ಜಿಯೋ ಫೈನಾನ್ಶಿಯಲ್ ಸರ್ವಿಸಸ್‌ನ ಷೇರುಗಳು ಇಂದು ಬಿಎಸ್‌ಇ ಮತ್ತು ಎನ್‌ಎಸ್‌ಇ ಎರಡರಲ್ಲೂ ವಹಿವಾಟಿನಲ್ಲಿ ಶೇಕಡ 8 ಕ್ಕಿಂತ ಅಧಿಕವಾಗಿ ಏರಿಕೆಯನ್ನು ಕಂಡಿದೆ. ಈ ವರದಿಯನ್ನು ಬರೆಯುವ ಸಮಯಕ್ಕೆ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರು ಶೇಕಡ 5.98 ರಷ್ಟು ಏರಿಕೆಯಾಗಿ, 259.80 ರೂಪಾಯಿ ಆಗಿದೆ. ಇನ್ನು ಈ ಹಿಂದೆ ಈ ಸ್ಟಾಕ್ ದರ ಶೇಕಡ 7.87 ರಷ್ಟು ಏರಿಕೆಯಾಗಿದೆ.
11:16 ಗಂಟೆಗೆ ಜೆಎಫ್‌ಎಸ್ ಷೇರುಗಳ ದರವು ಪ್ರತಿ ಷೇರಿಗೆ 262 ರೂಪಾಯಿ ಆಗಿದೆ. ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಷೇರುಗಳು ಬಿಎಸ್‌ಇಯಲ್ಲಿ ಆರಂಭಿಕ ವಹಿವಾಟಿನಲ್ಲಿ 254 ರೂಪಾಯಿಗೆ ವಹಿವಾಟು ಆರಂಭಿಸಿದೆ. ಪ್ರತಿ ಷೇರಿಗೆ ದಿನದ ಗರಿಷ್ಠ ಮಟ್ಟ 267 ರೂಪಾಯಿ ಆಗಿದೆ. ಹಾಗೆಯೇ ದಿನದ ಕನಿಷ್ಠ ಮಟ್ಟ 249 ರೂಪಾಯಿ ಆಗಿದೆ.

ಜಿಯೋ ಫೈನಾನ್ಶಿಯಲ್ ಸರ್ವಿಸಸ್ 1,67,250.21 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಬಿಎಸ್‌ಇಯಲ್ಲಿ ಇದರ 52 ವಾರಗಳ ಗರಿಷ್ಠ ಬೆಲೆಯು ಪ್ರತಿ ಷೇರಿಗೆ 278.20 ರೂಪಾಯಿ ಆಗಿದೆ. 52 ವಾರಗಳ ಕನಿಷ್ಠ ಬೆಲೆಯು ಪ್ರತಿ ಷೇರಿಗೆ 205.15 ರೂಪಾಯಿ ಆಗಿದೆ.
ಕಳೆದ ಒಂದು ವಾರದಲ್ಲಿ ಬಿಎಸ್‌ಇಯಲ್ಲಿ ಮಾತ್ರ, ಸೆನ್ಸೆಕ್ಸ್ ಕೇವಲ ಶೇಕಡ 0.62ರಷ್ಟು ಏರಿದಾಗ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಷೇರುಗಳು ಶೇಕಡ 23.69ರಷ್ಟು ಗಳಿಸಿದೆ. ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರುಗಳು ಕಳೆದ 2 ವಾರಗಳಲ್ಲಿ ಶೇಕಡ 3.99 ರಷ್ಟು ಲಾಭವನ್ನು ಕಂಡಿದೆ.
ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರುಗಳು ಸೆಪ್ಟೆಂಬರ್ 1, 2023, ಆಗಸ್ಟ್ 31, ಆಗಸ್ಟ್ 30, ಮತ್ತು ಆಗಸ್ಟ್ 29 ರಂದು ಬಿಎಸ್‌ಇಯಲ್ಲಿ ಭಾರೀ ಏರಿಕೆಯಾಗಿದೆ. ಇದು ಆಗಸ್ಟ್ 31 ರಂದು 2.21 ಪಟ್ಟು ಹೆಚ್ಚಳ ಕಂಡಿದೆ. ಇತ್ತೀಚೆಗೆ ಬಿಎಸ್‌ಇಯಲ್ಲಿ ಒಂದು ಸುತ್ತೋಲೆಯಲ್ಲಿ ಸ್ಟಾಕ್‌ನ ಬೆಲೆಗಳು ಶೇಕಡ 5ರಿಂದ ಶೇಕಡ 20ಕ್ಕೆ ಹೆಚ್ಚಳವಾಗಿದೆ.
ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ಗಾಗಿ ಸರ್ಕ್ಯೂಟ್ ಮಿತಿಯನ್ನು ಪರಿಷ್ಕರಿಸಿದ ನಂತರ, ಈ ವಾರ ನಿಫ್ಟಿ ಸೇರಿದಂತೆ ಎನ್‌ಎಸ್‌ಇ ಸೂಚ್ಯಂಕಗಳಿಂದ ಶೀಘ್ರದಲ್ಲೇ ಹೊರಗಿಡುವ ಸಾಧ್ಯತೆಯಿದೆ. ಕಳೆದ ತಿಂಗಳ ಆರಂಭದಲ್ಲಿ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಅನ್ನು ಷೇರುಪೇಟೆಯಲ್ಲಿ ಲೀಸ್ಟ್ ಮಾಡಲಾಗಿದೆ. ಪ್ರತಿ ಷೇರಿಗೆ 262 ರೂಪಾಯಿಯಂತೆ ವಹಿವಾಟು ಪ್ರಾರಂಭವಾಗಿದೆ.
ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲೀಸ್ಟ್ ಮಾಡಿದಾಗ ಪ್ರತಿಕ್ರಿಯೆ ನೀಡಿದ ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನ ಅಧ್ಯಕ್ಷ ಕೆವಿ ಕಾಮತ್, "ಜಿಯೋ ಫೈನಾನ್ಷಿಯಲ್ ಭಾರತದ ಹಣಕಾಸು ಸೇವೆಗಳ ವಲಯದಲ್ಲಿ ಪ್ರಮುಖ ಆಟಗಾರನಾಗಲಿದೆ. ಭಾರತದ ಹಣಕಾಸು ವಲಯಕ್ಕೆ ಅಭೂತಪೂರ್ವವಾದ ಕೊಡುಗೆಯನ್ನು ನೀಡಲಿದೆ," ಎಂದು ತಿಳಿಸಿದರು.
ಕಳೆದ ತಿಂಗಳ ಆರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಬೇರ್ಪಟ್ಟ ಜಿಯೋ ಫೈನಾನ್ಶಿಯಲ್ ಸರ್ವೀಸಸ್ (ಜೆಎಫ್‌ಎಸ್) ಅನ್ನು ಸೋಮವಾರ (ಆಗಸ್ಟ್ 21, 2023) ಷೇರು ಪೇಟೆಯಲ್ಲಿ ಲೀಸ್ಟ್ ಮಾಡಲಾಗಿದೆ.


Click it and Unblock the Notifications