ಜಸ್ಟ್, ಒಂದೇ ಮೆಟ್ಟಿಲು! ಆರ್‌ಸಿಬಿ ತಂಡ 18 ವರ್ಷದ ಐಪಿಎಲ್ ಟ್ರೋಫಿ ಕನಸು ನನಸಾಗೋಕೆ ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ. ಹೌದು ಇನ್ನೊಂದೇ ಒಂದು ಪಂದ್ಯದಿಂದ ಕೋಟ್ಯಂತರ ಅಭಿಮಾನಿಗಳ 18 ವರ್ಷದ ಹೋರಾಟಕ್ಕೆ ಫಲ ಸಿಗುತ್ತೆ. ಬಹುದಿನಗಳ ಆಸೆಯಂತೆ, ಈ ಸಲ ಕಪ್ ನಮ್ಮದೇ ಆಗುತ್ತೆ. ಹಾಗಿದ್ರೆ, ಫೈನಲ್ ಮ್ಯಾಚ್ ಎಲ್ಲಿ ನಡೆಯುತ್ತೆ? ಟಿಕೆಟ್ ಖರೀದಿಸುವುದು ಹೇಗೆ? ಎಂಬಿತ್ಯಾದಿ ಹೆಚ್ಚಿನ ವಿವರ ತಿಳಿಯಲು ಮುಂದೆ ಓದಿ.
ಒಟ್ಟಾರೆ,ನಾವು ಎಲ್ಲ ನೋಡಿದ್ದೇವೆ.. ಕೊರೊನಾ ಲಾಕ್ ಡೌನ್ ನೋಡಿದ್ವಿ, ಕುಂಭ ಮೇಳ ನೋಡಿದ್ವಿ, ನೋಟ್ ಬ್ಯಾನ್ ನೋಡಿದ್ವಿ, ಭಾರತ-ಪಾಕ್ ಯುದ್ಧ ನೋಡಿದ್ವಿ.. ಇನ್ನೂ ನೋಡೋದು ಒಂದೇ ಬಾಕಿ. ಅದು ಏನೆಂದರೆ, RCB ಕಪ್ ಎತ್ತಿಹಿಡಿಯೋದು! ಇದೊಂದು ನೋಡಿದ್ರೆ, ಎಲ್ಲಾ ನೋಡ್ದಂಗೆ ಆಗುತ್ತೆ. ಇದು ಕೋಟ್ಯಂತರ ಅಭಿಮಾನಿಗಳ ಮಾತು.

ಹೌದು, ಆರ್ ಸಿಬಿ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್ 3ರಂದು ಫೈನಲ್ ಟ್ರೋಫಿಗಾಗಿ ನಡೆಯಲಿರುವ ಕಾದಾಟವನ್ನು ನೋಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು' ಕಾತುರದಿಂದ ಕಾಯುತ್ತಿದ್ದಾರೆ.
ಗುರುವಾರ ನಡೆದ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ನಾಲ್ಕನೇ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) ಫೈನಲ್‌ಗೆ ಲಗ್ಗೆ ಇಟ್ಟಿದ್ದು ಟಪ್ ಗೆಲಲು ಒಂದೇ ಒಂದು ಗೆಲುವು ಮಾತ್ರ ಬಾಕಿ ಇದೆ. ಕೊನೆಯ ಪಂದ್ಯವನ್ನು ವೀಕ್ಷಿಸಲು ಆರ್‌ಸಿಬಿ ಅಭಿಮಾನಿಗಳು ಟಿಕೆಟ್‌ಗಳಿಗಾಗಿ ಪರದಾಡುತ್ತಿದ್ದಾರೆ.
ಐಪಿಎಲ್ ಶುರುವಾಗಿ 18 ವರ್ಷ.. ಈ 18ನೇ ವರ್ಷದ ಪರಿಶ್ರಮದ ವನವಾಸಕ್ಕೆ ಪ್ರತಿಫಲ ಸಿಗುವಂತಹ ದಿನ ಜೂನ್ 3ರಂದು ನೆಡೆಯುವ ಪಂದ್ಯ. ಕಿಂಗ್ ಕೊಹ್ಲಿ ವಿರಾಟ್ ಜರ್ಸಿ ನಂಬರ್ ಕೂಡ 18. ಅವರ ಹುಟ್ಟು ಹಬ್ಬ ಕೂಡ ಹದಿನೆಂಟು.. ಐಪಿಎಲ್ ಆವೃತ್ತಿ ಕೂಡ ಹದಿನೆಂಟು.. ಹದಿನೆಂಟುರ ನಂಟು ಗೆಲವು ಕೊಡುತ್ತಾ? ಎಂಬುವುದೇ ಕುತೂಹಲ.
ಇದುವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರು ಬಾರಿ ರನ್ನರ್-ಅಪ್ (2009, 2011, 2016) ಪ್ರಶಸ್ತಿಯನ್ನು ಗೆದ್ದಿದೆ. ವಿರಾಟ್ ಕೊಹ್ಲಿ ಪಡೆ, ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 2025 ರ ಐಪಿಎಲ್ ಫೈನಲ್‌ಗೆ ತಲುಪಿದೆ. ಇನ್ನೂ ಫೈನಲ್ ಪಂದ್ಯಕ್ಕೆ ಮೇ 26 ರಿಂದ ಟಿಕೆಟ್ ನ್ನು ಖರೀದಿಸಬಹುದು ಎಂದು ಬಿಸಿಸಿಐ ಈ ಹಿಂದೆಯೇ ಹೇಳಿತ್ತು. ಆದ್ದರಿಂದ ಟಿಕೆಟ್ ಬೆಲೆ ಕೂಡ ದುಬಾರಿಯಾಗಿದೆ ಅತಿ ಹೆಚ್ಚಾಗಿ ಟಿಕೆಟ್‌ನ್ನು ಖರೀದಿ ಮಾಡುತ್ತಿದ್ದಾರೆ.
ಐಪಿಎಲ್ 2025 ಫೈನಲ್ ಟಿಕೆಟ್‌ಗಳನ್ನು ಖರೀದಿಸುವುದು ಹೇಗೆ..?
ಅಧಿಕೃತ ಪಾಲುದಾರ: ಐಪಿಎಲ್ 2025 ಪ್ಲೇ- ಆಫ್ ಹಂತದ ಅಧಿಕೃತ ಟಿಕೆಟ್ ಪಾಲುದಾರರು ಜೊಮ್ಯಾಟೊ ಆಗಿದ್ದು, ಇದರ ವೆಬ್ ಸೈಟ್ ಮತ್ತು ಆ್ಯಪ್ ಮೂಲಕ ನೀವು ಟಿಕೆಟ್ ಅನ್ನು ಖರೀದಿ ಮಾಡಬಹುದು.
ರುಪೇ ಕಾರ್ಡ್‌ದಾರರು: ಫೈನಲ್‌ಗಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಲು ಮೇ 26 ರಿಂದ 24 ಗಂಟೆಗಳ ವಿಶೇಷ ಆದ್ಯತೆಯ ವಿಂಡೋವನ್ನು ತರೆಯಲಾಗಿದೆ. ನೀವು ಇಲ್ಲಿ ಟಿಕೆಟ್‌ನ್ನು ಖರೀದಿ ಮಾಡಬಹುದು.
ಸಾಮಾನ್ಯ ಮಾರಾಟಗಳು: ಕ್ರಿಕೆಟ್ ಅಭಿಮಾನಿಗಳು ತಮ್ಮ ಜಿಲ್ಲೆಗಳಿಂದ Zomato ವೆಬ್ ಸೈಟ್ ಮತ್ತು ಆ್ಯಪ್ ಮೂಲಕ ಮೇ 27 ರಿಂದ ಟಿಕೆಟ್ ಖರೀದಿಸಬಹುದಾಗಿದೆ.
ಐಪಿಎಲ್ 2025 ರ ಅಂತಿಮ ಹಂತದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಭಾಗವಹಿಸಲಿವೆ.ನಚಂಡೀಗಢದಲ್ಲಿ ರೋಮಾಂಚಕ ಪಂದ್ಯಗಳ ನಂತರ, ಎಲ್ಲರ ಕಣ್ಣುಗಳು ಈಗ ಅಹಮದಾಬಾದ್‌ನತ್ತ ತಿರುಗಿವೆ, ಅಲ್ಲಿ ಕೊಹ್ಲಿ ಪಡೆ ತಮ್ಮ ಟ್ರೋಪಿಯನ್ನು ಗೆಲವು ಕಡೆ ಇದೆ.
ಆರ್‌ಸಿಬಿ ತಂಡದಲ್ಲಿ ಯಾರೆಲ್ಲಾ ಆಟಗಾರು ಇದ್ದಾರೆ?
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಾಕೋಬ್ ಬೆಥೆಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ, ಯಶ್ ದಯಾಳ್
ಆರ್‌ಸಿಬಿ ಈ ಸಲನಾದ್ರೂ ಕಪ್ ಗೆಲ್ಲುತ್ತಾ?
ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನಲ್ಲಿ ಕಳೆದ 17 ಸೀಸನ್‌ಗಳಲ್ಲಿ ಆಡುವಾಡುತ್ತಲೇ ಬಂದಿದೆ ಪೈನಲ್‌ಗೆ ತಲುಪಿದರೂ ಐಪಿಎಲ್ ಕಪ್ ಮಾತ್ರ ಕನಸಗಿಯೇ ಉಳಿದಿದೆ. ಆರ್ ಸಿಬಿ ಇದುವರೆಗೂ ಮೂರು ಬಾರಿ ಫೈನಲ್ ಪ್ರವೇಶಿಸಿ ಸೈ ಎನಿಸಿಕೊಂಡಿದೆ. ಇದೀಗ 18ನೇ ಅವೃತ್ತಿಯಲ್ಲಿ ಪೈನಲ್‌ಗೆ ತಲುಪಿದೆ. ಕಪ್ ಗೆಲುತ್ತಾ ಎಂಬುವುದನ್ನು ಕಾದುನೋಡಬೇಕಿದೆ. ಸೋತರೂ ಗೆದ್ದರೂ ಆರ್‌ಸಿಬಿಗೆ ಇರುವ ಕ್ರೇಜ್ ಮಾತ್ರ ಕಡಿಮೆಯಾಗುವುದೇ ಇಲ್ಲ..


Click it and Unblock the Notifications