ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್‌ಗಳು ನಿತ್ಯ ಹೆಚ್ಚಿನ ಜನಸಂಖ್ಯೆಯಿಂದ ತುಂಬಿ ತುಳುಕತ್ತಲೇ ಇರುತ್ತವೆ. ಸಾಕಪ್ಪ ಬಿಎಂಟಿಸಿ ಓಡಾಟದ ಸಹವಾಸ ಎಂದುಕೊಂಡವರಿಗೆ ಹೊಸ ವರ್ಷಕ್ಕೆ ಸಿಹಿಸುದ್ದಿ ಸಿಕ್ಕಿದೆ. ಹೌದು, ಬೆಂಗಳೂರಿನ ಸಂಚಾರ ಜೀವನಾಡಿ ಸಾರಿಗೆಗಳಿಲ್ಲ ಒಂದಾದ ಬಿಎಂಟಿಸಿ ಜನರ ಅನುಕೂಲಕ್ಕೆ ತಕ್ಕಂತೆ ಆಗಾಗ್ಗೆ ವಿಶೇಷ ಬಸ್‌ಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ, ಇದೀಗ ಬಿಎಂಟಿಸಿಯು ಹೊಸದಾಗಿ ಮೆಟ್ರೋ ಫೀಡರ್ ಮಾರ್ಗದಲ್ಲಿ ಬಸ್ ಸೇವೆಯನ್ನು ಪ್ರಾರಂಭ ಮಾಡುತ್ತಿದೆ. ಹಾಗಿದ್ರೆ, ಈ ಬಸ್ ಸೇವೆ ಯಾವಾಗ ಶರುವಾಗಲಿದೆ? ಯಾವೆಲ್ಲಾ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿದೆ? ಯಾವ ಸಮಯದಲ್ಲಿ ಈ ಸೇವೆ ಲಭ್ಯವಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸ ವರ್ಷ ಜನವರಿ 1 ರಂದು ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸಲಿದೆ. ಈ ಮೂಲಕ ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಾಹಿತಿ ಹಂಚಿಕೊಂಡಿದೆ.

ಮೆಟ್ರೋ ನಿಲ್ದಾಣದಿಂದ ಒಳಮಾರ್ಗಗಳಿಗೆ ಹೊಸ ಬಸ್‌ಸೇವೆಗಳನ್ನು ಒದಗಿಸಲು ಫೀಡರ್ ಬಸ್‌ಗಳನ್ನು ಪರಿಚಯಿಸಲಿದೆ. ಮಾದಾವರ, ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣಗಳಲ್ಲಿ ಈ ಬಸ್ ಸೇವೆ ಲಭ್ಯ ಇರಲಿವೆ. ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಟ್ರಿಪ್‌ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ.
ಮಾರ್ಗ ಎಲ್ಲಿಂದ ಎಲ್ಲಿವರೆಗೆ ಹಾಗೂ ಎಷ್ಟು ಟ್ರಿಪ್?
ಎಫ್-49: ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ ಆಚಾರ್ಯ ಇನ್ಸ್ಟಿಟ್ಯೂಟ್-ತೋಟದಗುಡ್ಡದಹಳ್ಳಿ, ತಮ್ಮೇನಹಳ್ಳಿ ಮಾರ್ಗದಲ್ಲಿ 1 ಬಸ್ 26 ಟ್ರಿಪ್ ಸಂಚರಿಸಲಿದೆ.
ಎಂಎಫ್-50: ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ ತೋಟದಗುಡ್ಡದಹಳ್ಳಿ, ಕುದುರೆಗೆರೆ ಕಾಲೋನಿ, ಮಾದನಾಯಕನಹಳ್ಳಿ ಮಾರ್ಗದಲ್ಲಿ 2 ಬಸ್‌ಗಳು 26 ಟ್ರಿಪ್ ಓಡಲಿವೆ.
