ಜಿಯೋ ಭಾರತ್ ಫೋನ್ ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್. ಇನ್ಮುಂದೆ ಯುಪಿಐ (UPI) ಪಾವತಿ ಧ್ವನಿ ಸೇವೆ ಸಂಪೂರ್ಣ ಉಚಿತ! ಹೌದು, ಜಿಯೋ ಭಾರತ್ ಫೋನ್ ಬಳಕೆದಾರರಿಗೆ ಜಿಯೋ ಭರ್ಜರಿ ಆಫರ್ ನೀಡಿದ್ದು, ಈ ಮೂಲಕ ವ್ಯಾಪಾರಿಗಳು 1,500 ರೂ. ಉಳಿತಾಯ ಮಾಡಬಹುದು. ರಿಲಯನ್ಸ್ ಜಿಯೋ ಭಾರತ್ ಫೋನ್‌ಗಳಲ್ಲಿ ಹೊಸ ಮತ್ತು ಕ್ರಾಂತಿಕಾರಿ ಸೇವೆ ಶುರು ಮಾಡಿದೆ.ಈ ಫೀಚರ್ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಹೆಚ್ಚು ಲಾಭದಾಯಕವಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಜಿಯೋ ತನ್ನ ಜಿಯೋ ಭಾರತ್ ಫೋನಿನಲ್ಲಿ ಸಂಪೂರ್ಣ ಉಚಿತ ಸೌಂಡ್ ಪೇ (JioSoundPay Feature) ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಈ ಜಿಯೋ ಸೌಂಡ್ ಪೇ ಫೀಚರ್ ಯುಪಿಐ ಪಾವತಿಗಳನ್ನು ಖಚಿತಪಡಿಸಲು ಆಡಿಯೋ ಎಚ್ಚರಿಕೆಗಳನ್ನು ನೀಡುತ್ತದೆ. ಈ ಮೂಲಕ ವ್ಯಾಪಾರಿಗಳಿಗೆ ಹೆಚ್ಚುವರಿ ಧ್ವನಿ ಪೆಟ್ಟಿಗೆಯ ಅಗತ್ಯವನ್ನು ತೆಗೆದುಹಾಕುತ್ತದೆ. ವಿಶೇಷವೆಂದರೆ ಈ ಸೇವೆಯೂ ಸಂಪೂರ್ಣ ಉಚಿತವಾಗಿದೆ.

ಇನ್ಮುಂದೆ 1,500 ರೂ. ಉಳಿಸಬಹುದು!
ಸಣ್ಣ ವ್ಯಾಪಾರಸ್ಥರು ಈವರೆಗೆ ಪ್ರತಿ ತಿಂಗಳು ಸೌಂಡ್ ಬಾಕ್ಸ್‌ಗಾಗಿ 125 ರೂಪಾಯಿ ವೆಚ್ಚ ಮಾಡುತ್ತಿದ್ದರು. ಜಿಯೋ ಸೌಂಡ್ ಪೇ (JioSoundPay) ಪ್ರಾರಂಭವು ಈ ಖರ್ಚಿಗೆ ಅಂತ್ಯವಾಡಿದೆ. ಇನ್ಮುಂದೆ ಜಿಯೋ ಭಾರತ್ (Jio Bharat) ಫೋನ್ ಬಳಕೆದಾರರು ಪ್ರತಿ ವರ್ಷ 1,500 ರೂ. ಉಳಿಸಲು ಸಾಧ್ಯವಾಗುತ್ತದೆ. ಈ ಫೀಚರ್ ವ್ಯಾಪಾರಿಗಳಿಗೆ ಸುಲಭ ಮತ್ತು ಕೈಗೆಟುಕುವ ಸೇವೆ ಒದಗಿಸುತ್ತದೆ. ಜಿಯೋನ ಈ ಸೇವೆ ಸಣ್ಣ ಅಂಗಡಿ ಮಾಲೀಕರು, ತರಕಾರಿ ಮಾರಾಟಗಾರರು ಮತ್ತು ಸಣ್ಣ ವ್ಯಾಪಾರಗಳಿಗೆ ನೇರವಾಗಿ ಲಾಭವನ್ನು ನೀಡುತ್ತದೆ. ಏಕೆಂದರೆ ವ್ಯಾಪಾರಿಗಳು ಪಾವತಿಯನ್ನು ಸ್ವೀಕರಿಸಿದ ಬಳಿಕ ಕೂಡಲೇ ಆಡಿಯೋ ದೃಢೀಕರಣ ಪಡೆಯಬಹುದಾಗಿದೆ.
