ಆದಾಯ ತೆರಿಗೆ ಇಲಾಖೆಯಿಂದ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್ ವಿತರಿಸುವ ಬಗ್ಗೆ ನಿಮಗೆ ಗೊತ್ತಿರಬಹುದು. ಇಂಗ್ಲಿಷ್ ಅಕ್ಷರ ಹಾಗೂ ಸಂಖ್ಯೆ ಹೊಂದಿರುವ ಹತ್ತು ಅಂಕಿಯ ವಿಶಿಷ್ಟ ಗುರುತು ಇದು. ಭಾರತದಲ್ಲಿ ಯಾರೆಲ್ಲ ತೆರಿಗೆ ಕಟ್ಟಬೇಕೋ ಅವರಿಗೆಲ್ಲ ಪ್ಯಾನ್ ಕಡ್ಡಾಯ. ಅಷ್ಟೇ ಅಲ್ಲ, ಅಪ್ರಾಪ್ತ ವಯಸ್ಕರು ಮತ್ತು ವಿದೇಶೀಯರು ಕೂಡ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಯಾವುದೇ ವ್ಯಕ್ತಿ ಪ್ಯಾನ್ ಕಾರ್ಡ್ ಬಳಸಿ ನಡೆಸಿದ ಆರ್ಥಿಕ ವ್ಯವಹಾರಗಳು ಎಲ್ಲವೂ ಆದಾಯ ತೆರಿಗೆ ಇಲಾಖೆ ಗಮನಕ್ಕೆ ಬರುತ್ತದೆ. ಅಷ್ಟೇ ಅಲ್ಲ, ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್ ಕ್ರೆಡಿಟ್ಸ್, ನಿರ್ದಿಷ್ಟ ವ್ಯವಹಾರ ಮುಂತಾದವು ತೆರಿಗೆ ಇಲಾಖೆಗೆ ತಿಳಿಯುತ್ತದೆ. ಒಬ್ಬ ವ್ಯಕ್ತಿ ಪಡೆದ ಸಾಲ, ಮಾಡಿದ ಹೂಡಿಕೆ ಮತ್ತಿತರ ವ್ಯಾವಹಾರಿಕ ಚಟುವಟಿಕೆಗಳು ಅಷ್ಟೂ ತಿಳಿದುಕೊಳ್ಳಲು ಐಟಿ ಇಲಾಖೆಗೆ ನೆರವಾಗುತ್ತದೆ.

ಆದರೆ, ಪ್ಯಾನ್ ಕಾರ್ಡ್ ಹೊಂದಿರುವುದು ಕಡ್ಡಾಯವೇ?
ಈ ಕೆಳಗೆ ತಿಳಿಸಿದ ಸನ್ನಿವೇಶಗಳಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ.
* ಯಾವುದೇ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಕಟ್ಟಬೇಕಿದ್ದಲ್ಲಿ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕಿದ್ದಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯ.
* ಯಾವುದೇ ವ್ಯಾಪಾರ ಅಥವಾ ವೃತ್ತಿ ನಡೆಸುತ್ತಿದ್ದಲ್ಲಿ ಅದರ ಒಟ್ಟು ಮಾರಾಟ, ವಹಿವಾಟು ಅಥವಾ ಒಟ್ಟಾರೆ ಪಡೆದ ಹಣವು ಯಾವುದೇ ವರ್ಷದಲ್ಲಿ ಐದು ಲಕ್ಷ ದಾಟಿದಲ್ಲಿ.
