ನೂತನ ವರ್ಷ ಪ್ರಾರಂಭಕ್ಕೆ ಕೆಲವು ಕ್ಷಣಗಳು ಮಾತ್ರ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಸಿಹಿಸುದ್ದಿ ಕೊಟ್ಟಿದೆ. ಹೌದು, ಭಾರತೀಯ ಷೇರು ಮಾರುಕಟ್ಟೆಗೆ ಈ ವರ್ಷ ( 2024ರಲ್ಲಿ) ನೂರಾರು ಐಪಿಒಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಆದರೆ, ಈ ಭಾರೀ ಹಲವಾರು ಐಪಿಒಗಳ ಭರಾಟೆ ಜೋರಾಗಿತ್ತು. ಇದೀಗ 2024 ಮುಗಿಯುತ್ತಿದ್ದು, 2025ರ ನೂತನ ವರ್ಷ ಆರಂಭವಾಗಲಿದೆ. ಹೊಸ ವರ್ಷದಲ್ಲಿ ಐಪಿಒಗಳ ಮೇನಿಯಾ ಸಹ ಜೋರಾಗಲಿದ್ದು, ಹಲವಾರು ಪ್ರಮುಖ ಐಪಿಒಗಳು ಷೇರು ಪೇಟೆಗೆ ಲಗ್ಗೆ ಇಡಲಿವೆ.
ಹೌದು, 2024ರಲ್ಲಿ ಐಪಿಒಗಳ ಮೂಲಕ ಕಂಪನಿಗಳು ಒಟ್ಟು 1.62 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಣೆ ಮಾಡಿದೆ.ಅಲ್ಲದೆ, ಅರ್ಹ ಸಾಂಸ್ಥಿಕ ನಿಯೋಜನೆಗಳು ಮತ್ತು ರೈಟ್ಸ್ ವಿತರಣೆಯೂ ಆಗಿದೆ. ಇವೆಲ್ಲವನ್ನೂ ಸೇರಿಸಿದರೆ ಈ ವರ್ಷದ ಒಟ್ಟು 3 ಲಕ್ಷ ಕೋಟಿಗೂ ಹೆಚ್ಚು ಮೊತ್ತ ಸಂಗ್ರಹವಾಗಿದೆ.ಈ IPOಗಳಲ್ಲಿ ಷೇರು ಮಾರುಕಟ್ಟೆಗೆ ಹೆಚ್ಚಿನ ಹೂಡಿಕೆದಾರರಿಗೆ ಲಿಸ್ಟಿಂಗ್ ದಿನವೇ ಲಾಭ ಒದಗಿಸಿವೆ. ಕಳೆದ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ, ಸಣ್ಣ ಮತ್ತು ದೊಡ್ಡ IPOಗಳು ಬರುತ್ತಲೇ ಇದ್ದವು. ಹೊಸ ವರ್ಷದಲ್ಲಿ ಐಪಿಒಗಳ ಭರಾಟೆ ಜೋರಾಗಲಿದ್ದು, ಹಲವಾರು ಪ್ರಮುಖ ಐಪಿಒಗಳು ಷೇರುಪೇಟೆಗೆ ಎಂಟ್ರಿ ಕೊಡಲಿವೆ.

2024 ರಲ್ಲಿ, ಬಜಾಜ್ ಹೌಸಿಂಗ್ ಫೈನಾನ್ಸ್, ಎನ್‌ಟಿಪಿಸಿ ಗ್ರೀನ್ ಎನರ್ಜಿ, ಸ್ವಿಗ್ಗಿ, ಓಲಾ ಎಲೆಕ್ಟ್ರಿಕ್‌ನಂತಹ ಒಟ್ಟು 90 ಕಂಪನಿಗಳು ಐಪಿಒ ತೆರೆದಿದ್ದವು. ಆಟೋಮೊಬೈಲ್ ಕಂಪನಿ ಹ್ಯುಂಡೈ ಮೋಟಾರ್ಸ್ 27 ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹಿಸುವ ಮೂಲಕ ಅತಿದೊಡ್ಡ IPO ಎನಿಸಿತು. 2022ರಲ್ಲಿ ಎಲ್‌ಐಸಿ ಐಪಿಒ ಮೂಲಕ 20 ಸಾವಿರ ಕೋಟಿ ದಾಟಿ ದಾಖಲೆ ನಿರ್ಮಿಸಿತ್ತು. 2025ರಲ್ಲಿ ಈ ಎಲ್ಲ ದಾಖಲೆಗಳನ್ನು ಹಿಂದಿಕ್ಕುವ ಸಾಧ್ಯತೆ ಇದೆ ಎನ್ನಲಾಗಿದೆ.
