ಗ್ರಾಹಕರಿಗೆ ಇನ್ನು ಹತ್ತಿರವಾಗುತ್ತಿದೆ ಜಿಯೋ: ಫೈನಾನ್ಸ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆ

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಜಿಯೋ ತನ್ನ ಗ್ರಾಹಕರಿಗೆ ಹೊಸ ಸೇವೆ ನೀಡಲು ಮುಂದಾಗಿದೆ. ಜಿಯೋ ಶುಕ್ರವಾರ ಫೈನಾನ್ಸ್ ಆಪ್ ಅನ್ನು ಬಿಡುಗಡೆ ಮಾಡಿದೆ. ಈ ಆಪ್‌ನ್ನು ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌, ಆಪಲ್‌ ಆಪ್‌ ಸ್ಟೋರ್‌ ಹಾಗೂ ಮೈ ಜಿಯೋ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಜಿಯೋ ಫೈನನ್ಸ್‌ ಆಪ್‌ನಡಿ ಗ್ರಾಹಕರು ಆಕರ್ಷಕ ಕೊಡುಗೆಗಳನ್ನು ಪಡೆಯಬಹುದಾಗಿದೆ.

ಜಿಯೋ ಫೈನಾನ್ಸ್ ಅಪ್ಲಿಕೇಶನ್‌ನ ತನ್ನ ಬೀಟಾ ಆವೃತ್ತಿಯನ್ನು ಇದೇ ಮೇ 30 ರಂದು ಲಾಂಚ್ ಮಾಡಿತ್ತು. ಈಗಾಗಲೇ ಈ ಆಪ್‌ನ್ನು 60 ಲಕ್ಷಕ್ಕೂ ಹೆಚ್ಚು ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ. ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈಗ ಸುಧಾರಿತ ಅಪ್ಲಿಕೇಶನ್ ಅನ್ನು ಲಾಂಛ್ ಮಾಡಿದೆ. ಜಿಯೋ ಫೈನಾನ್ಸಿಯಲ್ ಸರ್ವಿಸಸ್ ಈ ಮಾಹಿತಿಯನ್ನು ಸ್ಟಾಕ್ ಎಕ್ಸ್ಚೇಂಜ್‌ಗಳಿಗೆ ಫೈಲಿಂಗ್‌ ವೇಳೆ ನೀಡಿದೆ.

ಜಿಯೋ ಫೈನಾನ್ಸ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆ

ಏನೆಲ್ಲಾ ಲಾಭಗಳು ಸಿಗುತ್ತವೆ?

ಈಗಾಗಲೇ ಭಾರತದಲ್ಲಿ ಹತ್ತು ಹಲವು ವಲಯಗಳಲ್ಲಿ ತನ್ನದೇ ಚಾಪು ಮೂಡಿಸಿರುವ ರಿಲಯನ್ಸ್ ಜಿಯೋ ಈಗ ಮತ್ತೊಂದು ಕ್ಷೇತ್ರದಲ್ಲಿ ತನ್ನ ಹಿಡಿತವನ್ನು ಸಾಧಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಆಪ್‌ ಮೂಲಕ ಗ್ರಾಹಕ ಬ್ಯಾಲೆನ್ಸ್ ವರ್ಗಾವಣೆ, ಮ್ಯೂಚುವಲ್‌ ಫಂಡ್‌ಗಳ ಮೇಲೆ ಸಾಲ, ಗೃಹ ಸಾಲ, ಆಸ್ತಿಯ ಸಾಲನ ಸೇರಿದಂತೆ ವಿವಿಧ ಸೇವೆಗಳನ್ನು ಜಿಯೋ ಫೈನನ್ಸ್‌ ಅಪ್ಲಿಕೇಶನ್‌ನಲ್ಲಿ ಸೇರಿಸಲಾಗಿದೆ. ಈ ಸಾಲಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಜಿಯೋ ಫೈನಾನ್ಸ್ ಆಪ್ ಆರೋಗ್ಯ, ಜೀವ ಮತ್ತು ಕಾರು ವಿಮೆಯನ್ನು ಸಹ ನೀಡುತ್ತಿದೆ. ಈ ಸುದ್ದಿ ಹೊರಬಂದ ನಂತರ, ಜಿಯೋ ಫೈನಾನ್ಸಿಯಲ್ ಸರ್ವಿಸಸ್ ಷೇರು 0.07 ಶೇಕಡಾ ಏರಿಕೆ ಆಗಿದೆ.

15 ಲಕ್ಷ ಜನರು ದೈನಂದಿನ ಬಳಕೆ

ಜಿಯೋ ಫೈನಾನ್ಸ್ ಅಪ್ಲಿಕೇಶನ್‌ ಮೂಲಕ ಗ್ರಾಹಕ ಜಸ್ಟ್‌ 5 ನಿಮಿಷಗಳಲ್ಲಿ ಜಿಯೋ ಪೇಮೆಂಟ್ ಬ್ಯಾಂಕ್‌ನಲ್ಲಿ ಡಿಜಿಟಲ್ ಉಳಿತಾಯ ಖಾತೆ ತೆರೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಜಿಯೋ ಪೇಮೆಂಟ್ ಬ್ಯಾಂಕ್‌ ಮೂಲಕ 15 ಲಕ್ಷ ಗ್ರಾಹಕರು ತಮ್ಮ ದೈನಂದಿನ ವ್ಯವಹಾರ ನಡೆಸುತ್ತಿದ್ದಾರೆ. ಈ ಆಪ್ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ, ಯುಪಿಐ ಪಾವತಿ ಮತ್ತು ಮೊಬೈಲ್ ರೀಚಾರ್ಜ್ ಕೂಡ ಮಾಡಿಸಬಹುದಾಗಿದೆ.

ಜಿಯೋ ಫೈನಾನ್ಸ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆ

ಈಗಾಗಲೇ ಜಿಯೋ ತನ್ನ ಸಿಮ್‌ ಹಾಗೂ ಬ್ರಾಡ್‌ ಬ್ಯಾಂಡ್ ಸೇವೆಗಳಿಂದ ಗ್ರಾಹಕರಿಗೆ ಹತ್ತಿರವಾಗಿದೆ. ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಜಿಯೋ ಹಲವು ರೀತಿಯ ರಿಚಾರ್ಜ್‌ ಪ್ಲ್ಯಾನ್‌ ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕ ತನ್ನ ಅಗತ್ಯಗೆ ಅನುಗಣವಾಗಿ ಸೇವೆಯನ್ನು ಪಡೆಯಬಹುದಾಗಿದೆ. ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್‌ಗಳಿಂದ ಹಿಡಿದು ದುಬಾರಿ ಬೆಲೆಯ ರಿಚಾರ್ಜ್‌ ಯೋಜನೆಗಳನ್ನು ಜಿಯೋ ಲಾಂಛ್‌ ಮಾಡಿದೆ. ಇದರಲ್ಲಿ ಬಳಕೆದಾರ ಉಚಿತ ಎಸ್‌ಎಂಎಸ್‌, ಉಚಿತ ಕರೆಗಳು, ದೈನಂದಿನ ಹೈ ಸ್ಪೀಡ್ ಇಂಟರ್ನೆಟ್‌ ಸೇವೆ ಹಾಗೂ ಹಲವು ಮನೋರಂಜನಾ ಆಪ್‌ಗಳನ್ನು ಬಳಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+