ಜಿಯೋ ಫೈನಾನ್ಶಿಯಲ್ ಸರ್ವಿಸಸ್‌: 4 ದಿನದಲ್ಲೇ 29,000 ಕೋಟಿ ರೂಪಾಯಿ ಸಂಪತ್ತು ನಷ್ಟ

ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಹೊಸದಾಗಿ ಪ್ರವೇಶಿಸಿದ ಜಿಯೋ ಹಣಕಾಸು ಸೇವೆ (ಜಿಯೋ ಫೈನಾನ್ಶಿಯಲ್ ಸರ್ವಿಸಸ್‌) ಆರಂಭವಾದ ಇಷ್ಟು ದಿನದಲ್ಲಿಯೇ ಭಾರೀ ನಷ್ಟವನ್ನು ಕಂಡಿದೆ. ಆರಂಭದಿಂದ ಈವರೆಗೆ ಸ್ಟಾಕ್ ಇಳಿಕೆಯನ್ನೇ ಕಂಡಿದೆ. ನಾಲ್ಕು ದಿನಗಳಲ್ಲಿ, ಎನ್‌ಬಿಎಫ್‌ಸಿ ಸ್ಟಾಕ್ ಶೇಕಡ 20ರಷದ್ಟು ಕುಸಿತ ಕಂಡಿದ್ದು, ಹೂಡಿಕೆದಾರರ ಸಂಪತ್ತಿನ ಸುಮಾರು29,000 ಕೋಟಿ ರೂಪಾಯಿ ನಷ್ಟವಾಗಿದೆ.

ಜಿಯೋ ಫೈನಾನ್ಶಿಯಲ್ ಷೇರುಗಳು ನಾಲ್ಕು ದಿನದಿಂದಲೂ ನಷ್ಟವನ್ನು ಕಾಣುತ್ತಾ ಬಂದಿದೆ. ಪ್ರಮುಖ ಸೂಚ್ಯಂಕಗಳಿಂದ ಇದು ಆಗಸ್ಟ್ 29 ಕ್ಕೆ ನಿರ್ಗಮನವಾಗಲಿದೆ. ಜಿಯೋ ಫೈನಾನ್ಶಿಯಲ್ ಷೇರುಗಳು ಈ ಬೆಳವಣಿಗೆಯ ಬಗ್ಗೆ ರಿಟೇಲ್ ಹೂಡಿಕೆದಾರರು ಚಿಂತಿಸಬೇಕೇ? ಇಲ್ಲಿದೆ ವಿವರ ಮುಂದೆ ಓದಿ...

 ಜಿಯೋ ಫೈನಾನ್ಸ್: 4 ದಿನದಲ್ಲೇ 29,000 ಕೋಟಿ ರೂಪಾಯಿ ನಷ್ಟ

ಆಗಸ್ಟ್ 21 ರಂದು ಲಿಸ್ಟಿಂಗ್ ವೇಳೆ ಮಾರುಕಟ್ಟೆ ಮೌಲ್ಯವು 1.66 ಲಕ್ಷ ಕೋಟಿ ರೂಪಾಯಿ ಆಗಿದೆ. ಆದರೆ ಈಗ ಮಾರುಕಟ್ಟೆ ಮೌಲ್ಯವು 29,000 ಕೋಟಿ ರೂಪಾಯಿಗಿಂತ ಅಧಿಕ ಇಳಿಕೆಯಾಗಿದೆ. ನಾಲ್ಕು ವಹಿವಾಟು ಅವಧಿಗಳಲ್ಲಿ, ಜಿಯೋ ಫೈನಾನ್ಶಿಯಲ್ ಷೇರುಗಳು ಶೇಕಡ 20ರಷ್ಟು ಕುಸಿದಿದೆ.

ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ ಕೆ ವಿಜಯಕುಮಾರ್ ಮಾತನಾಡಿ, "ಸತತ ಮೂರನೇ ದಿನದಲ್ಲಿ ಜೆಎಫ್‌ಎಸ್‌ಎಲ್ ಸ್ಟಾಕ್ ಕುಸಿತವನ್ನು ಕಂಡಿದೆ. ಪ್ರಮುಖ ಸೂಚ್ಯಂಕಗಳಿಂದ ಈ ಷೇರುಗಳನ್ನು ತೆಗೆದುಹಾಕುವ ದಿನಾಂಕವನ್ನು ಆಗಸ್ಟ್ 29 ಕ್ಕೆ ಮುಂದೂಡಲಾಗಿದೆ. ಮತ್ತಷ್ಟು ಮುಂದೂಡುವ ಅಗತ್ಯವಿದೆ," ಎಂದು ತಿಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಇತ್ತೀಚೆಗೆ ವಿಭಜನೆಯಾದ ಹಣಕಾಸು ಕಂಪನಿಯನ್ನು ಬಿಎಸ್‌ಇಯ 'ಟಿ' ಗುಂಪಿನ ಸೆಕ್ಯುರಿಟೀಸ್ ಅಡಿಯಲ್ಲಿ ಇರಿಸಲಾಗಿದೆ. ಮುಕೇಶ್ ಅಂಬಾನಿಯವರ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಅಥವಾ ಜೆಎಫ್‌ಎಸ್‌ಎಲ್ ಷೇರುಗಳು ಸೋಮವಾರ (ಆಗಸ್ಟ್ 21) ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಲೀಸ್ಟ್ ಮಾಡಲಾಗುತ್ತದೆ. ಈ ಹಿಂದೆ ರಿಲಯನ್ಸ್ ಸ್ಟ್ರಾಟೆಜಿಕ್ ವೆಂಚರ್ಸ್ ಎಂದು ಕರೆಯಲಾಗುತ್ತಿತ್ತು.

