ಜಸ್ಟ್, ಒಂದೇ ಮೆಟ್ಟಿಲು! ಆರ್‌ಸಿಬಿ ತಂಡ 18 ವರ್ಷದ ಐಪಿಎಲ್ ಟ್ರೋಫಿ ಕನಸು ನನಸಾಗೋಕೆ ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ. ಹೌದು ಇನ್ನೊಂದೇ ಒಂದು ಪಂದ್ಯದಿಂದ ಕೋಟ್ಯಂತರ ಅಭಿಮಾನಿಗಳ 18 ವರ್ಷದ ಹೋರಾಟಕ್ಕೆ ಫಲ ಸಿಗುತ್ತೆ. ಬಹುದಿನಗಳ ಆಸೆಯಂತೆ, ಈ ಸಲ ಕಪ್ ನಮ್ಮದೇ ಆಗುತ್ತೆ.. ಐಪಿಎಲ್ 2025 ಅಂತಿಮ ಕದನಕ್ಕೆ ಸಜ್ಜಾಗಿದೆ.ಹಾಗದ್ರೆ ನಾಳೆ ಆರ್‌ಸಿಬಿ ಗೆದ್ದರೆ ಎಷ್ಟು ಕೋಟಿ ಹಣ ಸಿಗುತ್ತೆ? ರನ್ನರ್ ಅಪ್‌ಗೆ ಸಿಗುವ ಬಹುಮಾನದ ಮೊತ್ತ ಎಷ್ಟು? ಆರೆಂಜ್ ಕ್ಯಾಪ್ ಯಾರ ಪಾಲಾಗುತ್ತೆ ಮತ್ತು ಪರ್ಪಲ್ ಕ್ಯಾಪ್ ಯಾರಿಗೆ ಸಿಗಬಹುದು? ಎಂಬಿತ್ಯಾದಿ ಎಲ್ಲಾ ಕುತೂಹಲಕ್ಕೆ ಇಲ್ಲಿದೆ ಉತ್ತರ
ಹೌದು, ಆರ್ ಸಿಬಿ ತಂಡ ಗುರುವಾರ ನಡೆದ ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಕಪ್ ಗೆಲಲು ಒಂದೇ ಒಂದು ಗೆಲುವು ಮಾತ್ರ ಬಾಕಿ ಇದೆ. ಕೊನೆಯ ಪಂದ್ಯವನ್ನು ವೀಕ್ಷಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ಧಾರೆ.

ಐಪಿಎಲ್ 2025 ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಎಷ್ಟು ಕೋಟಿ ಬಹುಮಾನ..?
ಐಪಿಎಲ್ 2025 ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಐಪಿಎಲ್ ನಿಯಮಗಳ ಪ್ರಕಾರ ಬರೋಬ್ಬರಿ 20 ಕೋಟಿ ರೂ. ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂ. ಸಿಗುತ್ತದೆ. ಈ ವರ್ಷದ ಒಟ್ಟು ಬಹುಮಾನದ ಮೊತ್ತ 46.5 ಕೋಟಿ ರೂ.ಗಳು. ಇನ್ನೂ ಉಳಿದ ಮೊತ್ತವನ್ನು ಪಂದ್ಯಾವಳಿಯ ನಾಲ್ಕು ಅಗ್ರ-4 ತಂಡಗಳಿಗೆ ನೀಡಲಾಗುತ್ತದೆ.
ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ವಿಜೇತರಿಗೂ ಬಹುಮಾನ
ಐಪಿಎಲ್ 18ನೇ ಸೀಸನ್‌ನಲ್ಲಿ ಪಂದ್ಯವನ್ನು ಆಡಿರುವ ಆಟಗಾರರಿಗೆ ಹೆಚ್ಚು ರನ್ ಗಳಿಸುವ ಮತ್ತು ಹೆಚ್ಚು ವಿಕೆಟ್ ಪಡೆಯುವ ಆಟಗಾರನಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್‌ನ ಆಟಗಾರರಿಗೆ ಹೆಚ್ಚಿನ ಹಣದ ಜೊತೆಗೆ ಪ್ರಶಸ್ತಿಗಳು ಕೂಡ ಸಿಗುತ್ತದೆ. 10 ಲಕ್ಷ ರೂ. ಗಳನ್ನು ಸಹ ನೀಡಲಾಗುತ್ತದೆ.
ರನ್ನರ್ ಅಪ್
ಐಪಿಎಲ್ 2025ರ ಟೂರ್ನಿಯ ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂಪಾಯಿಗಳು ಸಿಗುತ್ತದೆ. ಪ್ಲೇಆಫ್‌ನಲ್ಲಿ ಸೋತ ಇಬ್ಬರು ತಂಡಗಳು ಕೂಡ ಬರಿಗೈಯಲ್ಲಿ ಮನೆಗೆ ಹೋಗುವುದಿಲ್ಲ. ಅವರಿಗೆ ನಗದು ಕೂಡ ನೀಡಲಾಗುತ್ತದೆ.
