ಆಪಲ್‌ನ ಜನಪ್ರಿಯ ಐಫೋನ್ 15 ಅಗ್ಗವಾಗಿ ಸಿಕ್ಕುತ್ತಿದೆ. ಹೌದು, ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಐಫೋನ್ 15 ಇದೀಗ 60,000 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ.
ಆಪಲ್‌ನ ಪ್ರಮುಖ ಸ್ಮಾರ್ಟ್‌ಫೋನ್ ಐಫೋನ್ 15 ಬೆಲೆ ಇದ್ದಕ್ಕಿದ್ದಂತೆ ಇಳಿಕೆಯಾಗಿದ್ದು,ಬಿಡುಗಡೆಯ ಸಮಯದಲ್ಲಿ ಈ ಫೋನ್ ಭಾರತದಲ್ಲಿ ಸುಮಾರು 79,900 ರೂ.ಗಳಿಗೆ ಮಾರಾಟವಾಗುತ್ತಿತ್ತು.ಆದರೆ ಈಗ ಆನ್‌ಲೈನ್ ಶಾಪಿಂಗ್‌ಗಳ ಆಫರ್ ಗಳ ಅಡಿಯಲ್ಲಿ ಇದನ್ನು ಸುಮಾರು 58,000 ರೂ.ಗಳಿಂದ 60,000 ರೂ.ಗಳಿಗೆ ನೀವು ಖರೀದಿಯನ್ನು ಮಾಡಬಹುದು.

ರಿಯಾಯಿತಿಯ ಮೇಲೆ ನೀವು ಎಲ್ಲಿ ಖರೀದಿ ಮಾಡಬಹುದು?
ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಐಫೋನ್ 15 ಮೇಲಿನ ಅತಿದೊಡ್ಡ ರಿಯಾಯಿತಿಯನ್ನು ನೀಡಲಾಗಿದೆ. ಕೆಲವು ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಡೀಲ್‌ಗಳೊಂದಿಗೆ ಈ ಸೈಟ್‌ಗಳಲ್ಲಿ ಐಫೋನ್ 15 ರ ಬೆಲೆಯನ್ನು ಕಡಿಮೆ ಇದೆ.ಇಲ್ಲಿ ನೀವು ಖರೀದಿಮಾಡಬಹುದು.
ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಕಾರ್ಡ್‌ಗಳ ಮೂಲಕ ಪಾವತಿಸಿದರೆ 3,000 ರಿಂದ 5,000 ರೂ.ಗಳವರೆಗೆ ಹೆಚ್ಚುವರಿ ರಿಯಾಯಿತಿ ಇದೆ. ಹಳೆಯ ಫೋನ್ ವಿನಿಮಯ ಮಾಡಿಕೊಳ್ಳುವಾಗ 10,000 ರೂ.ಗಳವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದು.
ಐಫೋನ್ 15 ವೈಶಿಷ್ಟ್ಯಗಳು
ಐಫೋನ್ 15 ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ನಿಮ್ಮಗೆ ಐಫೋನ್ 15 ಫೋನ್ ನಿಮ್ಮಗೆ ಸಿಗುತ್ತದೆ. ಐಫೋನ್ 15 ಡಿಸ್‌ಪ್ಲೇ ನೋಡುವುದಾದರೆ, ಇದು 6.1 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದನ್ನು ಸೂಪರ್ ರೆಟಿನಾ XDR OLED ಪ್ಯಾನೆಲ್‌ನಲ್ಲಿ ನಿರ್ಮಿಸಲಾಗಿದೆ. ಇದು 1179 x 2556 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 2,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್, ಡಾಲ್ಬಿ ವಿಷನ್ ಮತ್ತು HDR10 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಐಫೋನ್‌ನ iOS 17 ಆಪರೇಟಿಂಗ್ ಸಿಸ್ಟಮ್ ಬೆಂಬಲ ಇದೆ. ಪ್ರಸ್ತುತ, iOS 18ರ ನವೀಕರಣವನ್ನು ಹೊಂದಿರುವ ಈ ಫೋನ್ 128GB, 256GB ಮತ್ತು 512GB ಸ್ಟೋರೇಜ್ ಮಾದರಿಗಳಲ್ಲಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನಿನಲ್ಲಿ 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಐಫೋನ್ 15 ಫೋನಿನಲ್ಲಿ 12 ಮೆಗಾಪಿಕ್ಸೆಲ್ ಸೆಲ್ಫಿ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.ಇದು ಸೆರಾಮಿಕ್ ಶೀಲ್ಡ್ ಗಾಜಿನ ರಕ್ಷಣೆಯನ್ನು ಹೊಂದಿದೆ.
ನಮಗೆ ಇಷ್ಟೊಂದು ರಿಯಾಯಿತಿ ಏಕೆ ಸಿಗುತ್ತದೆ?
ಐಫೋನ್ 15 ಬೆಲೆ ಇಳಿಕೆಗೆ ಎರಡು ಪ್ರಮುಖ ಕಾರಣಗಳಿವೆ, ಐಫೋನ್ 16 ಬಿಡುಗಡೆ ಹತ್ತಿರದಲ್ಲಿದೆ ಆಪಲ್ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್ ಅನ್ನು ಬಿಡುಗಡೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಐಫೋನ್ 15 ಬೆಲೆಯನ್ನು ಕಡಿಮೆ ಮಾಡುವುದು ಸ್ಟಾಕ್ ಅನ್ನು ತ್ವರಿತವಾಗಿ ತೆರವುಗೊಳಿಸಲು ಒಂದು ತಂತ್ರವಾಗಿದೆ.
ಹೆಚ್ಚುತ್ತಿರುವ ಸ್ಪರ್ಧೆ: ಮಾರುಕಟ್ಟೆಯಲ್ಲಿ, ಸ್ಯಾಮ್‌ಸಂಗ್, ಒನ್‌ಪ್ಲಸ್ ಮತ್ತು ಇತರ ಬ್ರಾಂಡ್‌ಗಳ ಪ್ರಮುಖ ಫೋನ್‌ಗಳು ಸಹ ವೈಶಿಷ್ಟ್ಯಗಳು ಮತ್ತು ಬೆಲೆಯ ವಿಷಯದಲ್ಲಿ ನಿರಂತರವಾಗಿ ಸ್ಪರ್ಧಿಸುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳಲು ಆಪಲ್ ಈಗ ಬೆಲೆ ನಿಗದಿಯಲ್ಲಿ ನಮ್ಯತೆಯನ್ನು ತೋರಿಸುತ್ತಿದೆ.
ಖರೀದಿಸಲು ಈಗ ಸರಿಯಾದ ಸಮಯವೇ?
ನೀವು ಐಫೋನ್ 15 ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ಉತ್ತಮ ಸಮಯವಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಐಫೋನ್ 16 ಬಿಡುಗಡೆಯಾದ ನಂತರವೂ, ಐಫೋನ್ 15 ರ ಸ್ಟಾಕ್ ಕ್ರಮೇಣ ಕಡಿಮೆಯಾಗಲಿದೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ಬೆಲೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ 15 ಈಗ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಆಪಲ್‌ನ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವ ಆದರೆ ಬೆಲೆಯಿಂದಾಗಿ ಹಿಂಜರಿಯುತ್ತಿದ್ದವರಿಗೆ ಇದು ಉತ್ತಮ ಅವಕಾಶ. ಸಮಯಕ್ಕೆ ಸರಿಯಾಗಿ ಆಫರ್‌ನ ಲಾಭವನ್ನು ಪಡೆದುಕೊಳ್ಳಿ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ



Click it and Unblock the Notifications