ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಿಂದಾಗಿ ಐಪಿಎಲ್-2025 ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ಪ್ರೇಕ್ಷಕರು ಮತ್ತು ಆಟಗಾರರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದಿನಿಂದ ಯಾವುದೇ ಪಂದ್ಯ ಇರುವುದಿಲ್ಲ. ವಿದೇಶಿ ಆಟಗಾರರನ್ನು ಮನೆಗೆ ಕಳುಹಿಸುವುದೇ ಬಿಸಿಸಿಐನ ಮೊದಲ ಆದ್ಯತೆಯಾಗಿದೆ. ಬಿಸಿಸಿಐ ಶೀಘ್ರದಲ್ಲೇ ಹೊಸ ದಿನಾಂಕಗಳನ್ನು ಪ್ರಕಟಿಸಲಿದೆ.
ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಹತ್ಯೆ ಮಾಡಿದ್ದ ಪಾಪಿ ಪಾಕಿಸ್ತಾನದ ಉಗ್ರರ ಮೇಲೆ ಭಾರತ ಸೇಡು ತೀರಿಸಿಕೊಂಡಿದೆ. ಶತ್ರುಗಳ ಸಂಹಾರಕ್ಕೆ ಕೈಗೊಂಡ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ಫಲ ಕೊಟ್ಟಿದೆ. ಕ್ಷಿಪಣಿ ದಾಳಿ ಮಾಡಿ ಉಗ್ರರ ನೆಲೆಯನ್ನು ಧೂಳಿಪಟ ಮಾಡಿದೆ.

ನಿನ್ನೆ ಧರ್ಮಶಾಲಾದಲ್ಲಿ ಐಪಿಎಲ್ ಪಂದ್ಯ ಇತ್ತು ಅದು ಕೂಡ ರದ್ದಾಗಿತ್ತು. ಡಿಸಿ ವಿರುದ್ಧ ಪಿಬಿಕೆಎಸ್ ಪಂದ್ಯ ರದ್ದು ಭಾರತದ ಗಡಿ ಪ್ರದೇಶಗಳಲ್ಲಿ ಹೋರಾಟ ಆರಂಭವಾದ ನಂತರ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಗುರುವಾರ ನಡೆಯಬೇಕಿದ್ದ ಐಪಿಎಲ್ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಲಾಯಿತು. ಬೆಟ್ಟದ ನಗರಿ ಧರ್ಮಶಾಲಾದ ಕ್ರೀಡಾಂಗಣದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಈ ಅಡಚಣೆ ಉಂಟಾಗಿದೆ ಎಂದು ಬಿಸಿಸಿಐ ಹೇಳಿದೆ. ಪಂದ್ಯ ರದ್ದಾದ ಸಮಯವು ಯುದ್ಧದ ಆರಂಭದೊಂದಿಗೆ ಹೊಂದಿಕೆಯಾಯಿತು, ಇದು ನಿಜವಾದ ಕಾರಣದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು.
ರೋಹಿತ್ ಶರ್ಮಾ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇವರು ಎಕ್ಸ್ ಖಾತೆಯಲ್ಲಿ ಭಾರತೀಯ ಸೈನ್ಯೆಯ ಪ್ರತಿಯೊಂದು ಕ್ಷಣ, ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದೊಂದಿಗೆ ನನಗೆ ನಮ್ಮ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ. ನಮ್ಮ ಯೋಧರು ನಮ್ಮ ರಾಷ್ಟ್ರದ ಹೆಮ್ಮೆಗಾಗಿ ಎದ್ದು ನಿಂತಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಜವಾಬ್ದಾರಿಯುತವಾಗಿರುವುದು ಮತ್ತು ಯಾವುದೇ ನಕಲಿ ಸುದ್ದಿಗಳನ್ನು ಹರಡುವುದನ್ನು ಅಥವಾ ನಂಬುವುದನ್ನು ತಡೆಯುವುದು ಮುಖ್ಯ. ಎಲ್ಲರೂ ಸುರಕ್ಷಿತವಾಗಿರಿ! #ಆಪರೇಷನ್ ಸಿಂಧೂರ್ #ಜೈಹಿಂದ್, ಎಂದು ರೋಹಿತ್ ಶರ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು
ಐಪಿಎಲ್ 18ನೇ ಸೀಸನ್ ಟೂರ್ನಿ ಮುಗಿಯುವ ಹಂತವನ್ನು ತಲುಪಿದೆ. ಮೇ 25ಕ್ಕೆ ಫೈನಲ್ ಮ್ಯಾಚ್ ಕೂಡ ಇದೆ. ಆದರೆ, ಇದೀಗ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಎಲ್ಲಾರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್ ಮುಂದೂಡಿಕೆ ಬಗ್ಗೆ ಬಿಸಿಸಿಐ ಇಂದು ಮಹತ್ವದ ಸಭೆ ನಡೆಸಲಿದೆ. ಏನು ನಿರ್ಧಾರ ಹೊರಹಾಕುತ್ತದೆಯೋ ಎಂಬುವದನ್ನು ನೋಡಬೇಕಿದೆ.
ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಉಗ್ರ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದ್ದು, ಈ ಘಟನೆಯಲ್ಲಿ 26 ಮಂದಿ ಅಮಾಯಕರ ಬಲಿ ಹೋಗಿದ್ದರು. ಈ ಕೃತ್ಯದ ವಿರುದ್ಧವಾಗಿ ಭಾರತ ತಕ್ಷಣವೇ ಪ್ರತಿಕ್ರಿಯೆ ನೀಡಿ ಆಪರೇಷನ್ ಸಿಂಧೂರ್ ಎಂಬ ಹೆಸರಿನಡಿಯಲ್ಲಿ ಪಾಕಿಸ್ತಾನ ಆಧಾರಿತ ಉಗ್ರರ ಒಟ್ಟು 9 ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಅವುಗಳನ್ನು ಸಂಪೂರ್ಣವಾಗಿ ಸೇಡುತೀರಿಸಿಕೊಂಡಿದೆ.
ಈ ಕ್ರಮದ ಪರಿಣಾಮವಾಗಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ತೀವ್ರವಾಗಿ ಉದ್ವಿಗ್ನಗೊಂಡಿವೆ. ಗಡಿಭಾಗಗಳಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಪರಿಣಾಮ ಈಗ ಐಪಿಎಲ್ 2025 ಮೇಲೂ ಕಾಣಿಸುತ್ತಿದೆ. ಭದ್ರತಾ ಕಾರಣಗಳ ಹಿನ್ನೆಲೆಯಿಂದ, ಈಗಾಗಲೇ ನಿನ್ನೆ ನಡೆಯಬೇಕಿದ್ದ ಪಂದ್ಯವನ್ನು ಬಿಸಿಸಿಐ ರದ್ದು ಸಹ ಮಾಡಿತ್ತು.
ಆಟಗಾರರ ಸುರಕ್ಷತೆ ದೃಷ್ಟಿಯಿಂದ, ನಿನ್ನೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ರದ್ದುಪಡಿಸಲಾಯಿತು. ನಂತರ, ಆಟಗಾರರನ್ನು ತಕ್ಷಣವೇ ಹೋಟೆಲ್‌ಗೆ ಕರೆತರಲಾಯಿತು ಎಂದು ಮಾಹಿತಿಯನ್ನು ತಿಳಿಸಿದೆ.
ಮುಂದಿನ ಎಲ್ಲಾ ಪಂದ್ಯಗಳು ಯಾವ ದಿನ ನಡೆಯುತ್ತದೆ ಎಂಬುವುದನ್ನು ಬಿಸಿಸಿಐ ನಿರ್ಧಾರದ ಮೇಲೆ ನಿಂತಿದ್ದು, ಎಲ್ಲರ ಚಿತ್ತ ಮುಂದಿನ ಐಪಿಎಲ್ ಪಂದ್ಯಗಳತ್ತ ನೆಟ್ಟಿದೆ.


Click it and Unblock the Notifications