ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ. ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿರುವ ಎಲ್ಲಾ ಸಿನಿಮಾ, ಸೀರೀಸ್‌ಗಳನ್ನು ನೋಡುವ ಅವಕಾಶವನ್ನು ಈ ಪ್ಲಾನ್‌ಗಳು ಒಳಗೊಂಡಿರಲಿದೆ. ಇದರಿಂದ ಜಿಯೋ ಗ್ರಾಹಕರಿಗೆ ಮತ್ತಷ್ಟು ಲಾಭವಾಗಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯೋಜನೆ ಮತ್ತು ಕೊಡುಗೆಗಳನ್ನು ಪರಿಷ್ಕರಿಸುತ್ತಿರುವ ಜಿಯೋ, ಹಿಂದಿನದಕ್ಕಿಂತ ಹೆಚ್ಚಿನ ವಿಷಯಗಳನ್ನು ನೋಡುವ ಅವಕಾಶವನ್ನು ಹೊಂದಿರುವ ಡಿಸ್ನಿ+ ಹಾಟ್‌ಸ್ಟಾರ್‌ನ 1 ವರ್ಷದ ಚಂದಾದಾರಿಕೆಯನ್ನು ನೀಡುವುದರ ಜೊತೆಗೆ ಅನಿಯಮಿತ ಧ್ವನಿ, ಡೇಟಾ, ಎಸ್‌ಎಂಎಸ್, ಜಿಯೋ ಆಪ್‌ಗಳು ಮತ್ತು ಇತರ ಪ್ರಯೋಜನಗಳನ್ನು ನೀಡಲಿದೆ.
ಹಳೇ ಜಿಯೋ ಪ್ಲಾನ್‌ಗಳು:
ಮೊದಲು ಜಿಯೋ ತನ್ನ ಯೋಜನೆಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ನೀಡುತ್ತಿತ್ತು. ಈ ಚಂದಾದಾರಿಕೆಯಲ್ಲಿ ಲೈವ್ ಕ್ರೀಡೆಗಳು, ಹಾಟ್ ಸ್ಟಾರ್ ವಿಶೇಷಗಳು, ಬ್ಲಾಕ್ ಬಸ್ಟರ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಬಳಕೆದಾರರು ಪ್ರವೇಶವನ್ನು ಪಡೆಯುತ್ತಿದ್ದರು. ಇದರೊಂದಿಗೆ 3 ಭಾರತೀಯ ಭಾಷೆಗಳಲ್ಲಿ ಡಬ್ ಮಾಡಲಾದ ಸಿನಿಮಾಗಳನ್ನ ನೋಡಬಹುದಾಗಿತ್ತು.
ಹೊಚ್ಚ ಹೊಸ ಯೋಜನೆಗಳು:
ಹೊಸ ಜಿಯೋ ಯೋಜನೆಗಳು ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿರುವ ಎಲ್ಲಾ ಹೊಸ ವಿಷಯಗಳನ್ನು ನೋಡುವ ಅವಕಾಶ ನೀಡಲಿದೆ. ಡಿಸ್ನಿ+ ಓರಿಜಿನಲ್ಸ್, ಡಿಸ್ನಿ ಟಿವಿ ಶೋಗಳು ಸೇರಿದಂತೆ ಇಂಗ್ಲಿಷ್ ಭಾಷೆಯಲ್ಲಿ ಅಂತರಾಷ್ಟ್ರೀಯ ಕಂಟೆಂಟ್‌ಗಳನ್ನು ನೋಡುವ ಅವಕಾಶವನ್ನು ಮಾಡಿಕೊಡಲಿದೆ. ಇದರೊಂದಿಗೆ ಮಾರ್ವೆಲ್, ಸ್ಟಾರ್ ವಾರ್ಸ್, ನ್ಯಾಷನಲ್ ಜಿಯೋಗ್ರಾಫಿಕ್, HBO, FX, ಶೋಟೈಮ್ ಮತ್ತು ಇನ್ನಷ್ಟು ವಿಷಯಗಳಿಗೆ ಮುಕ್ತ ಪ್ರವೇಶವನ್ನು ನೀಡಲಿದೆ.
ಹೊಸ ಜಿಯೋ ಯೋಜನೆಗಳು ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ನೊಂದಿಗೆ:
ಪ್ಲಾನ್ 1 :ರೂ. 499
ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 3 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 499 ಪಾವತಿ ಮಾಡಬೇಕಾಗಿದೆ.
ಪ್ಲಾನ್ 2 :ರೂ. 666
ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 666 ಪಾವತಿ ಮಾಡಬೇಕಾಗಿದೆ.
ಪ್ಲಾನ್ 3 :ರೂ. 888
ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 888 ಪಾವತಿ ಮಾಡಬೇಕಾಗಿದೆ.
ಪ್ಲಾನ್ 4 :ರೂ. 2599 (ಒಂದು ವರ್ಷ ವ್ಯಾಲಿಡಿಟಿ)
ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್ ಕಳುಹಿಸುವ ಅವಕಾಶವು ದೊರೆಯಲಿದೆ. 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 2599 ಪಾವತಿ ಮಾಡಬೇಕಾಗಿದೆ.
ಪ್ಲಾನ್ 5 :ರೂ. 549
ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 1.5 GB ಡೇಟಾವನ್ನು ಪಡೆಯಲಿದ್ದಾರೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 549 ಪಾವತಿ ಮಾಡಬೇಕಾಗಿದೆ. (ಇದರಲ್ಲಿ ಉಚಿತ ಕರೆ ಸೌಲಭ್ಯವಿರುವುದಿಲ್ಲ)
ಈ ಹೊಸ ಪ್ಲಾನ್ ಗಳು 01ನೇ ಸೆಪ್ಟೆಂಬರ್ 2021 ರಿಂದ ಲಭ್ಯವಿರುತ್ತದೆ. ಸಕ್ರಿಯ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳಲ್ಲಿರುವ ಎಲ್ಲಾ ಜಿಯೋ ಗ್ರಾಹಕರು ಅಸ್ತಿತ್ವದಲ್ಲಿರುವ ಪ್ರಯೋಜನಗಳನ್ನು ಅವರ ಪ್ರಸ್ತುತ ಚಂದಾದಾರಿಕೆ ಅವಧಿ ಮುಗಿಯುವವರೆಗೆ ಆನಂದಿಸುವುದನ್ನು ಮುಂದುವರಿಸುತ್ತಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications