IPL 2025: ಎಲ್ಲಾ ಪಂದ್ಯ ವೀಕ್ಷಿಸಬಹುದು! ಜಿಯೋ, ಏರ್‌ಟೆಲ್ ಮತ್ತು ವಿಐನ ಅಗ್ಗದ ರೀಚಾರ್ಜ್‌ಗಳಿವು.. ಜಿಯೋ ಹಾಟ್‌ಸ್ಟಾರ್ ಉಚಿತ

ನಾಳೆಯಿಂದ ಐಪಿಎಲ್ ಭರಾಟೆ ಜೋರು... ಹೌದು, ಐಪಿಎಲ್ ಶುರುವಾಗಲು ಇನ್ನು ಕೆಲವು ಕ್ಷಣಗಳು ಮಾತ್ರ ಬಾಕಿ ಇದೆ. ಕ್ರಿಕೆಟ್ ಪ್ರೇಮಿಗಳು ಬಹಳ ಕಾತುರದಿಂದ ಕ್ರಿಕೆಟ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ನೀವು ಪ್ರತಿ ವರ್ಷದಂತೆ ಜಿಯೋಸಿನಿಮಾದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸುವುದಕ್ಕೆ ಆಗುವುದಿಲ್ಲ ಯಾಕೆಂದರೆ ಈ ಬಾರಿ ಐಪಿಎಲ್ 2025ರ (IPL 2025) ಎಲ್ಲಾ ಪಂದ್ಯಗಳು ಜಿಯೋಸಿನಿಮಾ ಬದಲಾಗಿ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿವೆ. ಹಾಗಿದ್ರೆ ಯಾವೆಲ್ಲಾ ಪ್ಲಾನ್‌ಗಳ ಮೂಲಕ ನಾವು ಉಚಿತವಾಗಿ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಬಹುದು ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ..

ಹೌದು, ಈ ಬಾರಿ ಐಪಿಎಲ್ ಪಂದ್ಯದ ಲೈವ್‌ ವೀಕ್ಷಣೆ ಮಾಡಲು ನೀವು ಶುಲ್ಕ ಪಾವತಿಸಬೇಕಾಗುತ್ತದೆ.ಆದರೆ ಜಿಯೋ, ಏರ್‌ಟೆಲ್ ಮತ್ತು ವಿಐ ಕಂಪನಿ ಅತ್ಯಂತ ಕೈಗೆಟುಕುವ ಜಿಯೋಹಾಟ್‌ಸ್ಟಾರ್ (JioHotstar) ಚಂದಾದಾರಿಕೆ ಯೋಜನೆಗಳನ್ನು ಪರಿಚಯ ಮಾಡಿವೆ ನೀವು ಈ ಪ್ಲಾನ್‌ಗಳ ಮೂಲಕ ಹೆಚ್ಚಿನ ಹಣವನ್ನು ಪಾವತಿಸದೆಯೇ ಐಪಿಎಲ್ 2025 ಅನ್ನು ವೀಕ್ಷಿಸಬಹುದು.

IPL 2025:ಅಗ್ಗದ ರೀಚಾರ್ಜ್‌ಗಳು: ಎಲ್ಲಾ ಪಂದ್ಯ ವೀಕ್ಷಿಸಬಹುದು!

ಏರ್‌ಟೆಲ್, ಜಿಯೋ ಮತ್ತು ವಿಐ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್‌ಗಳು

ಏರ್‌ಟೆಲ್ : 398 ರೂ. ರೀಚಾರ್ಜ್ ಪ್ಲಾನ್‌
ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ, 2GB ದೈನಂದಿನ ಡೇಟಾ, ಅನಿಯಮಿತ ಕರೆ
28 ದಿನಗಳ ಮಾನ್ಯತೆ ಇರುತ್ತದೆ. ಏರ್‌ಟೆಲ್ ಅತ್ಯಂತ ಕಡಿಮೆ ಬೆಲೆಯ ಜಿಯೋಹಾಟ್‌ಸ್ಟಾರ್ ಯೋಜನೆಯನ್ನು ನೀಡುತ್ತಿದೆ. ಆದರೆ, ಓಟಿಟಿ (OTT) ವ್ಯಾಲಿಡಿಟಿ ಕೇವಲ 28 ದಿನಗಳು ಮಾತ್ರ ಇರುತ್ತದೆ.

ರಿಲಯನ್ಸ್ ಜಿಯೋ : 949 ರೂ. ರೀಚಾರ್ಜ್ ಪ್ಲಾನ್‌

ಪ್ರತಿದಿನ 100 ಎಸ್‌ಎಂಎಸ್, ಜಿಯೋ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್ 84 ದಿನಗಳವರೆಗೆ ಉಚಿತ, ಉಚಿತ ಕರೆ, ಪ್ರತಿದಿನ 2GB ಡೇಟಾ 84 ದಿನಗಳವರೆಗೆ ವ್ಯಾಲಿಡಿಟಿಯನ್ನು ನಿಮಗಾಗಿ ನೀಡುತ್ತಿದೆ.

