For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ಐಟಿ ರಿಟರ್ನ್ಸ್ ಫಾರ್ಮ್‌ ಪರಿಷ್ಕರಣೆ ಮಾಡಿದ ಆದಾಯ ತೆರಿಗೆ ಇಲಾಖೆ

|

ಕೊರೊನಾವೈರಸ್‌ನಿಂದಾಗಿ ಆಗಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಹಲವು ಯೋಜನೆಗಳ ಅವಧಿಯನ್ನು ವಿಸ್ತರಿಸಿದೆ. ಇದರ ಜೊತೆಗೆ ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆ ಪಾವತಿ ಮಾಡುವವರಿಗೆ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಂಡಿದೆ.

ಲಾಕ್ ಡೌನ್ ವಿಸ್ತರಣೆಯ ಲಾಭವನ್ನು ತೆರಿಗೆ ಪಾವತಿದಾರರಿಗೆ ನೀಡಲು ಐ-ಟಿ ರಿಟರ್ನ್ ಫಾರ್ಮ್ ಗಳನ್ನು ಪರಿಷ್ಕರಣೆ ಮಾಡಿದೆ.

ಕೊರೊನಾ ಎಫೆಕ್ಟ್: ಐಟಿ ರಿಟರ್ನ್ಸ್ ಫಾರ್ಮ್‌ ಪರಿಷ್ಕರಣೆ

ತೆರಿಗೆ ಪಾವತಿದಾರರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ 1961ರ ಆದಾಯ ತೆರಿಗೆ ಕಾಯ್ದೆಯಡಿ, ಹಲವು ಯೋಜನೆಗಳ ಅವಧಿಯನ್ನು 2020ರ ಜೂನ್‌ 30ರವರೆಗೆ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರು 2020ರ ಎಪ್ರಿಲ್‌ 1 ರಿಂದ ಜೂನ್‌ 30ರವರೆಗೆ ನಡೆಸಿದ ವ್ಯವಹಾರಗಳ ಮೇಲಿನ ರಿಟರ್ನ್ಸ್ ಪಡೆಯಲು ಅನುಕೂಲವಾಗುವಂತೆ 2019-20ರ ಆರ್ಥಿಕ ಸಾಲಿನ 'ರಿಟರ್ನ್ ಫಾರ್ಮ್ಸ್'ನಲ್ಲಿ ಸೂಕ್ತ ಪರಿಷ್ಕರಣೆ ಮಾಡಲಾಗುತ್ತಿದೆ.

ಅಗತ್ಯ ಬದಲಾವಣೆಗಳನ್ನು ಸೇರಿಸಿದ ನಂತರ ಮೇ 30ರೊಳಗೆ ರಿಟರ್ನ್ ಫೈಲಿಂಗ್‌ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ಸಿಬಿಡಿಟಿ (ಸೆಂಟ್ರಲ್‌ ಬೋರ್ಡ್‌ ಆಫ್ ಡೈರೆಕ್ಟ್ ಟ್ಯಾಕ್ಸಸ್‌) ತಿಳಿಸಿದೆ.

English summary

ITR Forms Being Revised For Benefits Of Timeline Extension

The income tax department on Sunday said it is revising the I-T return forms for the financial year 2019-20
Story first published: Tuesday, April 21, 2020, 13:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X