2025ರಲ್ಲಿ ಬರಲಿರುವ IPOಗಳು
2025 ರಲ್ಲಿ ದೈತ್ಯ ಕಂಪನಿಗಳೇ IPOವನ್ನು ತೆರೆಯಲಿವೆ. ಈ ಪೈಕಿ ದಕ್ಷಿಣ ಕೊರಿಯಾ ಮೂಲದ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಕೂಡ ಸೇರಿದೆ. ಇದು ಐಪಿಒ ಮೂಲಕ 15 ಬಿಲಿಯನ್ ಡಾಲರ್ ಸಂಗ್ರಹಿಸುವ ಉದ್ದೇಶ ಹೊಂದಿದೆ. ವಾಲ್‌ಮಾರ್ಟ್ ಒಡೆತನದ ಇ-ಕಾಮರ್ಸ್ ಕಂಪನಿಯಾದ ಫ್ಲಿಪ್‌ಕಾರ್ಟ್ ಕೂಡ 2025ರಲ್ಲಿ ಐಪಿಒ ತೆರೆಯುವ ಸಾಧ್ಯತೆ ಇದೆ. ಇದರ ಭಾಗವಾಗಿ ತನ್ನ ಹಿಡುವಳಿ ಕಂಪನಿಯನ್ನು ಸಿಂಗಾಪುರದಿಂದ ಭಾರತಕ್ಕೆ ಸ್ಥಳಾಂತರಿಸುವ ಪ್ರಯತ್ನದಲ್ಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ಹೀರೋ ಮೋಟೋ ಕಾರ್ಪ್, ರಿಲಯನ್ಸ್ ಇಂಡಸ್ಟ್ರೀಸ್, ಮಣಪ್ಪುರಂ ಫೈನಾನ್ಸ್, ಟಾಟಾ ಮೋಟಾರ್ಸ್, ಮುತ್ತೂಟ್ ಫೈನಾನ್ಸ್, ಕೆನರಾ ಬ್ಯಾಂಕ್, ಬ್ರಿಗೇಡ್ ಎಂಟರ್‌ಪ್ರೈಸಸ್‌ನಂತಹ ಕಂಪನಿಗಳ ಅಂಗಸಂಸ್ಥೆಗಳು 2025 ರಲ್ಲಿ ಐಪಿಒ ತೆರೆಯಲಿವೆ.
ರಿಲಯನ್ಸ್ ಜಿಯೋ 2025ರಲ್ಲಿ ಅತಿದೊಡ್ಡ IPO ಆಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆಯ ಮೂಲಗಳು ಹೇಳುತ್ತಿವೆ. ಜಿಯೋ ಪ್ರಮುಖ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮುತ್ತಿದ್ದು,ಇದು ಈಗಾಗಲೇ ಸ್ಥಿರ ಬೆಳವಣಿಗೆ ಮತ್ತು ಆದಾಯವನ್ನು ದಾಖಲೆ ಮಾಡಿದೆ. ಹ್ಯುಂಡೈ ಹೆಸರಿನಲ್ಲಿರುವ ದಾಖಲೆಯನ್ನು ರಿಲಯನ್ಸ್ ಮುರಿಯಲಿದೆ ಎನ್ನುತ್ತವೆ ಮಾರುಕಟ್ಟೆ ಪರಿಸ್ಥಿತಿಗಳು ಎಂದು ಮಾರುಕಟ್ಟೆಯ ಮೂಲಗಳು ಮಾಹಿತಿ ತಿಳಿಸಿವೆ.
2025ರಲ್ಲಿ ಹೆಚ್ಚಿನ ಸಂಖ್ಯೆಯ ಕಂಪನಿಗಳು ಐಪಿಒ ತೆರೆಯಲು ಸಿದ್ದತೆಯಲ್ಲಿವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಹೊಸ ವರ್ಷದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಲವಾರು ಅವಕಾಶಗಳು ತೆರೆದುಕೊಳ್ಳಲಿವೆ.
ಇಂದು ಕುಸಿತ ತಂಡ ಷೇರುಗಳು
ಸೆನ್ಸೆಕ್ಸ್ನಲ್ಲಿ ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕುಸಿತ ಕಂಡ ಪ್ರಮುಖ ಷೇರುಗಳಾಗಿವೆ. ಟೆಕ್ ಮಹೀಂದ್ರಾ ಶೇ.ರಷ್ಟು ಕುಸಿದಿದೆ. ಜೊಮಾಟೊ, ಟಿಸಿಎಸ್, ಇನ್ಫೋಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ತಲಾ ಶೇ 1 ರಿಂದ 2 ರಷ್ಟು ಕುಸಿತ ಕಂಡಿವೆ.
ಇಂದು ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಿದ ಷೇರುಗಳು
ಕೋಟಕ್ ಬ್ಯಾಂಕ್ ಶೇ. 2.5 ರಷ್ಟು ಲಾಭ ಗಳಿಸಿದೆ. ಐಟಿಸಿ, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಲಾಭ ಕಂಡ ಇತರ ಪ್ರಮುಖ ಷೇರುಗಳಾಗಿವೆ.


Click it and Unblock the Notifications