ವಿಶ್ವದ ಅತ್ಯಂತ ಶ್ರೀಮಂತ ಜೆಫ್ ಬೆಜೋಸ್ ದಾಖಲೆ; ಆಸ್ತಿ 13 ಲಕ್ಷ ಕೋಟಿ

ಹಳ್ಳ ಇರುವ ಕಡೆಯೇ ನೀರು ಹರಿಯುತ್ತದೆ. ಎಲ್ಲಿ ದುಡ್ಡಿರುತ್ತದೋ ಅಲ್ಲಿ ಮತ್ತಷ್ಟು ಸೇರುತ್ತಾ ಹೋಗುತ್ತದೆ ಎಂಬುದು ಜನ ಸಾಮಾನ್ಯರ ಮಧ್ಯೆ ಇರುವ ರೂಢಿ ಮಾತು. ಇದಕ್ಕೆ ಉದಾಹರಣೆಯಾಗಿ ಬೇಕಾದಷ್ಟು ಜನರ ಹೆಸರು ಹೇಳಬಹುದಾದರೂ ಈಗಿನ ಸಂದರ್ಭಕ್ಕೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇದ್ದಾರೆ. ಬುಧವಾರದಂದು ಶ್ರೀಮಂತಿಕೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಹಿಂದೆ ಅವರ ಬಳಿ ಇದ್ದ ಗರಿಷ್ಠ ಸಂಪತ್ತಿನ ಪ್ರಮಾಣದ ಸಂಪತ್ತಿನ ದಾಖಲೆ ಬ್ರೇಕ್ ಆಗಿದೆ.

ಇ ಕಾಮರ್ಸ್ ದೈತ್ಯ ಕಂಪೆನಿ ಅಮೆಜಾನ್ ಪ್ರತಿ ಷೇರು ಮೌಲ್ಯ $ 2,878.70 ತಲುಪುವುದರೊಂದಿಗೆ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 171.6 ಬಿಲಿಯನ್ ತಲುಪಿತು. 17,160 ಕೋಟಿ ಯುಎಸ್ ಡಿ, ಭಾರತದ ರುಪಾಯಿ ಲೆಕ್ಕದಲ್ಲಿ 12,87,000 ಕೋಟಿಗೂ ಹೆಚ್ಚಾಗುತ್ತದೆ. ಕರ್ನಾಟಕ ರಾಜ್ಯದ ವರ್ಷದ ಬಜೆಟ್ ನ ಆರು ಪಟ್ಟು ಮೊತ್ತವಾಗುತ್ತದೆ.

ವಿಚ್ಛೇದಿತ ಪತ್ನಿಗೆ ಷೇರಿನ ಪಾಲು ನೀಡಿದ್ದರು

ವಿಚ್ಛೇದಿತ ಪತ್ನಿಗೆ ಷೇರಿನ ಪಾಲು ನೀಡಿದ್ದರು

ಹ್ಞಾಂ, ಒಂದ್ನಿಮಿಷ. ಕಳೆದ ವರ್ಷ ಪತ್ನಿಗೆ ವಿವಾಹ ವಿಚ್ಛೇದನ ನೀಡಿದ ವೇಳೆ ಅಮೆಜಾನ್ ಕಂಪೆನಿಯಲ್ಲಿ ತಮ್ಮ ಕಾಲು ಭಾಗದಷ್ಟು ಷೇರಿನ ಮೌಲ್ಯವನ್ನು ಬೆಜೋಸ್ ಕಳೆದುಕೊಂಡಿದ್ದರು. ಅದರಿಂದ ಅವರ ಶ್ರೀಮಂತಿಕೆ ಮೇಲೂ ಏನೂ ಪರಿಣಾಮ ಆಗಿಲ್ಲ. ಅಷ್ಟೇ ಏಕೆ, ಕೊರೊನಾ ಕೂಡ ಏನೂ ಮಾಡಲು ಸಾಧ್ಯವಾಗಿಲ್ಲ.

ಆರು ತಿಂಗಳಲ್ಲಿ 5670 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ

ಆರು ತಿಂಗಳಲ್ಲಿ 5670 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ

ಬೆಜೋಸ್ ಈ ಹಿಂದೆ ಹೊಂದಿದ್ದ ಗರಿಷ್ಠ ಮಟ್ಟದ ಸಂಪತ್ತು ದಾಖಲಾಗಿರುವುದು ಸೆಪ್ಟೆಂಬರ್ 4, 2018ರಲ್ಲಿ. ಆಗಿನ ಮೊತ್ತ 167.7 ಬಿಲಿಯನ್ ಅಮೆರಿಕನ್ ಡಾಲರ್. ಈಗ ಆ ದಾಖಲೆ ಮುರಿದಾಗಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲೇ ಅವರ ಆಸ್ತಿ ಮೌಲ್ಯಕ್ಕೆ 5670 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ ಆಗಿದೆ.

ಅಮೆಜಾನ್ ಕಂಪೆನಿಯಲ್ಲಿ 11 ಪರ್ಸೆಂಟ್ ಷೇರಿನ ಪಾಲು

ಅಮೆಜಾನ್ ಕಂಪೆನಿಯಲ್ಲಿ 11 ಪರ್ಸೆಂಟ್ ಷೇರಿನ ಪಾಲು

ಇನ್ನು ಬೆಜೋಸ್ ವಿಚ್ಛೇದಿತ ಪತ್ನಿ ಮೆಕ್ ಕೆಂಜಿ ಬೆಜೋಸ್ ಅವರ ಬಳಿ ಅಮೆಜಾನ್ ಕಂಪೆನಿಯ 4 ಪರ್ಸೆಂಟ್ ಷೇರಿನ ಪಾಲಿದೆ. ಆಕೆಯ ಅಂದಾಜು ಆಸ್ತಿ ಮೌಲ್ಯವೇ 5690 ಕೋಟಿ ಅಮೆರಿಕನ್ ಡಾಲರ್ ಇದೆ. ಬ್ಲೂಮ್ ಬರ್ಗ್ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಆಕೆಗೆ ಹನ್ನೆರಡನೇ ಸ್ಥಾನ. ಬೆಜೋಸ್ ಆಸ್ತಿಯ ಬಹುಪಾಲು ಇರುವುದು ಅಮೆಜಾನ್ ಕಂಪೆನಿಯಲ್ಲಿ ಅವರು ಹೊಂದಿರುವ 11 ಪರ್ಸೆಂಟ್ ಷೇರಿನ ಪಾಲಿನಲ್ಲಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+