ದುರ್ಬಲ ಜಾಗತಿಕ ಸೂಚನೆಗೆಳ ನಡುವೆ ಬುಧವಾರ ಭಾರತೀಯ ಷೇರುಪೇಟೆಯು ಕುಸಿತಕ್ಕೆ ಸಾಕ್ಷಿಯಾದ ಪರಿಣಾಮ ಬುಧವಾರ ಹೂಡಿಕೆದಾರರು ಬರೋಬ್ಬರಿ 3.57 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ದೇಶದ ಅನೇಕ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ಹೂಡಿಕೆದಾರರ ಮನೋಭಾವದ ಮೇಲೆ ಪರಿಣಾಮ ಬೀರುತ್ತಿವೆ. ಬುಧವಾರ (ಮಾರ್ಚ್ 18) ಸೆನ್ಸೆಕ್ಸ್ 562.34 ಪಾಯಿಂಟ್ ಇಳಿಕೆ ಕಂಡು 49,801.62 ಕ್ಕೆ ತಲುಪಿದೆ ಮತ್ತು ನಿಫ್ಟಿ 189.15 ಪಾಯಿಂಟ್ ಕುಸಿದು 14,721.30 ಕ್ಕೆ ತಲುಪಿದೆ.

ನಿನ್ನೆ ಸೆನ್ಸೆಕ್ಸ್‌ನಲ್ಲಿ ಒಎನ್‌ಜಿಸಿ ಶೇ 4.95 ರಷ್ಟು ಕುಸಿದಿದ್ದು, ಎನ್‌ಟಿಪಿಸಿ, ಸನ್ ಫಾರ್ಮಾ, ಎಸ್‌ಬಿಐ, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಆಟೋ ಮತ್ತು ಡಾ. ರೆಡ್ಡಿ ಲ್ಯಾಬ್ಸ್ ಕುಸಿತಕ್ಕೆ ಸಾಕ್ಷಿಯಾಗಿದೆ.
30 ಸೆನ್ಸೆಕ್ಸ್ ಘಟಕಗಳಲ್ಲಿ 26 ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಆದರೆ ಐಟಿಸಿ, ಇನ್ಫೋಸಿಸ್, ಟಿಸಿಎಸ್ ಮತ್ತು ಎಚ್‌ಡಿಎಫ್‌ಸಿ ಸೆನ್ಸೆಕ್ಸ್ ಗಳಿಕೆ ಶೇ 1.20 ರಷ್ಟು ಏರಿಕೆಯಾಗಿದೆ. ಷೇರುಪೇಟೆಯು ಋಣಾತ್ಮಕವಾಗಿದ್ದು, ಆಳವಾದ ತಿದ್ದುಪಡಿಯಾಗುತ್ತಿದೆ. ಆದರೆ ಗುರುವಾರ ಸೂಚ್ಯಂಕವು ಲಾಭದೊಂದಿಗೆ ಸಕಾರಾತ್ಮಕ ಆರಂಭವನ್ನು ತೆರೆಯುವ ನಿರೀಕ್ಷೆಯಿದೆ.


Click it and Unblock the Notifications