ಎಂಎಫ್-51: ಮಾದಾವರ ಮೆಟ್ರೋ ನಿಲ್ದಾಣದಿಂದ ಕಡಬಗೆರೆ ಕ್ರಾಸ್ ಲಕ್ಷ್ಮಿಪುರಕ್ಕೆ ವಡ್ಡರಹಳ್ಳಿ, ಜನಪ್ರಿಯ ಟೌನ್ಶಿಪ್ 2 ಬಸ್ 24 ಟ್ರಿಪ್ ಓಡಲಿವೆ.
ಎಂಎಫ್-52: ಮಾದಾವರ ಮೆಟ್ರೋ ನಿಲ್ದಾಣ ತಾವರೆಕೆರೆಯಿಂದ ಲಕ್ಷ್ಮಿಪುರಕ್ಕೆ ಗಂಗೊಂಡನಹಳ್ಳಿ ಕ್ರಾಸ್, ಕಿತ್ತನಹಳ್ಳಿ, ಮಲ್ಲಸಂದ್ರ, ವರ್ತೂರು ಮೂಲಕ 2 ಬಸ್ಸುಗಳು 18 ಟ್ರಿಪ್ ಓಡಲಿವೆ.
ಮಾರ್ಗ ಸಂಖ್ಯೆ & ಸಮಯಗಳ ವಿವರ
ಮಾರ್ಗ ಸಂಖ್ಯೆ ಎಂಎಫ್-49: ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ ಆಚಾರ್ಯ ಇನ್ಸ್ಟಿಟ್ಯೂಟ್ 7:30, 8:15, 9:05, 10:20, 11:05, 11:45, 12:25, 13:30, 14:10, 14:50, 15:30, 16:10, 17:10 7:50, 8:40, 9:30, 10:45, 11:25, 12:05, 12:45, 13:50, 14:30, 15:10, 15:50, 16:35, 17:35.
ಮಾರ್ಗ ಸಂಖ್ಯೆ ಎಂಎಫ್-50: ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ 7:40, 8:00, 8:20, 8:40, 9:05, 9:25, 9:50, 10:10, 11:00, 11:20, 11:40, 12:00, 12:20, 12:40, 13:00, 13:20, 14:05, 14:25, 14:45, 15:05, 15:25, 15:45, 16:05, 16:25, 16:50, 17:10
ಮಾರ್ಗ ಸಂಖ್ಯೆ ಎಂಎಫ್-51: ಮಾದಾವರ ಮೆಟ್ರೋ ನಿಲ್ದಾಣಕಡಬಗೆರೆ ಕ್ರಾಸ್‌ನಿಂದ ಬಿಡುವ ವೇಳೆ 7:15, 7:45, 8:35, 9:05, 10:20, 10:50, 11:40, 12:10, 13:00, 13:30, 14:45, 15:15, 16:05, 17:007:50, 8:20, 9:10, 9:40, 10:55, 11:25, 12:15, 12:45, 14:00, 14:30, 15:20,15:50, 16:50, 17:50
ಮಾರ್ಗ ಸಂಖ್ಯೆ ಎಂಎಫ್-52: ಮಾದಾವರ ಮೆಟ್ರೋ ನಿಲ್ದಾಣ ತಾವರೆಕೆರೆಯಿಂದ ಬಿಡುವ ವೇಳೆ 6:25, 8:00, 9:00, 10:40, 12:45, 14:15, 15:15, 16:20, 18:50, 21:255:30, 7:25, 9:05, 10:05, 11:40, 14:10, 15:15, 16:45, 17:40, 19:55.
ಜ.1ರಿಂದ ನಾಲ್ಕು ಹೊಸ ನಮ್ಮ ಮೆಟ್ರೋ ಫೀಡರ್ ಬಸ್ ಸೇವೆ ಪ್ರಾರಂಭವಾಗಲಿದ್ದು, ಹೊಸ ವರ್ಷದ ದಿನ ಬೆಂಗಳೂರು ಜನರಿಗೆ ನ್ಯೂ ಇಯರ್ ಗಿಫ್ಟ್ ಸಿಕ್ಕಿದೆ.


Click it and Unblock the Notifications