ಇದು ಬಜಾಜ್ ಫೈನಾನ್ಸ್ ನಂತರ ದೇಶದ ಎರಡನೇ ಅತಿದೊಡ್ಡ ಎನ್‌ಬಿಎಫ್‌ಸಿಯಾಗಿದೆ. ಹೂಡಿಕೆದಾರರು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರತಿ ಷೇರಿಗೆ ಜಿಯೋ ಫೈನಾನ್ಶಿಯಲ್ ಸರ್ವಿಸಸ್‌ನ ಒಂದು ಪಾಲನ್ನು ನಿಗದಿಪಡಿಸಲಾಗಿದೆ. ಪೋಷಕ ಸಂಸ್ಥೆಯಿಂದ ಬೇರ್ಪಟ್ಟು ಸುಮಾರು ಒಂದು ತಿಂಗಳುಗಳ ಕಾಲ ನಕಲಿ ಸ್ಟಾಕ್ ಆಗಿದ್ದ ಜೆಎಫ್‌ಎಸ್‌ ಷೇರುಗಳು ಅಂತಿಮವಾಗಿ ಇಂದು ವಹಿವಾಟಿಗೆ ಇಳಿಯುತ್ತಿದೆ. ಆದರೆ ಮುಂದಿನ 10 ಟ್ರೇಡಿಂಗ್ ದಿನಗಳವರೆಗೆ ಟ್ರೇಡ್-ಟು-ಟ್ರೇಡ್ ವಿಭಾಗದಲ್ಲಿ ಇರುತ್ತದೆ.

ಈ ವಿಭಾಗದಲ್ಲಿ, ಕಡ್ಡಾಯ ವಿತರಣಾ ಆಧಾರದ ಮೇಲೆ ಮಾತ್ರ ಷೇರುಗಳ ವಹಿವಾಟು ಮಾಡಬಹುದಾಗಿದೆ. ಇಂಟ್ರಾಡೇ ವಹಿವಾಟುಗಳು ನಡೆಸಲು ಅವಕಾಶವಿರುವುದಿಲ್ಲ ಅಥವಾ ಸಾಧ್ಯವಿಲ್ಲ. ಹೂಡಿಕೆದಾರರು ಜೆಎಫ್‌ಎಸ್‌ನ ಷೇರುಗಳನ್ನು ಖರೀದಿಸಿದರೆ ಮತ್ತು ಅದೇ ದಿನದಲ್ಲಿ ಅಥವಾ ಷೇರುಗಳನ್ನು ಡಿಮ್ಯಾಟ್ ಖಾತೆಗೆ ಜಮಾ ಮಾಡುವ ಮೊದಲು ಅದನ್ನು ಮಾರಾಟ ಮಾಡಲು ಪ್ರಯತ್ನಿಸಿದರೆ, ಅದು ತಿರಸ್ಕೃತವಾಗುತ್ತದೆ. ಸ್ಟಾಕ್ ಈ ವಿಭಾಗದಲ್ಲಿ 10 ದಿನಗಳವರೆಗೆ ಇರುತ್ತದೆ.

ಗಮನಿಸಿ: ಈ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವಂತೆ ಲೇಖಕರು ಅಥವಾ ಗ್ರೇನಿಯಮ್ ಮಾಹಿತಿ ತಂತ್ರಜ್ಞಾನಗಳು ಸಲಹೆ ನೀಡುವುದಿಲ್ಲ. ಲೇಖಕರು, ಅಥವಾ ಬ್ರೋಕರೇಜ್ ಸಂಸ್ಥೆ ಅಥವಾ ಗ್ರೇನಿಯಮ್‌ನ ಈ ಬರಹದ ಆಧಾರದ ಮೇಲೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರಿಂದಾಗುವ ನಷ್ಟಕ್ಕೆ ಗುಡ್‌ರಿಟರ್ನ್ಸ್‌ ಆಗಲಿ ಅಥವಾ ಲೇಖಕರಾಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಜ್ಞರೊಂದಿಗೆ ಸಮಾಲೋಚಿಸುವುದು ಅಗತ್ಯ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+