ಹೆಚ್ಚಿನವರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಟ್ರಾವೆಲ್ ಮಾಡಬೇಕಿದ್ದರೆ ಬಸ್ಸು, ರೈಲು, ವಿಮಾನ ಹೀಗೆ ಯಾವುದಾದರೂ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತಾರೆ. ಅದರಲ್ಲೂ ಕಡಿಮೆ ಬೆಲೆ ಮತ್ತು ವೇಗದ ಪ್ರಯಾಣದ ಮೂಲಕ ಭಾರತೀಯ ರೈಲ್ವೇ ಭಾರೀ ಜನಪ್ರಿಯತೆ ಪಡೆದಿದೆ. ತನ್ನ ಉತ್ತಮ ಸೇವೆಯಿಂದಾಗಿ ಭಾರತೀಯ ರೈಲ್ವೇ ಇಲಾಖೆ ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ಇದೀಗ ಗ್ರಾಹಕರ ಅನುಕೂಲಕ್ಕಾಗಿ, ಸುರಕ್ಷತೆಗಾಗಿ ಭಾರತೀಯ ರೈಲ್ವೇ ಇಲಾಖೆ (Indian Railways) 2025 ರಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಕಳೆದ ತಿಂಗಳಷ್ಟೇ ಭಾರತೀಯ ರೈಲ್ವೇ ಇಲಾಖೆ, ಮೀಸಲು ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ಆಧಾರ್ ಪರಿಶೀಲನೆ ಕಡ್ಡಾಯ ಎಂದು ಹೇಳಿತ್ತು. ಇದೀಗ ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ರೈಲ್ವೇ ಇಲಾಖೆ ಮತ್ತೊಂದು ನಿಯಮವನ್ನು ಜಾರಿಗೆ ತಂದಿದೆ. ಇಂಟಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ (IRCTC) ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಬದಲಾವಣೆ ಜಾರಿಗೆ ತರಲಾಗಿದೆ.
ಪ್ರಯಾಣಿಕರಿಗೆ ಅನುಕೂಲ:
ರೈಲ್ವೇ ಇಲಾಖೆಯ ಈ ಹೊಸ ಕ್ರಮವು ಮೀಸಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅದೇ ರೀತಿ, ಮಧ್ಯವರ್ತಿಗಳು ಮತ್ತು ಸ್ಕ್ಯಾಮ್‌ಗಳಿಂದ ದುರುಪಯೋಗವಾಗುವುದಂತೆ ತಡೆಯುವ ಗುರಿಯನ್ನು ಹೊಂದಿದೆ. ಐಆರ್‌ಸಿಟಿಸಿ ರೈಲು ಟಿಕೆಟ್ ಬುಕಿಂಗ್ ನಿಯಮಗಳ ಪ್ರಕಾರ, ಸಾಮಾನ್ಯ ಮೀಸಲಾತಿ ತೆರೆದ ಮೊದಲ 15 ನಿಮಿಷಗಳಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಟಿಕೆಟ್ ಕಾಯ್ದಿರಿಸುವವರು, ಆಧಾರ್ ಆಧಾರಿತ ಪರಿಶೀಲನೆಯನ್ನು ಕಡ್ಡಾಯವಾಗಿ ಮಾಡಲೇಬೇಕು.
ಅಷ್ಟೇ ಅಲ್ಲದೇ, ಭಾರತೀಯ ರೈಲ್ವೇಯ ಕಂಪ್ಯೂಟರೀಕೃತ ಪಿಆರ್‌ಎಸ್ ಕೌಂಟರ್‌ಗಳ ಮೂಲಕ ಸಾಮಾನ್ಯ ಮೀಸಲು ಟಿಕೆಟ್‌ಗಳ ಬುಕಿಂಗ್ ಟೈಮ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ. "ಸಾಮಾನ್ಯ ಮೀಸಲಾತಿ ತೆರೆದ ಮೊದಲ 10 ನಿಮಿಷಗಳಲ್ಲಿ, ಭಾರತೀಯ ರೈಲ್ವೇಯ ಅಧಿಕೃತ ಟಿಕೆಟಿಂಗ್ ಏಜೆಂಟರಿಗೆ ಮೀಸಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಅವಕಾಶವಿರುವುದಿಲ್ಲ" ಎಂದು ರೈಲ್ವೇ ಸಚಿವಾಲಯ ಸೂಚಿಸಿದೆ.
ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್‌ನ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಬೆಳಗಿನ ಸಮಯದಲ್ಲಿ ಮೀಸಲು ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಆಧಾರ್ ಆಧಾರಿತ ದೃಢೀಕರಣವನ್ನು ಐಆರ್‌ಸಿಟಿಸಿ ಕಡ್ಡಾಯಗೊಳಿಸಿದೆ. ಜೊತೆಗೆ ಏಜೆಂಟರಿಗೆ ಹತ್ತು ನಿಮಿಷ ತಡವಾಗಿ ಬುಕ್ ಮಾಡಲು ಆಯ್ಕೆ ನೀಡಿದೆ. "2025ರ ಅಕ್ಟೋಬರ್ 28ರಿಂದ, ಮೀಸಲು ಟಿಕೆಟ್ ಬುಕಿಂಗ್ ತೆರೆದ ಮೊದಲ ದಿನ ಬೆಳಿಗ್ಗೆ 8 ರಿಂದ 10 ಗಂಟೆಯ ನಡುವೆ, ಆಧಾರ್ ದೃಢೀಕೃತ ಬಳಕೆದಾರರಿಗೆ ಮಾತ್ರ ಟಿಕೆಟ್‌ಗಳನ್ನು ಕಾಯ್ದಿರಿಸಲು ಅವಕಾಶವಿದೆ" ಎಂದು ಐಆರ್‌ಸಿಟಿಸಿ ಪ್ರಕಟಿಸಿದೆ.
ಭಾರತೀಯ ರೈಲ್ವೇ ಇಲಾಖೆಯ ಹೊಸ ನಿಯಮದನುಸಾರ ಇನ್ಮೇಲೆ ಪ್ರಯಾಣಿಕರು ತಮಗೆ ಬೇಕಾದ ಟಿಕೆಟ್‌ಗಳನ್ನು ಆರಾಮದಲ್ಲಿ ಕಾಯ್ದಿರಿಸಬಹುದು. ಹಿಂದೆಲ್ಲಾ ಪ್ರಯಾಣಿಕರು ಏಜೆಂಟ್‌ಗಳಿಂದಾಗಿ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ವಿಳಂಬಗಳನ್ನು ಅನುಭವಿಸುತ್ತಿದ್ದರು. ಆದ್ರೆ ಇದೀ ಭಾರತೀಯ ರೈಲ್ವೇ ಇಲಾಖೆಯ ಈ ನಿರ್ಧಾರದಿಂದಾಗಿ ಪ್ರಯಾಣಿಕರು ಆರಾಮವಾಗಿ ಟಿಕೆಟ್ ಬುಕ್ ಮಾಡಬಹುದು.


Click it and Unblock the Notifications