* ದ್ವಿಚಕ್ರ ವಾಹನಕ್ಕಿಂತ ದೊಡ್ಡದು ಮಾರುವಾಗ ಆದಾಯ ತೆರಿಗೆ ಕಡ್ಡಾಯ. ಬ್ಯಾಂಕ್ ಖಾತೆ ಅಥವಾ ಡಿಮ್ಯಾಟ್ ಖಾತೆ ತೆರೆಯುವಾಗ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಬೇಕಿದ್ದಲ್ಲಿ, ಹೋಟೆಲ್ ಅಥವಾ ರೆಸ್ಟೋರೆಂಟ್ ಗೆ ಬಿಲ್ ಐವತ್ತು ಸಾವಿರಕ್ಕಿಂತ ಹೆಚ್ಚು ನಗದು ಕಟ್ಟಬೇಕಾದಾಗ, ವಿದೇಶಿ ವಿನಿಮಯ ಖರೀದಿಗೆ ಐವತ್ತು ಸಾವಿರಕ್ಕೂ ಹೆಚ್ಚು ಅಗತ್ಯ ಇದ್ದಾಗ ಪ್ಯಾನ್ ಕಾರ್ಡ್ ಅಗತ್ಯ
ಯಾರಿಗೆ ಪ್ಯಾನ್ ಕಾರ್ಡ್ ಅಗತ್ಯ ಇಲ್ಲ?
* ಅಪ್ರಾಪ್ತ ವಯಸ್ಕರು ಇದ್ದಲ್ಲಿ ತಮ್ಮ ತಂದೆ- ತಾಯಿ ಅಥವಾ ಪೋಷಕರ ಹೆಸರು ಬಳಸಬಹುದು.
* ಅನಿವಾಸಿ ಭಾರತೀಯರು ಪ್ಯಾನ್ ನಮೂದಿಸುವ ಅಗತ್ಯ ಇಲ್ಲ ಅಥವಾ ಕೆಲ ಪ್ರಕರಣಗಳಲ್ಲಿ ನಿರ್ದಿಷ್ಠ ವ್ಯವಹಾರ ಮಾಡುವಾಗಲೂ ಪ್ಯಾನ್ ಬೇಡ.
* ಯಾರ ಆದಾಯವು ಆದಾಯ ತೆರಿಗೆ ಮಿತಿಗಿಂತ ಕಡಿಮೆ ಇದ್ದರೆ ಪ್ಯಾನ್ ಕಾರ್ಡ್ ಮಾಹಿತಿ ನೀಡುವ ಅಗತ್ಯ ಇಲ್ಲ. ಬ್ಯಾಂಕ್ ಖಾತೆ ತೆರೆಯಲು, ಮ್ಯೂಚ್ಯುವಲ್ ಫಂಡ್ಸ್ ಮೌಲ್ಯ 50,000 ರುಪಾಯಿ ಮತ್ತು ಅದಕ್ಕಿಂತ ಹೆಚ್ಚು ಖರೀದಿ ಮಾಡಬೇಕಿದ್ದರೆ ಮುಂತಾದವಕ್ಕೆ ಫಾರ್ಮ್ 60 ಕಡ್ಡಾಯ. ಆ ಮೂಲಕ ಈಗ ಇರುವ ಆದಾಯವು ತೆರಿಗೆ ಮಿತಿಯೊಳಗೆ ಇದೆ ಎಂದು ಫಾರ್ಮ್ ಸಹಿ ಮಾಡಿದರೆ ಆಯಿತು.
* ಕಳೆದ ಸೆಪ್ಟೆಂಬರ್ ನಿಂದ ಆದಾಯ ತೆರಿಗೆ ಇಲಾಖೆ ಒಂದು ನಿಯಮ ತಂದಿದೆ. ಅದರ ಪ್ರಕಾರ, ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಆಧಾರ್ ಕಾರ್ಡ್ ಮಾಹಿತಿ ನಮೂದಿಸಿ. ಆದಾಯ ತೆರಿಗೆ ಫೈಲಿಂಗ್ ವೇಳೆ ಪ್ಯಾನ್ ಕಾರ್ಡ್ ತಾನಾಗಿಯೇ ಜನರೇಟ್ ಆಗುತ್ತದೆ. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೋ ಇಲ್ಲವೋ ಅದರ ಬದಲಿಗೆ ಆಧಾರ್ ಸಂಖ್ಯೆಯನ್ನೇ ನಮೂದಿಸಬಹುದು.


Click it and Unblock the Notifications