆ ಒಟ್ಟು 48,96,536 ರೂ ಅಂದ್ರೆ ಸುಮಾರು 49 ಲಕ್ಷ ಹಣ ನಿಮ್ಮ ಕೈಗೆ ಬರುತ್ತದೆ.
SIP ಮೂಲಕ ದೊಡ್ಡ ಮೊತ್ತ ಮಾಡ್ಬೇಕು ಅಂದ್ರೆ, ನೀವು ಸರಿಯಾಗಿ ಹೂಡಿಕೆ ಮಾಡ್ತಾ ಇರಬೇಕುತ್ತದೆ. ಯಾವುದೇ ಕಾರಣಕ್ಕೂ ನೀವು ಹೂಡಿಕೆಯನ್ನು ಮಾಡವುದನ್ನು ನಿಲ್ಲಿಸಬಾರದು. ದೀರ್ಘಕಾಲದವರೆಗೆ ಪ್ರತೀ ತಿಂಗಳು ಹಣ ಹೂಡಿಕೆ ಮಾಡುತ್ತ ಬಂದಿದ್ದರೆ ದೊಡ್ಡ ಮೊತ್ತದ ಹಣವನ್ನು ನನೀವು ನಿಮ್ಮದಾಗಿಸಿಕೊಳ್ಳಬಹುದು.
SIP ಮಾರುಕಟ್ಟೆಯಲ್ಲಿ ಯಾವಾಗಲೂ ಏರಿಳಿತಗಳು ಸಾಮಾನ್ಯವಾಗಿ ಇದ್ದೇ ಇರುತ್ತೆ. ಮಾರ್ಕೆಟ್ ಕಡಿಮೆ ಆಯ್ತು ಅಂತ ಭಯಪಟ್ಟು SIP ಹೂಡಿಕೆಯನ್ನು ನಿಲ್ಲಿಸಬಾರದು.ಮಾರ್ಕೆಟ್ ಕಡಿಮೆ ಆದಾಗ ನಿಮಗೆ ಹೆಚ್ಚು ಯೂನಿಟ್ಸ್ ಸಿಗುತ್ತೆ, ಮತ್ತೆ ಮಾರ್ಕೆಟ್ ಹೆಚ್ಚಾದಾಗ ಇದರಿಂದ ಒಳ್ಳೆ ಲಾಭವನ್ನು ನೀವು ಪಡೆದುಕೊಳ್ಳಬಹುದು.
ಮ್ಯೂಚುಯಲ್ ಫಂಡ್ ಗಳಲ್ಲಿ ಎಲ್ಲಾ SIP ಫಂಡ್ ಗಳು ಒಂದೇ ತರವಾಗಿ ಇರುವುದಿಲ್ಲ.ಆದ್ದರಿಂದ ಎಲ್ಲಾ ಅಂಶವನ್ನು ಗಮನದಲ್ಲಿ ಇಟ್ಟುಕೋಂಡು ಸೂಕ್ತವಾದ ಹೂಡಿಕೆಯ ವಿಧಾನವನ್ನು ಆರಿಸಿಕೊಳ್ಳವುದು ಉತ್ತಮ. ಒಂದೇ ವೇಳೆ ನಿಮ್ಮಗೆ ಯಾವುದೇ ಅನುಮಾನಗಳು ಇದ್ದರೆ ಆರ್ಥಿಕ ತಜ್ಞರರುಗಳ ಸಲಹೆಯನ್ನು ಪಡೆದುಕೊಳ್ಳಬಹುದು.
SIP ಒಂದು ಮಾರುಕಟ್ಟೆಗೆ ಸಂಬಂಧಿಸಿದ ಯೋಜನೆ.ಇಲ್ಲಿ ಶೇ.12 ಸರಾಸರಿ ಲಾಭದ ಮೇಲೆ ಲೆಕ್ಕ ಹಾಕಲಾಗಿದೆ. ಕೆಲವೊಮ್ಮೆ ಶೇ.14 ಅಥವಾ ಶೇ.15 ಲಾಭವೂ ಸಿಗಬಹುದು, ಅವಾಗ 500 ಹೂಡಿಕೆಯಿಂದ ಇನ್ನೂ ದೊಡ್ಡ ಮೊತ್ತ ಸಿಗಬಹುದು. ಸರಿಯಾಗಿ ಹೂಡಿಕೆ ಮಾಡಿದ್ರೆ ಒಳ್ಳೆ ಆದಾಯವನ್ನು ಪಡೆದುಕೊಳ್ಳಬಹುದು.
Disclaimer: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗುತ್ತಿದೆ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ನಾವು ಜವಾಬ್ದಾರರಲ್ಲ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications