ರಿಲಯನ್ಸ್ ಕಂಪನಿ ತನ್ನ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಭರ್ಜರಿ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ತಮ್ಮ ಬಳಕೆದಾರರ ಅನೂಕಲವನ್ನು ಗಮನಿಸಿ ಕಂಪನಿ ಕಾಲ ಕಾಲಕ್ಕೆ ಹೊಸ ಹೊಸ ಟಾರಿಫ್ ಪ್ಲ್ಯಾನ್ ಬಿಡುಗಡೆ ಮಾಡುತ್ತಿದೆ. ಕೆಲ ತಿಂಗಳ ಹಿಂದೆ ಖಾಸಗಿ ಕಂಪನಿಗಳ ರಿಚಾರ್ಜ್ ಪ್ಲ್ಯಾನ್ ದುಬಾರಿ ಆದ ಬಳಿಕ ಗ್ರಾಹಕ, ಬೇಸತ್ತು ಹೋಗಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಯೋ ಈಗ ಧಮಾಕೆದಾರ್ ಎರಡು ಯೋಜನೆಗಳನ್ನು ಲಾಂಚ್ ಮಾಡಿದೆ.
ಈ ರಿಚಾರ್ಜ್ ಪ್ಲ್ಯಾನ್‌ಗಳು ಗ್ರಾಹಕರಿಗೆ 5ಜಿ ಡೇಟಾ ಹಾಗೂ ಹೆಚ್ಚಿನ ದಿನದ ವ್ಯಾಲಿಡಿಟಿ ನೀಡುತ್ತದೆ. ಜಿಯೋ ಈಗ 1028 ರೂಪಾಯಿ ಹಾಗೂ 1029 ರೂಪಾಯಿಯ ಎರಡು ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಒಂದು ವೇಳೆ ನೀವು ಹೆಚ್ಚಿನ ವ್ಯಾಲಿಡಿಟಿ ಹಾಗೂ 5ಜಿ ಸೇವೆಗಳನ್ನು ಬಳಸುತ್ತಿದ್ದರೆ, ಈ ಪ್ಲ್ಯಾನ್‌ಗಳು ನಿಮಗೆ ಬೆಸ್ಟ್. ಈ ಯೋಜನೆಯ ಕುರಿತಾದ ಆಫರ್‌ಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

1028 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಏನು ಲಾಭ?
ಈ ಹಬ್ಬದ ಸಂದರ್ಭದಲ್ಲಿ ಜಿಯೋ ಭರ್ಜರಿ ಕೊಡುಗೆಗಳನ್ನು ಗ್ರಾಹಕರಿಗೆ ನೀಡಿದೆ. ಈ ಮೂಲಕ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಜಿಯೋ ಈಗ 1028 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ, ಬಳಕೆದಾರ 84 ದಿನಗಳ ವ್ಯಾಲಿಡಿಟಿ ಪಡೆಯುತ್ತಾರೆ. ಈ ರಿಚಾರ್ಜ್‌ನ ಅಡಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆಗಳನ್ನು ಮಾಡಬಹುದು. ಅಲ್ಲದೆ ಪ್ರತಿದಿನ 100 ಎಸ್‌ಎಂಎಸ್‌ಗಳು ಲಭ್ಯ. ಅಲ್ಲದೆ ದಿನಕ್ಕೆ 2 ಜಿಬಿ ಡೇಟಾದಂತೆ 168 ಜಿಬಿ ಡೇಟಾವನ್ನು ನೀಡಲು ಜಿಯೋ ನಿರ್ಧರಿಸಿದೆ. ಒಂದು ವೇಳೆ ನೀವು ಏನಾದ್ರೂ 5ಜಿ ನೆಟ್‌ವರ್ಕ್ ಇರುವ ಸ್ಥಳದಲ್ಲಿ ಇದ್ದರೆ, ಅನಿಯಮಿತವಾಗಿ 5 ಜಿ ಸೇವೆಯ ಲಾಭ ಪಡೆಯಬಹುದಾಗಿದೆ.
ಈ ರಿಚಾರ್ಜ್ ಪ್ಲ್ಯಾನ್ ಮಾಡಿಸಿಕೊಂಡಲ್ಲಿ ಹಲವು ಆಪ್‌ಗಳ ಚಂದಾದಾರಿಕೆ ಲಭ್ಯ. ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ.

ಅಮೆಜಾನ್ ಪ್ರೈಂ ಸೇವೆ ಲಭ್ಯ
ಇನ್ನು 1029 ರೂಪಾಯಿಯ ಇನ್ನೊಂದು ಆಫರ್ ರಿಲೀಸ್ ಮಾಡಿದೆ. ಇದರಲ್ಲಿಯೂ 1028 ರೂಪಾಯಿಯ ಆಫರ್‌ನಲ್ಲಿ ನೀಡಿದ ಸೇವೆಗಳನ್ನು ನೀಡಲಾಗುತ್ತದೆ. ಅಂದರೆ 84 ದಿನಗಳ ವರೆಗೆ ಅನಿಯಮಿತ ಕರೆ, ಎಸ್‌ಎಂಎಸ್ ಹಾಗೂ ಡೇಟಾ ಸೇವೆಗಳನ್ನು ನೀಡುತ್ತಿದ್ದು, ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಆದರೆ ಗ್ರಾಹಕ ಈ ಪ್ಲ್ಯಾನ್ ತೆಗೆದುಕೊಳ್ಳಲು ಹೆಚ್ಚುವಾರಿಯಾಗಿ ಒಂದು ರೂಪಾಯಿ ಖರ್ಚು ಮಾಡುವುದರಿಂದ ಅಮೆಜಾನ್ ಪ್ರೈನ್ ಚಂದಾದಾರಿಕೆ ನೀಡಲಾಗುತ್ತಿದೆ. ಅಲ್ಲದೆ ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಸಹ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸೇವೆಯನ್ನು ಬಳಕೆದಾರರಿಗೆ ನೀಡುತ್ತದೆ. ಈಗಾಗಲೇ ಜಿಯೋ ಹಲವು ರಿಚಾರ್ಜ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು ಈ ಎರಡು ಯೋಜನೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ.


Click it and Unblock the Notifications