ಒಂದೇ ತಿಂಗಳೊಳಗೆ ಡಬಲ್ ಗೂ ಹೆಚ್ಚಾಯಿತು ಜೆಟ್ ಏರ್ ವೇಸ್ ಷೇರಿನ ಬೆಲೆ

ಜೆಟ್ ಏರ್ ವೇಸ್ ಕಂಪೆನಿಯನ್ನು ಷೇರುಗಳ ಬೆಲೆಯು ಜನವರಿ 7ನೇ ತಾರೀಕು (ಮಂಗಳವಾರ) ಸಹ ಏರಿಕೆ ಕಂಡಿದೆ. ಆ ಮೂಲಕ ಸತತವಾಗಿ ಆರನೇ ದಿನ ಏರಿಕೆ ಹಾದಿಯಲ್ಲಿ ಇದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್ ಏರ್ ವೇಸ್ ಬಗ್ಗೆ ದಕ್ಷಿಣ ಅಮೆರಿಕದ ಸಂಸ್ಥೆಯೊಂದು ಆಸಕ್ತಿ ವಹಿಸಿದೆ ಎಂಬ ಹಿನ್ನೆಲೆಯಲ್ಲಿ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ.

ಹೀಗೆ ಸತತವಾಗಿ ಏರಿಕೆ ಕಂಡುಬಂದರೂ ಷೇರಿನ 52 ವಾರಗಳ ಗರಿಷ್ಠ ಮಟ್ಟವಾದ 313.50 ರುಪಾಯಿಗಿಂತ (ಎನ್ ಎಸ್ ಇಯಲ್ಲಿ ದಾಖಲಾಗಿತ್ತು) ಬೆಲೆ ಬಹಳ ಕಡಿಮೆ ಇದೆ. ಜನವರಿ ಏಳನೇ ತಾರೀಕು ಜೆಟ್ ಏರ್ ವೇಸ್ ಕಂಪೆನಿ ಷೇರುಗಳು 4.97% ಏರಿಕೆ ಕಂಡು, ಪ್ರತಿ ಷೇರಿಗೆ 37 ರುಪಾಯಿ ಮುಟ್ಟಿತು. ಆ ಮೂಲಕ ಒಂದೇ ತಿಂಗಳ ಅವಧಿಯಲ್ಲಿ ಷೇರಿನ ಬೆಲೆಯು ದ್ವಿಗುಣವಾಗಿದೆ.

ನಿಯತಕಾಲಿಕೆ ವರದಿ ಪ್ರಕಾರ, ಅಮೆರಿಕನ್ ಕಂಪೆನಿಯೊಂದು ಜೆಟ್ ಏರ್ ವೇಸ್ ಖರೀದಿಗೆ ಮೊದಲ ಸುತ್ತು ಬಿಡ್ಡಿಂಗ್ ಮಾಡಿತ್ತು. ಆದರೆ ಸಾಲದ ಸುಳಿಯಲ್ಲಿ ಸಿಲುಕಿದ ಜೆಟ್ ಏರ್ ವೇಸ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಆಗಿರಲಿಲ್ಲ.

ಒಂದೇ ತಿಂಗಳೊಳಗೆ ಡಬಲ್ ಗೂ ಹೆಚ್ಚಾಯಿತು ಜೆಟ್ ಏರ್ ವೇಸ್ ಷೇರಿನ ಬೆಲೆ

ಇದೀಗ ಸಾಲಗಾರರು ಮತ್ತೊಮ್ಮೆ ಆಸಕ್ತಿ ವ್ಯಕ್ತಪಡಿಸಿ, ಆ ಕಂಪೆನಿಯನ್ನು ಆಹ್ವಾನಿಸಿದ್ದಾರೆ. ಜೆಟ್ ಏರ್ ವೇಸ್ ಗೆ ಸಾಲ ನೀಡಿದ್ದವರ ಸಮಿತಿ ಸಭೆ ಈಚೆಗೆ ನಡೆದಿತ್ತು. ಅದರ ಪ್ರಕಾರ ಜನವರಿ ಹದಿನೈದನೇ ತಾರೀಕು ಆಸಕ್ತಿ ವ್ಯಕ್ತಪಡಿಸುವುದಕ್ಕೆ ಗಡುವು ನಿಗದಿ ಮಾಡಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಜೆಟ್ ಏರ್ ವೇಸ್ Z ಕ್ಯಾಟಗರಿಯಲ್ಲಿ ವಹಿವಾಟು ನಡೆಸುತ್ತಿದೆ. ಯಾವ ಕಂಪೆನಿಗಳು ಹೂಡಿಕೆದಾರರ ದೂರು ನಿವಾರಿಸಲು ವಿಫಲವಾಗುವವೋ ಅಥವಾ ಲಿಸ್ಟಿಂಗ್ ನಿಯಮಗಳನ್ನು ಪೂರೈಸಲು ವಿಫಲವಾಗುವವೋ ಅಂಥವನ್ನೂ ಈ ಕ್ಯಾಟಗರಿಗೆ ಹಾಕಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+