ಭಾರತದ ಷೇರು ಮಾರುಕಟ್ಟೆಯಲ್ಲಿ ಸೋಮವಾರ (ಡಿಸೆಂಬರ್ 21, 2020) ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿ ರುಪಾಯಿ ಕೊಚ್ಚಿಹೋಯಿತು. ಜಾಗತಿಕ ಪ್ರಭಾವದಿಂದಾಗಿ ಪ್ರಾಫಿಟ್ ಬುಕ್ಕಿಂಗ್ ಕಂಡುಬಂದಿದ್ದರ ಹಿನ್ನೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿತು. ಸೆನ್ಸೆಕ್ಸ್ 1407 ಪಾಯಿಂಟ್ ಕುಸಿದು, 45,554 ಪಾಯಿಂಟ್ ತಲುಪಿತು. ನಿಫ್ಟಿ 432 ಪಾಯಿಂಟ್ ಕುಸಿದು, 13328 ಪಾಯಿಂಟ್ ತಲುಪಿತು.
ಬಿಎಸ್ ಇ ಲಿಸ್ಟೆಡ್ ಷೇರುಗಳ ಮೌಲ್ಯ ಶುಕ್ರವಾರ 185 ಲಕ್ಷ ಕೋಟಿ ರುಪಾಯಿ ಇದ್ದದ್ದು, ಸೋಮವಾರದ ದಿನದ ಕೊನೆಗೆ 178 ಲಕ್ಷ ಕೋಟಿ ರುಪಾಯಿಗೆ ಕುಸಿದಿಸಿದೆ. ಬಿಎಸ್ ಇ ಸೂಚ್ಯಂಕದಲ್ಲಿ 473 ಸ್ಟಾಕ್ ಗಳು ಲೋವರ್ ಸರ್ಕ್ಯೂಟ್ ಕಂಡಿತು. ಅದರಲ್ಲಿ ಪ್ರೋಜೋನ್ ಇಂಟು, ಸ್ಪೈಸ್ ಜೆಟ್, ಗ್ರಾಫೈಟ್ ಇಂಡಿಯಾ, ವಿಪುಲ್, ಟಾಟಾ ಸ್ಟೀಲ್ ಪಿಪಿ ಮತ್ತು ಹಿಂದೂಸ್ತಾನ್ ಕಾಪರ್ ಮತ್ತಿತರ ಷೇರುಗಳು ಲೋವರ್ ಸರ್ಕ್ಯೂಟ್ ಕಂಡವು.

ಈ ಮಧ್ಯೆಯೂ ಎನ್ ಎಸ್ ಇಯಲ್ಲಿ 105 ಷೇರುಗಳು 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿವೆ. ವೊಲಟಾಲಿಟಿ ಇಂಡೆಕ್ಸ್ ಅಥವಾ VIX 21.74% ಏರಿಕೆ ಕಂಡು, 22.76% ತಲುಪಿತು. ಹೀಗೆ ದಿಢೀರನೆ ವೊಲಟಾಲಿಟಿ ಸೂಚ್ಯಂಕ ಏರಿಕೆ ಕಂಡುಬಂದಿರುವುದು ಮಾರುಕಟ್ಟೆಯಲ್ಲಿ ಕರಡಿ ಹಿಡಿತವನ್ನು ಸೂಚಿಸುತ್ತದೆ.
ಎನ್ ಎಸ್ ಇಯಲ್ಲಿ ಟಾಪ್ ಐದು ಷೇರುಗಳ ಸಂಪತ್ತು ಒಟ್ಟಾರೆಯಾಗಿ 1.95 ಲಕ್ಷ ಕೋಟಿ ರುಪಾಯಿ ಇಳಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ 13.47 ಲಕ್ಷ ಕೋಟಿಯಿಂದ 12.26 ಲಕ್ಷ ಕೋಟಿಗೆ, ಐಸಿಐಸಿಐ ಬ್ಯಾಂಕ್ 3.57 ಲಕ್ಷ ಕೋಟಿಯಿಂದ 3.39 ಲಕ್ಷ ಕೋಟಿಗೆ, ಎಚ್ ಡಿಎಫ್ ಸಿ ಬ್ಯಾಂಕ್ 7.77 ಲಕ್ಷ ಕೋಟಿಯಿಂದ 7.61 ಲಕ್ಷ ಕೋಟಿಗೆ, ಐಟಿಸಿ 2.64 ಲಕ್ಷ ಕೋಟಿಯಿಮ್ದ 2.46 ಲಕ್ಷ ಕೋಟಿಗೆ, ಎಚ್ ಡಿಎಫ್ ಸಿ 4.46 ಲಕ್ಷ ಕೋಟಿಯಿಂದ 4.31 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.


Click it and Unblock the Notifications