ಆಪಲ್ ತನ್ನ ಬಹುನಿರೀಕ್ಷಿತ ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಹೆಸರಿನ ಈವೆಂಟ್ ಮೂಲಕ 'ಐಫೋನ್ 13' ಸರಣಿಯನ್ನು ಲಾಂಚ್ ಮಾಡಿದೆ. ಹಲವು ಅಪ್‌ಡೇಟ್ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಟ್ಟಿರುವ ಐಫೋನ್ 13 ಹೆಚ್ಚು ಗಮನ ಸೆಳೆದಿದೆ.
ಇನ್ನೊಂದೆಡೆ ಐಫೋನ್ 13 ಬಿಡುಗಡೆ ಆದ ಬೆನ್ನಲ್ಲೇ ಐಫೋನ್ 12 ಫೋನ್ ಬೆಲೆ ಇಳಿಕೆ ಕಂಡಿದೆ. ಹೀಗಾಗಿ ಹೊಸ ಐಫೋನ್ 13 ಮತ್ತು ಬೆಲೆ ಇಳಿಕೆ ಕಂಡ ಐಫೋನ್ 12 ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್?..ಎನ್ನುವ ಗೊಂದಲ ಮೂಡಿದೆ.
ಹೊಸದಾಗಿ ಬಿಡುಗಡೆ ಆದ ಐಫೋನ್ 13 ಸರಣಿಯು ನಾಲ್ಕು ಐಫೋನ್ ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಆಗಿವೆ.
ಐಫೋನ್ 13 ಬೆಲೆ ಎಷ್ಟು?
ಹೊಸದಾಗಿ ಬಿಡುಗಡೆ ಆದ ಐಫೋನ್ 13 ಮೂರು ಸ್ಟೋರೇಜ್ ವೇರಿಯಂಟ್ ಮಾಡೆಲ್‌ಗಳ ಆಯ್ಕೆ ಪಡೆದಿದೆ. ಅವುಗಳ ಬೆಲೆಗಳು ಕ್ರಮವಾಗಿ 128 GB ವೇರಿಯಂಟ್ ಬೆಲೆ 79,900 ರೂ, 256GB ವೇರಿಯಂಟ್ ಬೆಲೆಯು 89,900 ರೂ ಮತ್ತು 512GB ವೇರಿಯಂಟ್ ಬೆಲೆ 99,900 ರೂ. ಗಳಾಗಿವೆ.
ಐಫೋನ್ 13 ಕ್ಯಾಮೆರಾ ಹೇಗಿದೆ?
ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ನೈಟ್ ಮೋಡ್ ಹಾಗೂ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ.
ಪ್ರೊಸೆಸರ್ ಮತ್ತು ಬ್ಯಾಟರಿ
ಐಫೋನ್ 13 ಫೋನ್ ಹೊಸ A15 ಬಯೋನಿಕ್ ಆರು ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಬ್ಯಾಟರಿ ಈ ಹಿಂದಿನ ಐಫೋನ್ 12 ಗಿಂತ ಬ್ಯಾಕ್‌ಅಪ್ ಗಿಂತ ಉತ್ತಮವಾಗಿದೆ. ಐಫೋನ್ 13 ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.
ಐಫೋನ್ 12 ಬೆಲೆ ಎಷ್ಟು?
ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕೆ ಸಜ್ಜಾಗುತ್ತಿದೆ. ಹಿಂದಿನ ರಿಯಾಯಿತಿಗಳಿಗೆ ಹೋಲಿಸಿದರೆ, ಈಗ ಫ್ಲಿಪ್‌ಕಾರ್ಟ್ ಐಫೋನ್ 12 ನಲ್ಲಿ 13,000 ರೂ.ಗಳವರೆಗೆ ರಿಯಾಯಿತಿ ಪಡೆಯುತ್ತಿದೆ. ಎಲ್ಲಾ ಶೇಖರಣಾ ರೂಪಾಂತರಗಳಲ್ಲಿ ಅಂದರೆ 64GB, 128GB ಮತ್ತು 256GB ಯಲ್ಲಿ ರಿಯಾಯಿತಿ ಲಭ್ಯವಿದೆ. ಇದರ ಹೊರತಾಗಿ, ಖರೀದಿದಾರರು ಹಳೆಯ ಐಫೋನ್ ಅನ್ನು ಹೊಸದರೊಂದಿಗೆ ಬದಲಾಯಿಸುತ್ತಿದ್ದರೆ, ಅವರು ರೂ 15,000 ವರೆಗೆ ರಿಯಾಯಿತಿ ಪಡೆಯಬಹುದು.
ಮತ್ತೊಂದೆಡೆ, ಐಫೋನ್ 12 ರ 64 ಜಿಬಿ ರೂಪಾಂತರವು ಶೇಕಡಾ 16ರಷ್ಟು ರಿಯಾಯಿತಿಯನ್ನು ಪಡೆಯುತ್ತಿದೆ. ಇದರ ಬೆಲೆ ರೂ ರೂ 66,999 ರಿಂದ 79,900 ರೂಪಾಯಿ ತೆಗೆದುಕೊಳ್ಳುತ್ತದೆ. ಹಾಗಾಗಿ ಐಫೋನ್ 12 ರ 128 ಜಿಬಿ ರೂಪಾಂತರವು ಫ್ಲಿಪ್ ಕಾರ್ಟ್ ನಲ್ಲಿ 15 ಪ್ರತಿಶತ ರಿಯಾಯಿತಿ ಪಡೆಯುತ್ತಿದೆ. ಇದರರ್ಥ ಈ ಮಾದರಿಯು ಈಗ 84,900 ರೂಗಳ ಬದಲಾಗಿ ಕೇವಲ 71,999 ರೂಗಳಲ್ಲಿ ಲಭ್ಯವಿದೆ.
ಕೊನೆಯದಾಗಿ, ಐಫೋನ್ 12 ರ 256 ಜಿಬಿ ಸ್ಟೋರೇಜ್ ಮಾದರಿಯಲ್ಲಿ 13 ಪ್ರತಿಶತ ರಿಯಾಯಿತಿ ಇದೆ. ಅಂದರೆ, ಇದರ ಮೂಲ ಬೆಲೆ ರೂ 94,900 ರೂಪಾಯಿ ಆಗಿದ್ದು, ಆದರೆ ಈಗ ಅದನ್ನು ಕೇವಲ ರೂ 81,999 ಕ್ಕೆ ಖರೀದಿಸಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications