For Quick Alerts
ALLOW NOTIFICATIONS  
For Daily Alerts

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರ (ಎಂಎಸ್‌ಎಂಬಿ)ಗಳ ಡಿಜಿಟಲ್ ಪರಿವರ್ತನೆಗೆ ಮುಂದಾದ ಜಿಯೋ

|

ಮೂರು ಪ್ರಮುಖ ಸ್ತಂಭಗಳ ಮೇಲೆ ಸ್ಥಾಪಿಸಲಾದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಜಿಯೋ ಬ್ಯುಸಿನೆಸ್ ಸಮಗ್ರ ಕೊಡುಗೆಯನ್ನು ಪರಿಚಯಿಸಿದೆ. ಲಕ್ಷಾಂತರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಪ್ರಮುಖವಾಗಿಸಿಕೊಂಡು ಹೊಸ ಆತ್ಮ-ನಿರ್ಭಾರ್ ಡಿಜಿಟಲ್ ಇಂಡಿಯಾವನ್ನು ರಚಿಸುವತ್ತ ಸಾಗಿದೆ.

 

ಜಿಯೋ ಬಿಸಿನೆಸ್ ವ್ಯಾಲ್ಯೂ ಪ್ರೊಪೊಸಿಷನ್‌ನ ಪ್ರಮುಖ ಅಂಶಗಳು:
1. ಗ್ರಾಹಕರ ಅನುಭವ ಉತ್ತಮಗೊಳಿಸಿ : ಗ್ರಾಹಕರನ್ನು ಸಂತೋಷ ಪಡಿಸುವ ಮತ್ತು ಹಿಂತಿರುಗುವಂತೆ ಉತ್ತಮ ಸೇವೆಗಳನ್ನು ಒದಗಿಸುವುದು.
2. ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡಿ ಮತ್ತು ಆದಾಯವನ್ನು ಹೆಚ್ಚಿಸಿ: ವ್ಯವಹಾರವನ್ನು ಆನ್‌ಲೈನ್‌ನಲ್ಲಿ ಅನ್ವೇಷಿಸುವಂತೆ ಮಾಡುವುದು.
3. 24 * 7 ಕಾರ್ಯಾನಿರ್ವಹಿಸಿ: ನೌಕರರು, ಗ್ರಾಹಕರು ಮತ್ತು ವ್ಯವಹಾರವನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಿರ್ವಹಿಸಿ
4. ವ್ಯವಹಾರ ದಕ್ಷತೆಯನ್ನು ಹೆಚ್ಚಿಸಿ: ಡಿಜಿಟಲ್ ಪರಿಹಾರದಿಂದ ಪ್ರಮಾಣದ ಕಾರ್ಯಾಚರಣೆಗಳನ್ನು ನಿಯಂತ್ರಿಸಿ
5. ವೆಚ್ಚವನ್ನು ಕಡಿಮೆ ಮಾಡಿ: ಡಿಜಿಟಲ್ ಪರಿಹಾರಗಳ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಿ

 
ಎಂಎಸ್‌ಎಂಬಿ ವ್ಯವಹಾರಗಳ ಡಿಜಿಟಲ್ ಪರಿವರ್ತನೆಗೆ ಮುಂದಾದ ಜಿಯೋ

ಜಿಯೋ ಬ್ಯುಸಿನೆಸ್ ಯೋಜನೆಗಳು

A. ಬ್ರಾಡ್‌ಬ್ಯಾಂಡ್ + ಧ್ವನಿ ಕೊಡುಗೆ
ರೂ.901ಕ್ಕೆ ಒಂದು ತಿಂಗಳ ಪ್ಲಾನ್: ಇದರಲ್ಲಿ 100 mbps ವೇಗದ ಇಂಟರ್‌ನೆಟ್ ಸೇವೆಯೊಂದಿಗೆ ಅನ್‌ಲಿಮೆಟೆಡ್ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ದೊರೆಯಲಿದ್ದು, ಒಂದು ಲೈನ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್‌ ಕರೆಗಳನ್ನು ಮಾಡುವ ಅವಕಾಶ ದೊಂದಿಗೆ ಮೊಬೈಲಿಟಿ ಸೇವೆಯು ದೊರೆಯಲಿದೆ. ಇದೆ ಬೇರೆ ನೆಟ್‌ವರ್ಕ್‌ಗಳಲ್ಲಿ ಪಡೆಯಲು ತಿಂಗಳಿಗೆ ರೂ.9900 ಪಾವತಿ ಮಾಡಬೇಕಾಗದೆ. ಹಾಗಾಗಿ ಜಿಯೋ 10/1 ಕಡಿಮೆ ವೆಚ್ಚದಲ್ಲಿ ಸೇವೆಯನ್ನು ನೀಡುತ್ತಿದೆ.

