ಆದಾಯ ತೆರಿಗೆ ಇಲಾಖೆ ಅಕ್ಟೋಬರ್ 4 ಬುಧವಾರ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ಲಿಮಿಟೆಡ್‌ನ ಹಲವು ನಗರಗಳಲ್ಲಿ ಇರುವ ಕಚೇರಿಗಳ ಮೇಲೆ ದಾಳಿಯನ್ನು ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪುರವಂಕರ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಸುಮಾರು 40 ಕಚೇರಿ, ಸ್ಥಳ, ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯು ನಿನ್ನೆ (ಅಕ್ಟೋಬರ್ 4) ದಾಳಿಯನ್ನು ನಡೆಸಿದೆ. ಈಗಲೂ ಶೋಧ ಕಾರ್ಯಾಚರಣೆಯು ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆದಾಯ ತೆರಿಗೆ ಇಲಾಖೆಯು ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ಲಿಮಿಟೆಡ್‌ನ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಇರುವ ಕಚೇರಿಗಳ ಮೇಲೆ ದಾಳಿಯನ್ನು ನಡೆಸಿದೆ ಎಂದು ವರದಿ ತಿಳಿಸಿದೆ.
ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ವಲಯದ ನಿರ್ಮಾಣದ ಕಂಪನಿಯಾದ ಪುರವಂಕರ ಲಿಮಿಟೆಡ್, ಪ್ರತಿ ಷೇರಿಗೆ 124.70 ರೂಪಾಯಿಯಂತೆ ಬುಧವಾರ ವಹಿವಾಟು ಕೊನೆಗೊಳಿಸಿದೆ. ಬುಧವಾರ ಮಧ್ಯಾಹ್ನ 3:59ಕ್ಕೆ ಸ್ಟಾಕ್ ಸುಮಾರು ಶೇಕಡ 2.73 ರಷ್ಟು ಕುಸಿತವನ್ನು ದಾಖಲಿಸಿದೆ.
ಇನ್ನು ಗುರುವಾರ ಈ ಸಮಯಕ್ಕೆ ಪುರವಂಕರ ಲಿಮಿಟೆಡ್ ಸ್ಟಾಕ್ ಸುಮಾರು ಶೇಕಡ 3.29 ರಷ್ಟು ಜಿಗಿತ ಕಂಡು, 128.80 ರೂಪಾಯಿಗೆ ತಲುಪಿದೆ. ಸ್ಟಾಕ್‌ನ 52 ವಾರಗಳ ಗರಿಷ್ಠ ಮಟ್ಟ 136.45 ರೂಪಾಯಿ ಆಗಿದ್ದು, 52 ವಾರಗಳ ಕನಿಷ್ಠ ಮಟ್ಟ 58.20 ರೂಪಾಯಿ ಆಗಿದೆ.


Click it and Unblock the Notifications