ಆಂಟ್ ಗ್ರೂಪ್‌ನ ಸಂಸ್ಥಾಪಕ ಜಾಕ್ ಮಾ ಈಗಾಗಲೇ ಚೀನಾದ ಫಿನ್‌ಟೆಕ್ ದೈತ್ಯ ಕಂಪನಿಯ ನಿಯಂತ್ರಣವನ್ನು ಹೊಂದಿಲ್ಲ. ಇದರಿಂದಾಗಿ ಜಗತ್ತಿನಾದ್ಯಂತ ಸದ್ದು ಮಾಡಿದ್ದ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಅಬ್ಬರ ತಣ್ಣಗಾದಂತೆ ಕಾಣುತ್ತಿತ್ತು. ಆದರೆ ಈಗ ಮತ್ತೆ ಉದ್ಯಮಕ್ಕೆ ಎಂಟ್ರಿ ನೀಡಿರುವ ಸೂಚನೆಯಿದೆ.
ಕಾರ್ಪೊರೇಟ್ ಡೇಟಾಬೇಸ್ ಟಿಯಾಂಚ ಪ್ರಕಾರ, ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್‌ನ ಸಹ-ಸಂಸ್ಥಾಪಕರು ಕಳೆದ ವಾರ 10 ಮಿಲಿಯನ್ ಯುವಾನ್ ($1.4 ಮಿಲಿಯನ್) ನ ಆರಂಭಿಕ ನೋಂದಾಯಿತ ಬಂಡವಾಳದೊಂದಿಗೆ "ಹ್ಯಾಂಗ್ಝೌ ಮಾ'ಸ್ ಕಿಚನ್ ಫುಡ್" ಅನ್ನು ಸ್ಥಾಪಿಸಿದ್ದಾರೆ.

ಚೀನಾದ ನ್ಯಾಶನಲ್ ಎಂಟರ್‌ಪ್ರೈಸ್ ಕ್ರೆಡಿಟ್ ಇನ್ಫಾರ್ಮೇಷನ್ ಪಬ್ಲಿಸಿಟಿ ಸಿಸ್ಟಮ್‌ನ ಮಾಹಿತಿಯ ಪ್ರಕಾರ, ಪ್ಯಾಕೇಜ್ ಮಾಡಿದ ಕೃಷಿ ಉತ್ಪನ್ನಗಳ ಮಾರಾಟವನ್ನು ಇದು ನಡೆಸುತ್ತದೆ. ಬೀಜಿಂಗ್ ತನ್ನ ಅವಳಿ ಕಂಪನಿಗಳಾದ ಅಲಿಬಾಬಾ ಮತ್ತು ಆಂಟ್ ಗ್ರೂಪ್ ಕೋ ಮೇಲೆ ಹಿಡಿತ ಸಾಧಿಸಿದ ನಂತರ 2020 ರಿಂದ ಜಾಕ್ ಮಾ ಉದ್ಯಮದಲ್ಲಿ ಉಳಿಯುವ ಬಗ್ಗೆ ತೀವ್ರ ಚರ್ಚೆ ನಡೆಯಲು ಆರಂಭವಾಗಿದೆ.
ಚೀನಾದ ಹಳೆಯ ಹಣಕಾಸು ವ್ಯವಸ್ಥೆಯ ಬಗ್ಗೆ ಕಾಮೆಂಟ್ ಮಾಡಿದ ಬಳಿಕ ಚಾ ಉದ್ಯಮದಿಂದ ದೂರವಾಗುತ್ತಾ ಬಂದಿದ್ದಾರೆ ಎಂದು ವರದಿಯಾಗಿದೆ. ಅಂದಿನಿಂದ ಅವರು ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ತನ್ನ ಸಮಯವನ್ನು ವಿನಿಯೋಗಿಸಿದ್ದಾರೆ.
ಕಮ್ಯುನಿಸ್ಟ್ ಪಕ್ಷದ "ಸಾಮಾನ್ಯ ಸಮೃದ್ಧಿ" ಉಪಕ್ರಮಕ್ಕೆ ಪ್ರಮುಖ ಮೊತ್ತವನ್ನು ಹೂಡಿಕೆ ಮಾಡಿರುವಂತಹ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನಿಂದ ಮೀಟುವಾನ್‌ನವರೆಗಿನ ಪ್ರಸಿದ್ಧ ಉದ್ಯಮಿಗಳ ಸಮೂಹವನ್ನು ಕೂಡಾ ಮಾ ಸೇರುತ್ತಾರೆ.
ಕ್ಸಿ ಜಿನ್‌ಪಿಂಗ್ ಆಡಳಿತವು ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ಗ್ರಾಮೀಣ ಪ್ರದೇಶಗಳನ್ನು ಉನ್ನತೀಕರಿಸುವುದು ಪಕ್ಷದ ಪ್ರಯತ್ನಗಳಲ್ಲಿ ಒಂದನ್ನಾಗಿ ಮಾಡಿದೆ. ಮಾರ್ಚ್‌ನಲ್ಲಿ, ಮಾ ಹಾಂಗ್‌ಝೌದಲ್ಲಿನ ಶಾಲೆಗೆ ಭೇಟಿ ನೀಡಿದರು. ಈ ಮೂಲಕ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಮತ್ತು ಶಿಕ್ಷಣದ ಯೋಜನೆಗಳ ಮೇಲೆ ಮಾ ಅಧಿಕ ಕೇಂದ್ರೀಕರಿಸಿದ್ದಾರೆ.


Click it and Unblock the Notifications