Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ

ದೇಶದಾದ್ಯಂತ 34 ನಗರಗಳಲ್ಲಿ 5G ಸೇವೆಗಳನ್ನು ಆರಂಭಿಸಿರುವುದಾಗಿ ರಿಲಯನ್ಸ್ ಜಿಯೋ ಇಂದು (ಮಂಗಳವಾರ) ಘೋಷಿಸಿದೆ. ಈ 34 ನಗರಗಳಲ್ಲಿ ಕರ್ನಾಟಕದ ಒಂದು ನಗರವೂ ಸೇರಿವೆ. ಈ ನಗರ ಯಾವುದೆಂದು ಇಲ್ಲಿ ತಿಳಿಯಿರಿ.

ಮುಂಬೈ, ಜನವರಿ 31: Reliance Jio ಜನವರಿ 31 ರಂದು ತನ್ನ 5G ಸೇವೆಗಳನ್ನು ದೇಶದ 34 ನಗರಗಳಲ್ಲಿ ಪ್ರಾರಂಭಿಸಿದೆ. ಇದುವರೆಗೆ ಭಾರತದಾದ್ಯಂತ 225 ನಗರಗಳಿಗೆ 5G ಸಂಪರ್ಕವನ್ನು ವಿಸ್ತರಿಸಿದೆ. ಇದರೊಂದಿಗೆ, Reliance Jio ದೇಶದ ಅತೀ ಹೆಚ್ಚು ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಈ ಕೆಳಗಿನ ನಗರಗಳಲ್ಲಿನ ಜಿಯೋ ಬಳಕೆದಾರರನ್ನು 1 Gbps + ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು Jio Welcome ಆಫರ್‌ಗೆ ಆಹ್ವಾನಿಸಲಾಗುತ್ತಿದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಜನವರಿ 31 ರಿಂದ ಪ್ರಾರಂಭವಾಗುತ್ತದೆ ಎಂದು Reliance Jio ಇಂಡಸ್ಟ್ರೀಸ್‌ನ ಟೆಲಿಕಾಂ ವಿಭಾಗವು ಹೇಳಿಕೆಯಲ್ಲಿ ತಿಳಿಸಿದೆ. ದೇಶಾದ್ಯಂತ ಹಂತಹಂತವಾಗಿ 5G ಸೇವೆಯನ್ನು Jio ಆರಂಭಿಸಿತ್ತು. ಜಿಯೋ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 50 ನಗರಗಳಿಗೆ ಸಂಪರ್ಕವನ್ನು ಕಲ್ಪಿಸಿದೆ ಎಂದು ಈ ಹಿಂದೆ ಘೋಷಿಸಿತ್ತು.

'ಇಷ್ಟು ದೊಡ್ಡ ಪ್ರಮಾಣದ 5G ನೆಟ್‌ವರ್ಕ್ ಸಂಪರ್ಕ ಸೇವೆ ನೀಡುತ್ತಿರುವುದು ಪ್ರಪಂಚದಲ್ಲೇ ಮೊದಲನೆಯದು ಮತ್ತು 2023 ಭಾರತಕ್ಕೆ ಒಂದು ಹೆಗ್ಗುರುತು ವರ್ಷವಾಗಲಿದೆ' ಎಂದು Reliance Jio ಹೇಳಿಕೊಂಡಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ Jio ವಕ್ತಾರರು, 'ಬೀಟಾ ಟ್ರಯಲ್ ಪ್ರಾರಂಭವಾದಾಗಿನಿಂದ ಕೇವಲ 120 ದಿನಗಳಲ್ಲಿ Jio ಈ ಮೈಲಿಗಲ್ಲನ್ನು ಸಾಧಿಸಿದೆ. ಡಿಸೆಂಬರ್ 2023 ರ ವೇಳೆಗೆ ಇಡೀ ರಾಷ್ಟ್ರವನ್ನು Jio true 5G ಸೇವೆಗಳೊಂದಿಗೆ ಸಂಪರ್ಕಿಸುವ ಹಾದಿಯಲ್ಲಿದೆ ಎಂದು ತಿಳಿಸಿದ್ದಾರೆ.

