ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ತಾಳ್ಮೆಯ ನಾಯಕತ್ವ ಹಾಗೂ ಪಂದ್ಯದ ನಿರ್ಣಾಯಕ ಹಂತದಲ್ಲಿ ಗೆಲುವನ್ನು ತನ್ನ ಕಡೆ ತಿರುಗಿಸುವಲ್ಲಿ ಚಾಕಚಕ್ಯತೆ ಹೊಂದಿದ್ದಾರೆ ಎಂಬ ಮಾತನ್ನು ಕ್ರಿಕೆಟ್ ಜಗತ್ತಿನ ಬಹುತೇಕ ಎಲ್ಲರೂ ಒಪ್ಪುತ್ತಾರೆ. ಯಾವುದೇ ರೀತಿಯ ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳದೆ, ಕಠಿಣ ಸಮಯದಲ್ಲಿ ಸಂಯಮ ಕಳೆದುಕೊಳ್ಳದೆ ನಾಯಕತ್ವವನ್ನು ನಡೆಸುವುದು ಧೋನಿ ಅವರ ವಿಶೇಷತೆ ಎನ್ನಬಹುದು.
ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಹಲವಾರು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ಧೋನಿ ಕೂಡ ಚುರುಕಿನ ಬುದ್ಧಿಗೆ ಹೆಸರುವಾಸಿ. ಅವರು ನಿಖರವಾಗಿ ಮಾಡುತ್ತಿರುವ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಮತ್ತು ಇದು ವೈಯಕ್ತಿಕ ಹಣಕಾಸು ಮತ್ತು ಹೂಡಿಕೆಯ ಕುರಿತು M.S ಧೋನಿ ಅವರ ಆಲೋಚನೆಗಳ ಬಗೆಗಿನ ನಿದರ್ಶನ ಕೂಡ ಆಗಿದೆ.

ಆದರೆ ಇಲ್ಲಿ ಆರ್ಥಿಕ ವಿಚಾರದಲ್ಲಿ ಧೋನಿಯಂತೆ ಹಣ ಹೂಡಿಕೆ ಮಾಡಿ ಎನ್ನುವುದರ ಹಿಂದಿನ ಮರ್ಮವೇನು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಸರಳವಾಗಿದೆ. ಅತ್ಯಂತ ಜಾಣ್ಮೆ ಹಾಗೂ ಸಂಯಮದ ಹೂಡಿಕೆ ಮಾಡಿ ಎಂಬುವುದೇ ಸರಳ ಭಾಷೆಯ ಅರ್ಥಗಾರಿಕೆಯಾಗಿದೆ. ಧೋನಿ ಚುರುಕಿನ ಬುದ್ಧಿಗೆ ಹೆಸರುವಾಸಿ. ಇತ್ತೀಚಿಗೆ ವೈಯಕ್ತಿಕ ಹಣಕಾಸು ಮತ್ತು ಹೂಡಿಕೆಯ ಕುರಿತು M.S ಧೋನಿ ಅವರ ಆಲೋಚನೆಗಳ ಬಗೆಗಿನ ಮಾತಿನ ವಿಡಿಯೋವೊಂದು ತುಂಬಾ ವೈರಲ್ ಆಗಿತ್ತು.
ಏನಿದು ಕಾರ್ಯಕ್ರಮ? ಧೋನಿ ಆಡಿದ ಮಾತೇನು?
ಇತ್ತೀಚಿಗೆ ಪ್ರಭಾವ್ 24 ಪ್ಯಾನೆಲ್ ಚರ್ಚೆಯಲ್ಲಿ ವ್ಯಕ್ತಿಯೊಬ್ಬ ಧೋನಿ ಬಳಿ ಆರ್ಥಿಕ ಸಲಹೆ ಮಾಡಿದ್ದರು. ಈತನಕ ಜೀವನದಲ್ಲಿ ನಿಮಗೆ ಲಭಿಸಿದ ಅತ್ಯಂತ ಉತ್ತಮ ಆರ್ಥಿಕ ಸಲಹೆ ಯಾವುದು ಎಂದು ಚರ್ಚೆಯ ವೇಳೆ ವ್ಯಕ್ತಿಯೊಬ್ಬ ಧೋನಿ ಬಳಿ ಪ್ರಶ್ನೆ ಮಾಡಿದ್ದ. ಈ ವೇಳೆ ಪ್ರತಿಕ್ರಿಯೆ ನೀಡಿದ ಧೋನಿ, ತಂದೆ ಹೇಳುತ್ತಿದ್ದ ಸ್ಥಿರ ಠೇವಣಿ (Fixed Deposits)ಗಳ ಬಗ್ಗೆ ನಾನು ಹೇಳುವುದಿಲ್ಲ. ಯಾಕೆಂದರೆ ನಿಮಗೆ ಗೊತ್ತಿರುವಂತೆ ಹಣದುಬ್ಬರ ಸೇರಿದಂತೆ ಹಲವು ಕಾರಣಗಳಿಂದ ನೀವು ಹಣವನ್ನು ಕಳೆದುಕೊಳ್ಳುತ್ತೀರಿ ಎಂದು ಧೋನಿ ಹೇಳಿದರು.
ಗುಣಾಕಾರಕ್ಕಾಗಿ ಹುಡುಕಾಟ ಬೇಡ ಎಂದ ಮಾಹಿ!