ಜಸ್ಟ್ 699 ರೂ.ಗೆ ಜಿಯೋ ಭಾರತ್ ಫೋನ್ ಲಭ್ಯ
ಜಿಯೋ ಪ್ರಮುಖ ಹೆಜ್ಜೆ ಇಟ್ಟಿದೆ. ಇದು ಡಿಜಿಟಲ್ ಇಂಡಿಯಾದ ದೃಷ್ಟಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಮುಖ ಕಾರ್ಯವಾಗಿದೆ. ವಿಶೇಷವೆಂದರೆ ಕೇವಲ 699 ರೂ.ನ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿರುವ ಜಿಯೋ ಭಾರತ್ ಫೋನ್ ಇದೀಗ ಮತ್ತಷ್ಟು ಆಕರ್ಷಕವಾಗಿದೆ. ಹೊಸ ಜಿಯೋ ಸೌಂಡ್ ಪೇ ಫೀಚರ್ ವ್ಯಾಪಾರಿಗಳಿಗೆ ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ತಮ್ಮ ವ್ಯವಹಾರಗಳನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ದೇಶದಲ್ಲಿರುವ ಸಣ್ಣ ವ್ಯಾಪಾರಗಳನ್ನು ಡಿಜಿಟಲ್ ಸಬಲೀಕರಣಗೊಳಿಸುವುದು ಈ ಫೀಚರ್‌ನ ಪ್ರಮುಖ ಉದ್ದೇಶವಾಗಿದೆ.
ಚಿಕ್ಕ ಉದ್ಯಮಿಯೂ ಆಧುನಿಕ ತಾಂತ್ರಿಕ ಸೌಲಭ್ಯ ಬಳಸಬಹುದು!
ಹೊಸ ಜಿಯೋ ಸೌಂಡ್ ಪೇ ಫೀಚರ್ ಬಗ್ಗೆ ರಿಲಯನ್ಸ್ ಜಿಯೋ ಅಧ್ಯಕ್ಷ ಸುನಿಲ್ ದತ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನನ್ನು ತಾಂತ್ರಿಕವಾಗಿ ಸಬಲೀಕರಣಗೊಳಿಸುವುದು ನಮ್ಮ ಗುರಿಯಾಗಿದೆ. ಜಿಯೋ ಸೌಂಡ್ ಪೇ ಫೀಚರ್ ಮೂಲಕ ನಾವು ಸಣ್ಣ ವ್ಯಾಪಾರಿಗಳನ್ನು ಡಿಜಿಟಲ್ ಆಗಿ ಸಕ್ರಿಯಗೊಳಿಸಲು ಬಯಸುತ್ತೇವೆ. ಈ ಕ್ರಮದೊಂದಿಗೆ, ಜಿಯೋ ಭಾರತವನ್ನು ಡಿಜಿಟಲ್ ಸಮಾಜದತ್ತ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗುತ್ತಿದೆ. ಇಲ್ಲಿ ಚಿಕ್ಕ ಉದ್ಯಮಿ ಕೂಡ ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಬಳಸಬಹುದು ಎಂದು ಸುನಿಲ್ ದತ್ ಅಭಿಪ್ರಾಯಪಟ್ಟಿದ್ದಾರೆ.
ಜಿಯೋ 'ವಂದೇ ಮಾತರಂ' ಹೊಸ ಆವೃತ್ತಿ ಲಾಂಚ್
ಜಿಯೋ ಸೌಂಡ್ ಪೇ ಫೀಚರ್ ಜೊತೆಗೆ ಮತ್ತೊಂದು ಸಿಹಿಸುದ್ದಿಯನ್ನು ನೀಡಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಜಿಯೋ ವಂದೇ ಮಾತರಂನ ಆಧುನಿಕ ಆವೃತ್ತಿಯನ್ನು ರಿಲೀಸ್ ಮಾಡಿದೆ. ಇದು ಜಿಯೋ ಸೌಂಡ್ ಪೇ ಜೊತೆಗೆ ಸಂಯೋಜಿಸಲ್ಪಟ್ಟಿದೆ. ಈ ಹೊಸ ಆವೃತ್ತಿಯು ಸ್ವಾತಂತ್ರ್ಯ ಹೋರಾಟದ ಉತ್ಸಾಹ ಮತ್ತು ಸಮಕಾಲೀನ ಸಂಗೀತದ ಸ್ಟ್ರೀಮ್‌ನ ಸಂಗಮವಾಗಿದೆ. ಎಲ್ಲಾ ಭಾರತೀಯರು ಇದನ್ನು ಮೈಜಿಯೋ (MyJio) ಆಪ್ ಅಥವಾ ಜಿಯೋಸಾವನ್ (JioSaavn) ನಲ್ಲಿ ಜಿಯೋ ಟ್ಯೂನ್ (JioTune) ಎಂದು ಹೊಂದಿಸಬಹುದಾಗಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications