ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಇನ್ಮುಂದೆ ನೀವು ಡೇಟಾ ಹಾಕಿಸಿಕೊಳ್ಳದೇ ಬರೀ ವಾಯ್ಸ್ ಕರೆ ಹಾಗೂ SMS ಮಾತ್ರ ಇರುವ ಪ್ರಿಪೇಯ್ಡ್ ಪ್ಲಾನ್‌ಗಳನ್ನು ನಿಮ್ಮ ಸಿಮ್‌ಗೆ ರಿಚಾರ್ಜ್ ಮಾಡಿಸಿಕೊಳ್ಳಬಹುದು.ಹಾಗಿದ್ರೆ ಯಾವ ಪ್ಲಾನ್‌ನ ರಿಚಾರ್ಜ್ ಮಾಡಿಸಿಕೊಂಡರೆ ಈ ಸೇವೆ ನಿಮ್ಮಗೆ ಸಿಗುತ್ತೆ? ಎಷ್ಟು ದಿನದವರೆಗೆ ವ್ಯಾಲಿಡಿಟಿ ಇರುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಹೌದು, ರಿಲಯನ್ಸ್ ಜಿಯೋ ಪ್ರತಿ ದಿನ ಹೊಸ ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡುತಲೇ ಇರತ್ತದೆ. ಇದೀಗ ಡೇಟಾ ಇಲ್ಲದೆ ಜಿಯೋದಿಂದ ಕಡಿಮೆ ದರದ ವಾಯ್ಸ್ ಮತ್ತು ಎಸ್ಎಂಎಸ್ ಪ್ಲಾನ್ ಲಾಂಚ್ ಮಾಡಿದೆ. ನಿಮಗೆ ಕೈಗೆಟುಕುವ ದರದಲ್ಲಿ ಕರೆ, ಡೇಟಾ ಸೇರಿದಂತೆ ಹಲವು ಸೌಲಭ್ಯ ನೀಡುತ್ತಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಇತ್ತೀಚೆಗೆ ಟೆಲಿಕಾಂ ಕಂಪನಿಗಳು ಡೇಟಾ ಸೇವೆಗಳ ಅಗತ್ಯವಿಲ್ಲದೇ ಕರೆ ಮತ್ತು SMS ಅನ್ನು ಅವಲಂಬಿಸಿರುವ ಬಳಕೆದಾರರಿಗೆ ಕೈಗೆಟುಕುವ ಧ್ವನಿ ಮಾತ್ರ ಯೋಜನೆಗಳನ್ನು ಪರಿಚಯಿಸಲು ಕಡ್ಡಾಯ ಮಾಡಿದೆ. ಹಿರಿಯ ನಾಗರಿಕರಿಗರ ಮತ್ತು ಗ್ರಾಮೀಣ ಜನರಿಗೆ ಈ ಹೊಸ ಪ್ಲಾನ್ ಹೆಚ್ಚು ಅನುಕೂಲವಾಗಲಿದೆ.

458 ರೂ.ಗಳ ರಿಚಾರ್ಜ್ ಪ್ಲಾನ್
ಟ್ರಾಯ್ ಮಾರ್ಗದರ್ಶನದಂತೆ ರಿಲಯನ್ಸ್ ಜಿಯೋ ಹೊಸ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಹೊಸ ಪ್ಲಾನ್, 458 ರೂ.ಗಳ ರಿಚಾರ್ಜ್ ಪ್ಲಾನ್‌ನಲ್ಲಿ 84 ದಿನಗಳ ಅನ್‌ಲಿಮಿಟೆಡ್ ಕರೆಗಳು,1000 ಎಎಸ್‌ಎಂಎಸ್, ಜಿಯೋ ಆ್ಯಪ್‌ಗಳಿಗೆ ಉಚಿತ ಸಬ್‌ಸ್ಕ್ರಿಪ್ಶನ್ ಸಹ ಸಿಗಲಿದೆ.
1958ರೂ.ಗಳ ಪ್ಲಾನ್
ಜಿಯೋ 1958ಕ್ಕೆ 365 ದಿನಗಳ ರಿಚಾರ್ಜ್ ಪ್ಲಾನ್‌ನಲ್ಲಿಅನ್‌ಲಿಮಿಟೆಡ್ ಕರೆಗಳು, 3600 SMS, ಜಿಯೋ ಆ್ಯಪ್‌ಗಳಿಗೆ ಉಚಿತ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.
ಈ ಪ್ಲಾನ್‌ಗಳು ಹೊಸ ಟ್ರಾಯ್ ನಿಯಮದಡಿ ಇರಲಿದೆ. ಈ ಪ್ಲಾನ್ ಜೊತೆ ಹೆಚ್ಚುವರಿ ಡೇಟಾ ಅಥವಾ ಹೆಚ್ಚಿನ ಡೇಟಾ ಬೇಕಾದವರು ಜಿಯೋದ ಡೇಟಾ ಪ್ಯಾಕ್‌ಗಳನ್ನು ಖರೀದಿಸಬಹುದು. ಈ ಮೂಲಕ ಜಿಯೋ ಗ್ರಾಹಕರು ಡೇಟಾ ಸೌಲಭ್ಯ ಬಳಸಿಕೊಳ್ಳಬಹುದು.
ಜಿಯೋ 299 ರೂ. ಪ್ಲಾನ್
ಜಿಯೋ ಈ ಯೋಜನೆಯ ಬೆಲೆಯನ್ನು ಹೆಚ್ಚಿಸುವ ಮೂಲಕ ಕಂಪನಿಯು ರೀಚಾರ್ಜ್ ಅನ್ನು ಮತ್ತಷ್ಟು ದುಬಾರಿಗೊಳಿಸಿದೆ. ಆದರೆ, ಇದರಲ್ಲಿ ಲಭ್ಯವಿರುವ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ 199 ರೂ.ಗೆ ಲಭ್ಯವಿದ್ದ ಪ್ರಯೋಜನಗಳು, ಸದ್ಯ 100 ರೂ. ಹೆಚ್ಚಳವಾಗಿದ್ದರೂ, ಇದೇ ಪ್ರಯೋಜನಗಳು 299 ರೂ. ಪ್ಲಾನ್‌ನಲ್ಲಿ ಲಭ್ಯವಿರುತ್ತವೆ.
ಯಾವುದೇ ಸಂಖ್ಯೆಗೆ ಉಚಿತ ವಾಯ್ಸ್ ಕಾಲ್ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ರೋಮಿಂಗ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಜಿಯೋ ನೆಟ್‌ವರ್ಕ್ ಸೇರಿದಂತೆ ಇತರೆ ಕಂಪನಿಗಳ ಸಂಖ್ಯೆಗಳಲ್ಲಿ ಅವುಗಳ ಬಳಕೆ ಉಚಿತವಾಗಿರುತ್ತದೆ. ಇದರೊಂದಿಗೆ, ಯಾವುದೇ ದೈನಂದಿನ ಮಿತಿಯಿಲ್ಲದೆ ಬರುವ ಪ್ಲಾನ್‌ನಲ್ಲಿ ಜಿಯೋ ಒಟ್ಟು 25GB ಹೈ ಸ್ಪೀಡ್ ಡೇಟಾ ನೀಡುತ್ತದೆ. ನೀವು ಪ್ರತಿದಿನ 100 ಎಸ್‌ಎಂಎಸ್‌ನ (SMS) ಲಾಭ ಸಹ ನೀವು ಪಡೆಯಬಹುದು.
ಜಿಯೋ 349 ರೂ. ಪ್ಲಾನ್
ಜಿಯೋ 199 ರೂ. ಪ್ಲಾನ್ ದರ ಹೆಚ್ಚಳವಾದ ಬಳಿಕ, ಇನ್ಮುಂದೆ 299 ರೂ. ಆಗಲಿದೆ. ಈ ಯೋಜನೆಯು ಹಳೆಯ ಗ್ರಾಹಕರಿಗೆ ಮಾತ್ರ ಮುಂದುವರಿಯುತ್ತದೆ. ಹೊಸ ಜಿಯೋ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ 349 ರೂ.ನ ಅಗ್ಗದ ಯೋಜನೆ ಇದೆ. ಈ ಪ್ಲಾನ್‌ನಲ್ಲಿ ನೀವು 30 GB 5G ಡೇಟಾ ಪಡೆಯಬಹುದು. ಇದರೊಂದಿಗೆ ಉಚಿತ ಅನ್‌ಲಿಮಿಟೆಡ್ ಕಾಲ್ಸ್ ಮತ್ತು ಪ್ರತಿನಿತ್ಯ 100 ಉಚಿತ ಎಸ್‌ಎಂಎಸ್ ಸಹ ಸಿಗುತ್ತದೆ.
ಜಿಯೋ ಪ್ಲಾನ್ ಯೋಜನೆ ಬದಲಾವಣೆಗಳು
ಈ ಎರಡು ಹೊಸ ಯೋಜನೆಗಳ ಪರಿಚಯದ ಜೊತೆಗೆ, ಜಿಯೋ ಎರಡು ಬಜೆಟ್ ಸ್ನೇಹಿ ಯೋಜನೆಗಳನ್ನು ತೆಗೆದುಹಾಕಿದೆ. ಅವುಗಳು ಯಾವುವು ಇಲ್ಲಿದೆ ಮಾಹಿತಿ
1,899 ರೂ.ಗಳ ರಿಚಾರ್ಜ್ ಪ್ಲಾನ್ : ಈ ಯಜನೆಯು 336 ದಿನಗಳ ಮಾನ್ಯತೆಯೊಂದಿಗೆ 24GB ಡೇಟಾವನ್ನು ನೀಡುತ್ತದೆ.
479 ರೂ.ಗಳ ರಿಚಾರ್ಜ್ ಪ್ಲಾನ್ : ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ 6GB ಡೇಟಾವನ್ನು ನೀಡುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications