RCB vs CSK Tickets: ಐಪಿಎಲ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್‌ಸಿಬಿ vs ಸಿಎಸ್‌ಕೆ ಪಂದ್ಯದ ಅಂದರೆ ಕ್ರೇಜ್ ಬೇರೆ ಲೆವೆಲ್ ಇರುತ್ತದೆ. ಅದರಂತೆಯೇ ಈಗಾಗಲೇ ಆನ್‌ಲೈನ್ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಆದರೆ, ಈ ಅವಕಾಶವನ್ನೇ ಬಳಕೆ ಮಾಡಿಕೊಳ್ಳುತ್ತಿರುವರು ದುಪ್ಪಟ್ಟು ಬೆಲೆಗೆ ಟಿಕೆಟ್ ಮಾರಾಟ (RCB vs CSK Tickets) ಮಾಡುತ್ತಿದ್ದಾರೆ. ಇದರಿಂದ ಕ್ರಿಕೆಟ್ ಪ್ರೇಮಿಗಳು ಬೇಸರಗೊಂಡಿದ್ದಾರೆ.
ಹೌದು, ಸಾಮಾನ್ಯವಾಗಿ ಆರ್‌ಸಿಬಿ ಪಂದ್ಯದ ಟಿಕೆಟ್‌ಗಳು ಮಾರಾಟ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗುತ್ತಿವೆ. ಆದರೂ ಅಕ್ರಮವಾಗಿ ಹಣ ಮಾಡುವವರಿಗೆ ಟಿಕೆಟ್ ಹೇಗೆ ಸಿಗುತ್ತದೆ? ಎಂಬುವುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಕಳ್ಳ ಮಾರ್ಗದಲ್ಲಿ ಟಿಕೆಟ್ ಪಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಲ್ಲ. ಕೆಲವರು ಕಳ್ಳ ಮಾರ್ಗದಲ್ಲಿ ಟಿಕೆಟ್ ಖರೀದಿಸುತ್ತಾರೆ. ಬಳಿಕ, ಟಿಕೆಟ್ ಅನ್ನು ಡಬಲ್ ಬೆಲೆಗೆ ಮಾರಾಟ ಮಾಡುತ್ತಾರೆ. ಈ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಇಂದಿನ ಪಂದ್ಯದ ಆರಂಭಕ್ಕೂ ಇದೇ ಎಫೆಕ್ಟ್ ತಟ್ಟಿದೆ.

ಬೆಂಗಳೂರಿನಲ್ಲಿ ಟಿಕೆಟ್ ದರ ಎಷ್ಟು?
* ಕೆಇಐ ವೈರ್ಸ್ ಅಂಡ್ ಕೇಬಲ್ಸ್ A ಸ್ಟ್ಯಾಂಡ್ = 2,300 ರೂ.
* ಪ್ಯೂಮಾ B ಸ್ಟ್ಯಾಂಡ್ = 3,300 ರೂ.
* ಬೋಟ್ C ಸ್ಟ್ಯಾಂಡ್ = 3300 ರೂ.
* ಕನ್ಫರ್ಮ್ ಟಿಕೆಟಿ D ಕಾರ್ಪೊರೇಟ್ = 3,300 ರೂ.
* ಕನ್ಫರ್ಮ್ ಟಿಕೆಟಿ GT ಅನೆಕ್ಸ್ = 4,000 ರೂ.
* ಕತಾರ್ ಏರ್‌ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ P1 = 6,000 ರೂ.
* ಕತಾರ್ ಏರ್‌ವೇಸ್ E ಎಕ್ಸಿಕ್ಯುಟಿವ್ ಲಾಂಜ್ = 10,000 ರೂ.
* ಬಿರ್ಲಾ ಎಸ್ಟೇಟ್ಸ್ ಬಿ.ಎಸ್ ಚಂದ್ರಶೇಖರ್ ಸ್ಟ್ಯಾಂಡ್ P ಟೆರೇಸ್ = 15,000 ರೂ.
* ಕೆಇಐ ವೈರ್ಸ್ ಅಂಡ್ ಕೇಬಲ್ಸ್ ಸೈಯ್ಯದ್ ಕಿರ್ಮಾನಿ ಸ್ಟ್ಯಾಂಡ್ P ಕಾರ್ಪೊರೇಟ್ = 25,000 ರೂ.
* ಕತಾರ್ ಏರ್‌ವೇಸ್ ರಾಹುಲ್ ದ್ರಾವಿಡ್ ಪ್ಲಾಟಿನಂ ಲಾಂಜ್ =25,000 ರೂ.
* ಕತಾರ್ ಏರ್‌ವೇಸ್ ಜಿ.ಆರ್ ವಿಶ್ವನಾಥ್ ಸ್ಟ್ಯಾಂಡ್ P2 = 42,000 ರೂ.
ಆರ್‌ಸಿಬಿಗೆ ಮುಖ್ಯವಾದ ಪಂದ್ಯ, ಚೆನ್ನೈಗೆ ಔಪಚಾರಿಕ!
ಆರ್‌ಸಿಬಿ, ಈಗಾಗಲೇ 7 ಗೆಲುವುಗಳೊಂದಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸಮೀಪದಲ್ಲಿದೆ. ಇದರ ಜೊತೆಗೆ ತವರಿನಲ್ಲಿ ಸತತ 3 ಪಂದ್ಯಗಳ ಸೋಲಿನ ಸರಣಿಯನ್ನು ಕಳೆದ ಪಂದ್ಯದಲ್ಲಿ ಮುರಿದಿದ್ದ ಆರ್‌ಸಿಬಿ, ಇದೀಗ ಚೆನ್ನೈ ವಿರುದ್ಧದ ಪಂದ್ಯದಲ್ಲಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ. ಚೆನ್ನೈ ಈಗಾಗಲೇ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಈ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿದೆ.
ಸಿಎಸ್‌ಕೆ ಆಡಿರುವ 10 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಸೋತಿದೆ.
ಈ ಪಂದ್ಯ ಆರ್‌ಸಿಬಿಗೆ ಮುಖ್ಯವಾದದ್ದು, ಏಕೆಂದರೆ ಆರ್‌ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಹಾದಿಯಲ್ಲಿದೆ. ಬೆಂಗಳೂರು ತಂಡ ಆಡಿರುವ 10 ಪಂದ್ಯಗಳಲ್ಲಿ 7 ಗೆಲವು ದಾಖಲಿಸಿದೆ. ಮೂರು ಮ್ಯಾಚ್ ಸೋತಿದ್ದು, ಒಟ್ಟು 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯವನ್ನು ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೇರುತ್ತದೆ. ಈ ಪಂದ್ಯ ಯಾವಾಗ? ನೇರಪ್ರಸಾರ ವೀಕ್ಷಣೆ ಹೇಗೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಮಳೆಯಿಂದ ಆರ್‌ಸಿಬಿ-ಸಿಎಸ್‌ಕೆ ಪಂದ್ಯ ರದ್ದಾಗುತ್ತಾ?
ಬೆಂಗಳೂರಿನಲ್ಲಿ ನಿನ್ನೆಯೂ ಭಾರೀ ಮಳೆ ಆಗಿದೆ. ಇವತ್ತು ಮತ್ತು ನಾಳೆಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಹೀಗಾಗಿ ಇಂದಿನ ಆರ್‌ಸಿಬಿ ಮತ್ತು ಚೆನ್ನೈ ನಡುವಿನ ರೋಚಕ ಪಂದ್ಯಕ್ಕೆ ಮಳೆ ಕಾಟ ತಪ್ಪಿದ್ದಲ್ಲ. ಹವಾಮಾನ ವರದಿ ಪ್ರಕಾರ, ಸಂಜೆ ವೇಳೆ ಶೇ.60 ಹಾಗೂ ರಾತ್ರಿ 8 ರಿಂದ 11ರ ವರೆಗೆ ಶೇ.75 ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಭಾವ್ಯ ಪ್ಲೇಯಿಂಗ್ XII)
ಫಿಲ್ ಸಾಲ್ಟ್ / ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ), ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹೇಜಲ್‌ವುಡ್, ಸುಯಾಶ್ ಶರ್ಮಾ.
ಚೆನ್ನೈ ಸೂಪರ್ ಕಿಂಗ್ಸ್ (ಸಂಭಾವ್ಯ ಪ್ಲೇಯಿಂಗ್ XII)
ಶೇಕ್ ರಶೀದ್, ಆಯುಷ್ ಮ್ಹಾತ್ರೆ, ಎಂ.ಎಸ್ ಧೋನಿ (ನಾಯಕ ಮತ್ತು ವಿ.ಕೀ), ಸ್ಯಾಮ್ ಕರ್ರಾನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ದೀಪಕ್ ಹೂಡಾ, ಮಥೀಶ ಪತಿರಾನ, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅಂಶುಲ್ ಕಾಂಬೋಜ್.


Click it and Unblock the Notifications