B. ಎಲ್ಲಾ ಜಿಯೋ ಡಿಜಿಟಲ್ ಸೆಲ್ಯೂಷನ್ ಗಳೊಂದಿಗೆ ಸಂಯೋಜನೆ
ಕನೆಕ್ಟಿವಿಟಿ: ರೂ. 5001 ಪಾವತಿ ಮಾಡಿದರೆ , 1 gbps ವೇಗದ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯು ದೊರೆಯಲಿದ್ದು, ನಾಲ್ಕು ಲೈನ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್‌ ಕರೆಗಳನ್ನು ಮಾಡುವ ಅವಕಾಶವು ದೊರೆಯಲಿದೆ. ಅಲ್ಲದೇ ಮೊಬೈಲಿಟಿ ಸೇವೆಯು ದೊರೆಯಲಿದೆ. ಜೊತೆಗೆ ಸ್ಟಾಟಿಕ್ ಐಪಿಯು ಸಿಗಲಿದೆ.
ಡಿಜಿಟಲ್ ಸೆಲ್ಯೂಷನ್: ಇದರೊಂದಿಗೆ ರೂ. 4000 ಮೌಲ್ಯದ ಡಿಜಿಟಲ್ ಸೆಲ್ಯೂಷನ್ ಗಳು ಸಹ ಹೆಚ್ಚುವರಿಗೆ ವೆಚ್ಚವಿಲ್ಲದೆ ಲಭ್ಯವಾಗಲಿದೆ. ಇದರಲ್ಲಿ
ಪ್ರೋಡಕ್ಟಿವಿಗಾಗಿ: ಮೈಕ್ರೋಸಾಫ್ಟ್ ಆಫೀಸ್ 360 ಜೊತೆಗೆ ಆಫೀಸ್ ಆಪ್‌ಗಳು, ಔಟ್‌ಲುಕ್ ಇಮೇಲ್, ಓನ್‌ ಡೈವ್ ಮತ್ತು ಟೀಮ್ಸ್ ನ 10 ಲೈಸೆನ್ಸ್‌ಗಳು.
ಜಿಯೋ ಅಟೆಂಡೆನ್ಸ್‌: ಎಲ್ಲಿಂದಾರೂ ನೌಕರರ ಅಟೆಂಡೆನ್ಸ್‌ ತೆಗೆದುಕೊಳ್ಳಲು 20 ಲೈಸೆನ್ಸ್‌ಗಳು
ಮಾರ್ಕೆಟಿಂಗ್‌ ಗಾಗಿ : ಜಿಯೋ ಆನ್‌ಲೈನ್‌ ಪ್ರೋ ಲೈಸೆನ್ಸ್‌ ದೊರೆಯಲಿದೆ.
ಕಾನ್‌ಫರೆನ್ಸ್‌ ಗಾಗಿ: ಜಿಯೋ ಮಿಟ್ ಮತ್ತು ಟೀಮ್‌ 24 ಗಂಟೆಗಳ ಉಚಿತ ಸೇವೆ ದೊರೆಯಲಿದೆ.
ಡಿವೈಸ್‌: ರಿಲಯನ್ಸ್‌ ಡಿಜಿಟಲ್‌ನಲ್ಲಿ ಸ್ಪೇಷಲ್ ಡಿವೈಸ್‌ ಆಫರ್‌ಗಳು ಸಹ ದೊರೆಯಲಿದೆ.
ಸಂಪೂರ್ಣ ಮಾಹಿತಿಗಾಗಿ, ಭೇಟಿ ನೀಡಿ www.jio.com

English summary

Jio to Digitally Transform 50 Million Micro, Small & Medium Businesses (MSMB) in India

jio Business has introduced a comprehensive offering for micro, small and medium businesses set up on three key pillars.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X