Jio 5G services: ಇಂದಿನಿಂದ ಮಧ್ಯ ಕರ್ನಾಟಕದ ಈ ನಗರದಲ್ಲೂ ಲಭ್ಯ

ಏತನ್ಮಧ್ಯೆ, Jio ಡಿಸೆಂಬರ್ 31, 2022 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ 4,638 ಕೋಟಿ ನಿವ್ವಳ ಲಾಭವನ್ನು ತನ್ನದಾಗಿಸಿಕೊಂಡಿದೆ. ಇದು ಹಿಂದಿನ ವರ್ಷದ ಅವಧಿಗಿಂತ 28.3 ಶೇಕಡಾ ಹೆಚ್ಚಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ Reliance Jio ಕಂಪನಿಯು ರೂ.3,615 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಅದರ ಡಿಸೆಂಬರ್ ತ್ರೈಮಾಸಿಕದಲ್ಲಿ, Jioದ ನಿವ್ವಳ ಚಂದಾದಾರರ ಸೇರ್ಪಡೆ 5.3 ಮಿಲಿಯನ್ ಆಗಿದ್ದು, 3Q FY23 ರಲ್ಲಿ ಒಟ್ಟು ಚಂದಾದಾರರ ಸೇರ್ಪಡೆ 34.2 ಮಿಲಿಯನ್‌ಗೆ ತಲುಪಿದೆ ಎಂದು RIL ಹೇಳಿದೆ.

ಇಂದಿನಿಂದ ಭಾರತದ ಯಾವ ನಗರಗಳಲ್ಲಿ Jio 5G services ಲಭ್ಯ

ಆಂಧ್ರಪ್ರದೇಶದ ಆರು ನಗರಗಳು (ಅನಂತಪುರಂ, ಭೀಮಾವರಂ, ಚಿರಾಲ, ಗುಂತಕಲ್, ನಂದ್ಯಾಲ್, ತೆನಾಲಿ),
ಅಸ್ಸಾಂನಲ್ಲಿ ಮೂರು ನಗರಗಳು (ದಿಬ್ರುಗಢ, ಜೋರ್ಹತ್, ತೇಜ್‌ಪುರ),
ಬಿಹಾರದಲ್ಲಿ ಒಂದು ನಗರ (ಗಯಾ)
ಛತ್ತೀಸ್‌ಗಢದಲ್ಲಿ ಎರಡು ನಗರ (ಅಂಬಿಕಾಪುರ, ಧಮತರಿ),

Jio 5G services: ಇಂದಿನಿಂದ ಮಧ್ಯ ಕರ್ನಾಟಕದ ಈ ನಗರದಲ್ಲೂ ಲಭ್ಯ

ಹರಿಯಾಣದಲ್ಲಿ ಎರಡು ನಗರ ( ಥಾನೇಸರ್, ಯಮುನಾನಗರ),
ಕರ್ನಾಟಕದಲ್ಲಿ ಒಂದು ನಗರ (ಚಿತ್ರದುರ್ಗ)
ಮಹಾರಾಷ್ಟ್ರದ ಎರಡು ನಗರ (ಜಲಗಾಂವ್, ಲಾತೂರ್)
ಒಡಿಶಾದಲ್ಲಿ ಎರಡು ನಗರ (ಬಲಂಗಿರ್, ನಾಲ್ಕೊ)
ಪಂಜಾಬ್‌ನಲ್ಲಿ ಎರಡು ನಗರ (ಜಲಂಧರ್, ಫಗ್ವಾರ)
ರಾಜಸ್ಥಾನ ಒಂದು ನಗರ (ಅಜ್ಮೀರ್)
ತಮಿಳುನಾಡಿನ ಎಂಟು ನಗರ (ಕಡಲೂರು, ದಿಂಡಿಗಲ್, ಕಾಂಚೀಪುರಂ, ಕರೂರ್, ಕುಂಭಕೋಣಂ, ನಾಗರ್‌ಕೋಯಿಲ್, ತಂಜಾವೂರು, ತಿರುವಣ್ಣಾಮಲೈ)
ತೆಲಂಗಾಣದ ಮೂರು ನಗರ (ಆದಿಲಾಬಾದ್, ಮಹಬೂಬ್‌ನಗರ, ರಾಮಗುಂಡಂ)
ಉತ್ತರ ಪ್ರದೇಶದ ಮಥುರಾದಲ್ಲಿಯೂ ಸೇವೆಗಳನ್ನು ಪ್ರಾರಂಭಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+