For Quick Alerts
ALLOW NOTIFICATIONS  
For Daily Alerts

ಐಪಿಒ ಸಂತೆ: 80,000 ಕೋಟಿ ಸಂಗ್ರಹಕ್ಕೆ ಬರಲಿದೆ 40 ಐಪಿಒ

|

ಪ್ರತಿ ವರ್ಷ ಷೇರುಪೇಟೆಗೆ ಹಲವಾರು ಕಂಪನಿಗಳ ಐಪಿಒ ಲಗ್ಗೆ ಇಡುತ್ತಿವೆ. ಈ ವರ್ಷವು ಅನೇಕ ಕಂಪನಿಗಳು ಐಪಿಒಗೆ ಅರ್ಜಿಯನ್ನ ಸಲ್ಲಿಸಿದ್ದು ಪ್ರಾಥಮಿಕ ಮಾರುಕಟ್ಟೆಯು ಈಗಾಗಲೇ 30 ಕಂಪನಿಗಳಿಂದ 80,000 ಕೋಟಿ ರೂ.ಗಳನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಸಂಗ್ರಹಕ್ಕೆ ಯೋಜನೆ ಹಾಕಿಕೊಂಡಿವೆ.

ಇದಷ್ಟೇ ಅಲ್ಲದೆ ಈಗಾಗಲೇ 10 ಕಂಪನಿಗಳು ಈ ತಿಂಗಳಿನಲ್ಲಿ ಐಪಿಒ ಮೂಲಕ 25,000 ಕೋಟಿ ರೂ. ಸಂಗ್ರಹಕ್ಕೆ ಮುಂದಾಗಿವೆ.

ಭಾರತೀಯ ಮಾರುಕಟ್ಟೆಯು ಹೂಡಿಕೆದಾರರ ಒಳಹರಿವಿನ ಹೆಚ್ಚಳ ಹಿನ್ನಲೆಯಲ್ಲಿ ಪ್ರತಿ ವಾರವು ಹೊಸ ದಾಖಲೆಯ ಮಟ್ಟವನ್ನು ತಲುಪುತ್ತಿದೆ. 2020-21ರ ಹಣಕಾಸು ವರ್ಷದಲ್ಲಿ ವಿದೇಶಿ ನಿಧಿಗಳು ದಾಖಲೆಯ 35 ಶತಕೋಟಿ ಡಾಲರ್‌ಗಳನ್ನು ಭಾರತದ ಮಾರುಕಟ್ಟೆಗೆ ಹೂಡಿಕೆ ಮಾಡಿವೆ. ವರ್ಷದಲ್ಲಿ 20 ದಶಲಕ್ಷಕ್ಕೂ ಹೆಚ್ಚು ಹೊಸ ಹೂಡಿಕೆದಾರರು ಮಾರುಕಟ್ಟೆಗೆ ಬರುತ್ತಿದ್ದಾರೆ.

40 ಐಪಿಒ: 80,000 ಕೋಟಿ ಸಂಗ್ರಹದ ಗುರಿ!

ಪ್ರಸ್ತುತ ವರ್ಷದಲ್ಲಿ ಇಲ್ಲಿಯವರೆಗೆ 22 ಐಪಿಒಗಳಿಂದ ಈಗಾಗಲೇ 27,426 ಕೋಟಿ ರೂ.ಗಳನ್ನು ಸಂಗ್ರಹಿಸಿರುವ ಮೂಲಕ ನಿಧಿಸಂಗ್ರಹದ ದಾಖಲೆ ನಿರ್ಮಾಣವಾಗಿದೆ.

2020 ರಲ್ಲಿ, 16 ಐಪಿಒಗಳು 26,628 ಕೋಟಿ ರೂ.ಗಳನ್ನು ಸಂಗ್ರಹಿಸಿವೆ, ಮತ್ತು ಇದೇ ರೀತಿಯ ಸಂಖ್ಯೆಯ ಐಪಿಒಗಳು 2019 ರಲ್ಲಿ 12,687 ಕೋಟಿ ರೂ. ಸಂಗ್ರಹಿಸಿವೆ. ಅದೇ ರೀತಿಯಲ್ಲಿ 2018ರಲ್ಲಿ 25 ಕಂಪನಿಗಳು 31,731 ಕೋಟಿ ರೂ.ಗಳನ್ನು ಸಂಗ್ರಹಿಸಿರುವುದು ಇದುವರೆಗೆ ಪ್ರಾಥಮಿಕ ಮಾರುಕಟ್ಟೆಗೆ ದಾಖಲೆಯಾಗಿದೆ.

ಇವುಗಳಲ್ಲದೆ, ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್, ರೋಲೆಕ್ಸ್ ರಿಂಗ್ಸ್ ಮತ್ತು ಸೆವೆನ್ ಐಲ್ಯಾಂಡ್ಸ್ ಶಿಪ್ಪಿಂಗ್ ಸೇರಿದಂತೆ ಕಂಪನಿಗಳು ತಮ್ಮ ಐಪಿಒಗಳನ್ನು ಗ್ರೀನ್‌ ಸಿಗ್ನಲ್ ನೀಡುವಂತೆ ಸೆಬಿಯನ್ನು ಕೇಳಿಕೊಂಡಿವೆ.

ಈ ತಿಂಗಳು ಮಾರುಕಟ್ಟೆಗೆ ಬರುವ ಸಾಧ್ಯತೆ ಇರುವ ಕಂಪನಿಗಳಲ್ಲಿ ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್, ಜೊಮ್ಯಾಟೊ (8,500 ಕೋಟಿ ರೂ.ಗಳ ಸಂಚಿಕೆ ಜುಲೈ 14 ರಂದು ತೆರೆಯಲಿದೆ), ವಿಂಡ್‌ಲಾಸ್ ಬಯೋಟೆಕ್, ಮೆಡಿ ಅಸಿಸ್ಟ್ ಟಿಪಿಎ, ತತ್ವಾ ಚಿಂತನ್ ಫಾರ್ಮಾ, ಪ್ಯಾರಾಸ್ ಡಿಫೆನ್ಸ್ ಮತ್ತು ಸೆವೆನ್ ಐಲ್ಯಾಂಡ್ ಶಿಪ್ಪಿಂಗ್ ಸೇರಿವೆ.

English summary

IPO Festival: 40 Odd issues On The Way To Mop Up Rs 80,000 Crore

The primary market is set for a bumper Rs 80,000 crore bonanza with 30 companies already filing IPO papers to raise Rs 55,000 crore
Story first published: Friday, July 9, 2021, 15:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X