ಭಾರತದ ಷೇರು ಮಾರುಕಟ್ಟೆಯಲ್ಲಿ ಎರಡೇ ದಿನದಲ್ಲಿ ಹೂಡಿಕೆದಾರರ ಸಂಪತ್ತು 2.71 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಗಿದೆ. ಸತತವಾಗಿ ಎರಡನೇ ದಿನವಾದ ಮಂಗಳವಾರ (ಆಗಸ್ಟ್ 18, 2020) ಕೂಡ ಈಕ್ವಿಟಿ ಮಾರುಕಟ್ಟೆ ಏರಿಕೆ ಕಂಡಿತು. ಬಿಎಸ್ ಇ ಸೂಚ್ಯಂಕ 477.54 ಪಾಯಿಂಟ್ ಗಳ ಏರಿಕೆಯೊಂದಿಗೆ 38,528.32 ಪಾಯಿಂಟ್ ನೊಂದಿಗೆ ದಿನಾಂತ್ಯ ಕಂಡಿತು.
ಬಿಎಸ್ ಇ ಸೂಚ್ಯಂಕದಲ್ಲಿನ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 2,71,541.13 ಕೊಟಿ ಏರಿಕೆ ಕಂಡು, 1,54,11,199.53 ಕೋಟಿಯನ್ನು ತಲುಪಿತು. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಗ್ರಾಮೀಣ ಆರ್ಥಿಕತೆ ಚೇತರಿಕೊಳ್ಳುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಉತ್ಸಾಹಿತರಾಗಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳವಾರದಂದು ಸೆನ್ಸೆಕ್ಸ್ ನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಅತಿ ದೊಡ್ಡ ಗಳಿಕೆ ಕಂಡಿದೆ. ಆ ನಂತರ ಕೊಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಕಂಪೆನಿ ಷೇರುಗಳು ಸಹ ಗಳಿಕೆ ಕಂಡಿವೆ. ಬಿಎಸ್ ಇಯಲ್ಲಿ ಒಟ್ಟಾರೆ 1877 ಕಂಪೆನಿ ಷೇರುಗಳು ಏರಿಕೆ ಕಂಡಿದ್ದರೆ, 915 ಕಂಪೆನಿ ಷೇರು ಇಳಿಕೆಯಾಗಿವೆ. 139 ಕಂಪೆನಿ ಷೇರುಗಳಲ್ಲಿ ಯಾವ ಬದಲಾವಣೆ ಆಗಿಲ್ಲ.


Click it and Unblock the Notifications