ವೊಡಾಫೋನ್ ಐಡಿಯಾ : 469 ರೂ. ಪ್ಲಾನ್‌
2.5GB, ಅನಿಯಮಿತ ಕರೆಗಳು ,3 ತಿಂಗಳ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಸದಸ್ಯತ್ವ, ದಿನಕ್ಕೆಮತ್ತು 100 ಎಸ್‌ಎಂಎಸ್ 28 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿದೆ.

ರಿಲಯನ್ಸ್ ಜಿಯೋದ ವಿಶೇಷ ಆಫರ್ ಬಗ್ಗೆ ಹೇಳುವುದಾದರೆ, ಜಿಯೋ ಬಳಕೆದಾರರು 299 ರೂ.ಗಿಂತ ಹೆಚ್ಚಿನ ಶುಲ್ಕದಲ್ಲಿ ರೀಚಾರ್ಜ್ ಮಾಡಿದರೆ, ಒಟ್ಟು 90 ದಿನಗಳವರೆಗೆ ಉಚಿತ ಜಿಯೋ ಹಾಟ್‌ಸ್ಟಾರ್‌ನ ಅನುಕೂಲವನ್ನು ಪಡೆಯಬಹುದು.

ಐಪಿಎಲ್ ಸಮಯದಲ್ಲಿ ಸುಮಾರು 90 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ವೊಡಾಫೋನ್ ಐಡಿಯಾ ಐಪಿಎಲ್ ಅನ್ನು ಸ್ಟ್ರೀಮ್ ಮಾಡಲು ಅತ್ಯಂತ ಅಗ್ಗದ ಯೋಜನೆಯನ್ನು ಹೊಂದಿರುತ್ತದೆ.

ಕಡಿಮೆ ಬೆಲೆಯ ಜಿಯೋಹಾಟ್‌ಸ್ಟಾರ್ ಡೇಟಾ ಆಡ್-ಆನ್ ಪ್ಲಾನ್‌ಗಳು

ಏರ್‌ಟೆಲ್ : 160 ರೂ. ರೀಚಾರ್ಜ್ ಪ್ಲಾನ್‌
ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ 3 ತಿಂಗಳು, 5GB ಡೇಟಾ ಹಾಗೂ 7 ದಿನಗಳ ವ್ಯಾಲಿಡಿಟಿ ಇರುತ್ತದೆ.

ರಿಲಯನ್ಸ್ ಜಿಯೋ : 100 ರೂ. ರೀಚಾರ್ಜ್ ಪ್ಲಾನ್‌
ಜಿಯೋ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್ 90 ದಿನಗಳವರೆಗೆ ಉಚಿತ, 5GB ಡೇಟಾ
90 ದಿನಗಳ ವ್ಯಾಲಿಡಿಟಿ ಇರುತ್ತದೆ.

ವೊಡಾಫೋನ್ ಐಡಿಯಾ: 151 ರೂ. ರೀಚಾರ್ಜ್ ಪ್ಲಾನ್‌
4GB ಡೇಟಾ ಮತ್ತು 3 ತಿಂಗಳ ಜಿಯೋಹಾಟ್‌ಸ್ಟಾರ್ ಸದಸ್ಯತ್ವ 30 ದಿನಗಳ ವ್ಯಾಲಿಡಿಟಿ ಇರುತ್ತದೆ.

ನೀವು ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾವನ್ನು ಆಡ್-ಆನ್ ರೀಚಾರ್ಜ್ ಆಗಿ ಮಾತ್ರ ರೀಚಾರ್ಜ್ ಮಾಡಬಹುದು.

ಜಿಯೋಹಾಟ್‌ಸ್ಟಾರ್ ಡೇಟಾ ಆಡ್-ಆನ್ ಪ್ಲಾನ್‌ಗಳ ಬಗ್ಗೆ ಹೇಳುವುದಾದರೆ, ಜಿಯೋದ ರೀಚಾರ್ಜ್ ಯೋಜನೆ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ಆದರೂ, ಇವು ಆಡ್-ಆನ್ ಯೋಜನೆಗಳು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಸಕ್ರಿಯ ಯೋಜನೆ ಹೊಂದಿರುವುದು ಕಡ್ಡಾಯವಾಗಿದೆ.

ನಾಳೆ ಐಪಿಎಲ್ 2025ರ ಮೊದಲ ಪಂದ್ಯ ಆರಂಭ

ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಸೀಸನ್ ನಾಳೆ (ಮಾರ್ಚ್ 22, ಶನಿವಾರ) ಪ್ರಾರಂಭವಾಗುತ್ತಿದೆ. ಈ ಬಾರಿ ಲೀಗ್‌ನಲ್ಲಿ 10 ತಂಡಗಳು ಭಾಗವಹಿಸಲಿವೆ. ಒಟ್ಟು 74 ಪಂದ್ಯಗಳು ನಡೆಯಲಿವೆ. ಮೊದಲ ದಿನ ಅಂದರೆ ನಾಳೆ (ಮಾರ್ಚ್ 22) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ನೈಟ್ ರೈಡರ್ಸ್ ನಡುವೆ ಪಂದ್ಯ ಕಳಾಗ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+