2024-25ನೇ ಹಣಕಾಸು ವರ್ಷದ (AY 2025-26) ಆದಾಯ ತೆರಿಗೆ ರಿಟರ್ನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಸೆಪ್ಟೆಂಬರ್ 15. ಆದರೆ ಇದಕ್ಕೂ ಮೊದಲು ಆದಾಯ ತೆರಿಗೆ ಇಲಾಖೆಯು ದೇಶಾದ್ಯಂತ ಐಟಿ ದಾಳಿ ಕ್ರಮಗಳನ್ನು ಕೈಗೊಂಡಿದೆ. ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಮೋಸದ ಕಡಿತಗಳನ್ನು ಪಡೆಯಲು ಕಾಗದರಹಿತ ರಿಟರ್ನ್ ಫೈಲಿಂಗ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿರುವ ಚಾರ್ಟರ್ಡ್ ಅಕೌಂಟೆಂಟ್‌ಗಳು, ಅಕೌಂಟೆಂಟ್‌ಗಳು ಮತ್ತು ಸಂಬಳ ಪಡೆಯುವ ತೆರಿಗೆದಾರರು ಸೇರಿದಂತೆ 200 ಕ್ಕೂ ಹೆಚ್ಚು ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆಯನ್ನು ಐಟಿ ಇಲಾಖೆ ಆರಂಭವನ್ನು ಮಾಡಿದೆ.
ಮನೆ ಬಾಡಿಗೆ ಭತ್ಯೆ (HRA), ವಿದ್ಯುತ್ ವಾಹನ (EV) ಸಾಲ ಕಡಿತಗಳು ಮತ್ತು ಸೆಕ್ಷನ್ 80GGC ಅಡಿಯಲ್ಲಿ ರಾಜಕೀಯ ದೇಣಿಗೆಗಳಿಗೆ ಸಂಬಂಧಿಸಿದ ನಕಲಿ ಹಕ್ಕುಗಳು ಈ ದಾಳಿಯನ್ನು ಗುರಿಯಾಗಿಸಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ರಾಜಕೀಯ ಪಕ್ಷಗಳಿಗೆ ನೀಡುವ ಕೊಡುಗೆಗಳಿಗೆ ಕಡಿತಗೊಳಿಸಲು ಅನುಮತಿಸುವ ಸೆಕ್ಷನ್ 80GGCಯ ದುರುಪಯೋಗ ಹೆಚ್ಚಾಗಿದೆ. ನೋಂದಾಯಿತ ಗುರುತಿಸಲಾಗದ ರಾಜಕೀಯ ಪಕ್ಷಗಳಿಗೆ (RUPPS) ನಕಲಿ ದೇಣಿಗೆಗಳನ್ನು ಬಳಸಿ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿಗಳಷ್ಟು ತೆರಿಗೆಯನ್ನು ತಪ್ಪಿಸಲಾಗಿದೆ ಎಂದು ವರದಿಗಳು ಆಗಿವೆ.
ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ ರಾಜಕೀಯ ಪಕ್ಷಗಳನ್ನು ದೊಡ್ಡ ಪ್ರಮಾಣದ ತೆರಿಗೆ ವಂಚನೆಗೆ ಸಾಧನಗಳಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಮುಂಬೈ, ದೆಹಲಿ, ಜೈಪುರ ಮತ್ತು ಅಹಮದಾಬಾದ್‌ಗಳನ್ನು ಒಳಗೊಂಡಂತೆ ದೇಶಾದ್ಯಂತ ಗುರುತಿಸಲಾದ ಹೆಚ್ಚಿನ ಸ್ಥಳಗಳಲ್ಲಿ ಇಲಾಖೆಯು ಸೆಕ್ಷನ್ 132 ಮತ್ತು ಸೆಕ್ಷನ್ 133A ಅಡಿಯಲ್ಲಿ ಕಾರ್ಯಾಚರಣೆಗಳನ್ನು ಐಟಿ ಇಲಾಖೆಯು ಕಾರ್ಯಾಚರರಣೆಯನ್ನು ಮಾಡಿದೆ.
ಈ ವರ್ಷದ ಆರಂಭದಲ್ಲಿ, ತೆರಿಗೆದಾರರಿಗೆ ತಮ್ಮ ಫೈಲಿಂಗ್‌ಗಳಲ್ಲಿ ಅನುಮಾನಾಸ್ಪದ ಕಡಿತಗಳ ಬಗ್ಗೆ ಎಚ್ಚರಿಕೆ ನೀಡಲು ಐಟಿ ಇಲಾಖೆಯು ಒಂದು ಅಭಿಯಾನವನ್ನು ಸಹ ಪ್ರಾರಂವನ್ನು ಸಹ ಮಾಡಿತ್ತು. ಎಚ್ಚರಿಕೆಗಳ ಹೊರತಾಗಿಯೂ, ಅನೇಕ ತೆರಿಗೆದಾರರು ಕೃತ್ರಿಮ ಹಕ್ಕುಗಳನ್ನು ಸಲ್ಲಿಸುವುದನ್ನು ಮುಂದುವರೆಸಿದರು.

ಡಿಜಿಟಲ್ ತೆರಿಗೆ ಪ್ರಕ್ರಿಯೆಗಳ ವ್ಯವಸ್ಥಿತ ದುರುಪಯೋಗವನ್ನು ತಡೆಗಟ್ಟುವುದು ಮತ್ತು ತೆರಿಗೆ ವ್ಯವಸ್ಥೆಯ ಸಮಗ್ರತೆಯನ್ನು ಎತ್ತಿಹಿಡಿಯುವುದು ಇದರ ಉದ್ದೇಶವಾಗಿದೆ. ಅನೇಕ ಸಂದರ್ಭಗಳಲ್ಲಿ, ನಕಲಿ ದೇಣಿಗೆ ರಸೀದಿಗಳನ್ನು ಸಲ್ಲಿಸಲಾಗಿದೆ. ರಾಜಕೀಯ ಸಂಸ್ಥೆಗಳಂತೆ ನಟಿಸುವ ಶೆಲ್ ಸಂಸ್ಥೆಗಳ ಮೂಲಕ ಪಾವತಿಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿಸಿದ್ದರೆ.
ಇಲಾಖೆಯು ಇನ್ನೂ ಹೆಸರುಗಳನ್ನು ಬಹಿರಂಗಪಡಿಸದಿದ್ದರೂ, ಈ ಶೋಧನೆಗಳು ಮತ್ತು ಸಮೀಕ್ಷೆಗಳ ಆಧಾರದ ಮೇಲೆ ಮತ್ತಷ್ಟು ಕ್ರಮ ಕೈಗೊಳ್ಳುವ ನಿರೀಕ್ಷೆಯಂತೂ ಇದೆ.


Click it and Unblock the Notifications