ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ಜಾಗತಿಕ ಕಂಪನಿಗಳ ಸಹಭಾಗಿತ್ವದಲ್ಲಿ ವಿಮಾ ಉತ್ಪನ್ನಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಸೋಮವಾರ ಹೇಳಿದ್ದಾರೆ.
"ಜೆಎಫ್‌ಎಸ್‌ಎಲ್ ಸರಳ, ಆದರೆ ಸ್ಮಾರ್ಟ್, ಜೀವನ, ಸಾಮಾನ್ಯ ಮತ್ತು ಆರೋಗ್ಯ-ವಿಮಾ ಉತ್ಪನ್ನಗಳನ್ನು ತಡೆರಹಿತ ಡಿಜಿಟಲ್ ಇಂಟರ್ಫೇಸ್ ಸೇವೆ ನೀಡಲು ವಿಮಾ ವಿಭಾಗವನ್ನು ಪ್ರವೇಶಿಸುತ್ತದೆ. ಇದಕ್ಕಾಗಿ ಜಾಗತಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡುವ ನಿರೀಕ್ಷೆಯಿದೆ," ಎಂದು ಮುಕೇಶ್ ಅಂಬಾನಿ ಆರ್‌ಐಎಲ್‌ನ ವರ್ಚುವಲ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.

ಟೆಲಿಕಾಂನಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಯಶಸ್ವಿಯಾಗಿದೆ. ಈ ನಡುವೆ ಹಣಕಾಸು-ಸೇವೆಗಳ ಜಾಗದಲ್ಲಿ ಜಿಯೋ ಫೈನಾನ್ಶಿಯಲ್ ಯಶಸ್ಸಿಗೆ ಅಡ್ಡಿಬರುವಂತೆ ಕಂಡಿದೆ. ಈ ನಡುವೆ ವಿಮೆ ಮತ್ತು ಇತರ ಹಣಕಾಸು-ವಲಯ ಉತ್ಪನ್ನಗಳಲ್ಲಿ ಸಂಸ್ಥೆಯು ಯಶಸ್ಸನ್ನು ಕಾಣುವುದು ಅತೀ ಸುಲಭವೇನಲ್ಲ ಎಂದು ತಜ್ಞರು ಹೇಳುತ್ತಾರೆ.
ಹಣಕಾಸು ವಲಯವು ಬೇರೆ ವಲಯಗಳಂತೆ ಅಲ್ಲ. ಬ್ಯಾಂಕುಗಳು, ಬ್ಯಾಕೇತರ ಹಣಕಾಸು ಸಂಸ್ಥೆ, ವಿಮಾ ಸಂಸ್ಥೆಗಳು ಹಲವಾರು ವರ್ಷಗಳಿಂದ ಹೆಚ್ಚು ಬಿಗಿಯಾಗಿ ನಿಯಂತ್ರಿಸಲ್ಪಡುವ ಕ್ಷೇತ್ರವಾಗಿದೆ. ಆದ್ದರಿಂದಾಗಿ ಈಗ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಹಣಕಾಸು ಕ್ಷೇತ್ರದಲ್ಲಿ ಸುಲಭವಾಗಿ ಯಶಸ್ಸು ಕಾಣಲು ಸಾಧ್ಯವಾಗದು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.
ಇತ್ತೀಚೆಗೆ ಸ್ಟಾಕ್ ಮಾರುಕಟ್ಟೆಗೆ ಎಂಟ್ರಿ
ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಹೊಸದಾಗಿ ಪ್ರವೇಶಿಸಿದ ಜಿಯೋ ಹಣಕಾಸು ಸೇವೆ (ಜಿಯೋ ಫೈನಾನ್ಶಿಯಲ್ ಸರ್ವಿಸಸ್) ಆರಂಭವಾದ ಇಷ್ಟು ದಿನದಲ್ಲಿಯೇ ಭಾರೀ ನಷ್ಟವನ್ನು ಕಂಡಿದೆ. ಆರಂಭದಿಂದ ನಾಲ್ಕು ದಿನದಲ್ಲೇ ಸ್ಟಾಕ್ ಇಳಿಕೆಯನ್ನೇ ಕಂಡಿದೆ. ನಾಲ್ಕು ದಿನಗಳಲ್ಲಿ, ಎನ್‌ಬಿಎಫ್‌ಸಿ ಸ್ಟಾಕ್ ಶೇಕಡ 20ರಷದ್ಟು ಕುಸಿತ ಕಂಡಿದ್ದು, ಹೂಡಿಕೆದಾರರ ಸಂಪತ್ತಿನ ಸುಮಾರು29,000 ಕೋಟಿ ರೂಪಾಯಿ ನಷ್ಟವಾಗಿದೆ.
ಜಿಯೋ ಫೈನಾನ್ಶಿಯಲ್ ಷೇರುಗಳು ನಾಲ್ಕು ದಿನದಿಂದಲೂ ನಷ್ಟವನ್ನು ಕಾಣುತ್ತಾ ಬಂದಿದೆ. ಪ್ರಮುಖ ಸೂಚ್ಯಂಕಗಳಿಂದ ಇದು ಆಗಸ್ಟ್ 29 ಕ್ಕೆ ನಿರ್ಗಮನವಾಗಲಿದೆ. ಆಗಸ್ಟ್ 21 ರಂದು ಲಿಸ್ಟಿಂಗ್ ವೇಳೆ ಮಾರುಕಟ್ಟೆ ಮೌಲ್ಯವು 1.66 ಲಕ್ಷ ಕೋಟಿ ರೂಪಾಯಿ ಆಗಿದೆ. ಆದರೆ ನಾಲ್ಕು ದಿನದಲ್ಲೇ ಮಾರುಕಟ್ಟೆ ಮೌಲ್ಯವು 29,000 ಕೋಟಿ ರೂಪಾಯಿಗಿಂತ ಅಧಿಕ ಇಳಿಕೆಯಾಗಿದೆ. ನಾಲ್ಕು ವಹಿವಾಟು ಅವಧಿಗಳಲ್ಲಿ, ಜಿಯೋ ಫೈನಾನ್ಶಿಯಲ್ ಷೇರುಗಳು ಶೇಕಡ 20ರಷ್ಟು ಕುಸಿದಿದೆ.


Click it and Unblock the Notifications