ವಿಜೇತ ಮತ್ತು ರನ್ನರ್ ಅಪ್ ಬಹುಮಾನದ ಮೊತ್ತದ ಅಂಕಿಅಂಶಗಳನ್ನು ಐಪಿಎಲ್ ಆಡಳಿತ ಸಮಿತಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.ಐಪಿಎಲ್ ಚಾಂಪಿಯನ್‌ಗಳು ಈ ವರ್ಷ 20 ಕೋಟಿ ರೂ.ಗಳನ್ನು ಪಡೆಯಲಾಗುವುದು. ಅಲ್ಲದೆ, ಓಟಗಾರರಿಗೆ ರೂ. ಅವರಿಗೆ 13 ಕೋಟಿ ಕೋಟಿ ಹಣ ಸಿಗಲಿದೆ. ಎಲಿಮಿನೇಟರ್ ಅವರಿಗೆಬಹುಮಾನ 6.5 ಕೋಟಿ ದೊರೆಯಲಿದೆ.
ವೈಯಕ್ತಿಕ ಪ್ರಶಸ್ತಿ ಬಹುಮಾನದ ಹಣ
ಐಪಿಎಲ್ ನಲ್ಲಿ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ಸಹ ಬೃಹತ್ ಮೊತ್ತ ಹಾಗೂ ಬಹುಮಾನಗಳನ್ನು ಪಡೆಯುತ್ತಾರೆ. ಆರೆಂಜ್ ಕ್ಯಾಪ್ ಪಡೆದ ಆಟಗಾರನಿಗೆ 10 ಲಕ್ಷ ಮತ್ತು ಪರ್ಪಲ್ ಕ್ಯಾಪ್ ಪಡೆದ ಆಟಗಾರನಿಗೆ 10 ಲಕ್ಷ ಬಹುಮಾನ ನೀಡಲಾಗುವುದು. ಮತ್ತು ಉದಯೋನ್ಮುಖ ಆಟಗಾರನಿಗೆ 20 ಲಕ್ಷ, ಅತ್ಯಂತ ಪ್ರದರ್ಶನ ನೀಡಿದ್ದ ಆಟಗಾರನಿಗೆ 10 ಲಕ್ಷ, ಸೂಪರ್ ಸ್ಟ್ರೈಕರ್ ಗೆ 10 ಲಕ್ಷ, ಮತ್ತು ಪವರ್ ಪ್ಲೇಯರ್ ಗೆ 10 ಲಕ್ಷ. ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದವರಿಗೆ 10 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತಿದ್ದು, ಗೇಮ್ ಚೇಂಜರ್‌ಗೆ 10 ಲಕ್ಷ ರೂಪಾಯಿಗಳನ್ನು ನೀಡಲಾಗುವುದು.
ನಾಳೆ ಆರ್‌ಸಿಬಿ ಗೆದ್ದರೆ ಏನು ಸಿಗುತ್ತೆ?
ನಾಳೆ ಆರ್‌ಸಿಬಿ ಗೆದ್ದರೆ ಬಹುದಿನಗಳ ಕನಸು ಐಪಿಎಲ್ 2025ರ ಟ್ರೋಫಿ ಕೊನೆಗೂ ಬೆಂಗಳೂರಿಗೆ ಸಿಗುತ್ತದೆ. ಜೊನೆಗೆ ಬಹುಮಾನದ ಹಣ 20 ಕೋಟಿ ಸಿಗುತ್ತದೆ. ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳು ( ಪರ್ಪಲ್ ಕ್ಯಾಪ್, ಆರೆಂಜ್ ಕಪ್ ಇತ್ಯಾದಿ) ಸಿಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ಈ ಖುಷಿಯನ್ನು ಆರ್‌ಸಿಬಿ ಅಭಿಮಾನಿಗಳು ಹಣ್ಣದಂತೆ ಆಚರಣೆ ಮಾಡುತ್ತಾರೆ.
ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ..?
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ನಾಳೆ ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದೆ.ಇದು ಕೇವಲ ಶೇ.0ರಿಂದ ಶೇ. 5ಎಂದು ಅಂದಾಜಿಸಲಾಗಿದೆ. ಇದರ ಆಧಾರದ ಮೇಲೆ, ಈ ಪಂದ್ಯವು ಯಾವುದೇ ಅಡ್ಡಿ ತಡೆಯಿಲ್ಲದೇ ನಡೆಯುತ್ತದೆ.
ಒಟ್ಟಾರೆ,ನಾವು ಎಲ್ಲ ನೋಡಿದ್ದೇವೆ.. ಕೊರೊನಾ ಲಾಕ್ ಡೌನ್ ನೋಡಿದ್ವಿ, ಕುಂಭ ಮೇಳ ನೋಡಿದ್ವಿ, ನೋಟ್ ಬ್ಯಾನ್ ನೋಡಿದ್ವಿ, ಭಾರತ-ಪಾಕ್ ಯುದ್ಧ ನೋಡಿದ್ವಿ.. ಇನ್ನೂ ನೋಡೋದು ಒಂದೇ ಬಾಕಿ. ಅದು ಏನೆಂದರೆ, RCB ಕಪ್ ಎತ್ತಿಹಿಡಿಯೋದು! ಇದೊಂದು ನೋಡಿದ್ರೆ, ಎಲ್ಲಾ ನೋಡ್ದಂಗೆ ಆಗುತ್ತೆ.


Click it and Unblock the Notifications