ನಿಮ್ಮ ಹಣವು ಬೆಳೆಯಬೇಕಾದರೆ, ಗುಣಾಕಾರವನ್ನು ಹುಡುಕಬೇಡಿ. ಗುಣಿಸಿದಲ್ಲೆಲ್ಲಾ ಅಪಾಯವಿದೆ, ಆದ್ದರಿಂದ, ನೀವು ಸಂಪ್ರದಾಯವಾದಿಯಾಗಿದ್ದರೆ, ಹಣವು ಒಳ್ಳೆಯದು. ಆದರೆ ಜನರು ಗುಣಾಕಾರಕ್ಕಾಗಿ ಹುಡುಕಲು ಪ್ರಾರಂಭಿಸಿದಾಗ ಇಡೀ ಸಮಸ್ಯೆಯಾಗುತ್ತದೆ. ಆದ್ದರಿಂದ ಪ್ರತಿಯೊಂದಕ್ಕೂ ಪರ ಮತ್ತು ವಿರೋಧವಿದೆ. ಆದ್ದರಿಂದ ಪ್ರತಿಫಲಗಳು ಹೆಚ್ಚಾದಾಗಲೆಲ್ಲಾ ಅಪಾಯವೂ ಅಧಿಕವಾಗಿರುತ್ತದೆ.
ಆದ್ದರಿಂದ, ನೀವು ಅದರೊಂದಿಗೆ ಆರಾಮದಾಯಕವಾಗಬೇಕು. ನೀವು ಸರಿಯಾಗಿ ಹೂಡಿಕೆ ಮಾಡಿದರೆ, ನೀವು ಯಾವಾಗಲೂ ನಿಮ್ಮೊಂದಿಗೆ ಹಣವನ್ನು ಹೊಂದಿರುತ್ತೀರಿ ಮತ್ತು ನೀವು ಹಣವನ್ನು ಬೆಳೆಯಲು ಬಯಸಿದರೆ, ನೀವು ಒಳ್ಳೆಯವರಾಗಿರುತ್ತೀರಿ ಎಂದು ಹೂಡಿಕೆ ಹಾಗೂ ಹಣ ಹೆಚ್ಚಿಸುವ ಕುರಿತು ಧೋನಿ ಆಡಿದ ಮಾತುಗಳು ಸದ್ಯ ಎಲ್ಲರನ್ನೂ ತಲುಪುತ್ತಿದೆ.
Fixed Deposits ಬಗ್ಗೆ ಧೋನಿ ಒಲ್ಲದ ಮನಸ್ಸು!
ಎಲ್ಲರಿಗೂ ತಿಳಿದಿರುವಂತೆ Fixed Deposits ಅಥವಾ ಸ್ಥಿರ ಠೇವಣಿ ಏನೆಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಇಂತಿಷ್ಟು ಮೊತ್ತವನ್ನು ಇಂತಿಷ್ಟು ಅವಧಿಗೆ ಠೇವಣಿ ರೂಪದಲ್ಲಿ ಇಡುವುದೇ ಸ್ಥಿರ ಠೇವಣಿ ಎಂದು ಸರಳ ಭಾಷೆಯಲ್ಲಿ ಹೇಳಬಹುದು. ಆದರೆ ಒಂದು ವೇಳೆ ಒಂದು ಬಾರಿ ಸ್ಥಿರ ಠೇವಣಿ ಇಟ್ಟ ಬಳಿಕ ಹಣವನ್ನು ಹಿಂಪಡೆಯಲು ಬಯಸಿದರೆ ಅದರಿಂದ ಹೂಡಿಕೆದಾರನಿಗೆ ನಿಯಮದ ಪ್ರಕಾರ ನಷ್ಟ ಉಂಟಾಗುತ್ತದೆ.
ಇನ್ನು ನಾವು ಇಡುವ ಠೇವಣಿ ಹಾಗೂ ಅದರ ಅವಧಿಗೆ ಅನುಸಾರವಾಗಿ ಬಡ್ಡಿದರವು ನಿರ್ಣಯವಾಗುತ್ತದೆ. ಆದರೆ ಧೋನಿಯ ಪ್ರಕಾರ ಹಣದುಬ್ಬರ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಸ್ಥಿರ ಠೇವಣಿ ಮಾಡುವುದು ಜಾಣ್ಮೆಯ ನಡೆಯಲ್ಲ ಎಂಬುದನ್ನು ಅವರು ಪರೋಕ್ಷವಾಗಿ ತಿಳಿಸಿದ್ದಾರೆ. ಒಂದು ಲೆಕ್ಕದಲ್ಲಿ ನೋಡಿದರೆ ಧೋನಿ ಹೇಳಿಕೆ ಸರಿಯಾಗಿಯೇ ಇದೆ. ಯಾಕೆಂದರೆ ಇಂದಿನ ಹಣದುಬ್ಬರದ ಯುಗದಲ್ಲಿ ಇಂದಿನ ಒಂದು ರೂ. ನಾಳೆಗೆ ಅದರ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿರುತ್ತದೆ. ಹಾಗಾಗಿ ಸ್ಥಿರ ಠೇವಣಿಯಲ್ಲಿ ನಾವು ಹೂಡಿಕೆ ಮಾಡಿದ ಮೊತ್ತ ಮುಂದಿನ ಹಲವು ವರ್ಷಗಳ ಬಳಿಕ ಅದರ ಮೌಲ್ಯವು ಕಡಿಮೆಯಾಗಿರುತ್ತದೆ ಎಂಬುದನ್ನು ಧೋನಿ ತಿಳಿಸಿದ್ದಾರೆ.


Click it and Unblock the Notifications