ಜಿಯೋ ಮ್ಯೂಚುವಲ್ ಫಂಡ್ ಸ್ಕೀಂ ಶುರು! ಜಿಯೋ ಫೈನಾನ್ಷಿಯಲ್ ಸರ್ವೀಸಸ್-ಬ್ಲ್ಯಾಕ್ ರಾಕ್ ಸಮ್ಮಿಲನ.. ಗ್ರೀನ್ ಸಿಗ್ನಲ್ ಕೊಟ್ಟ ಸೆಬಿ. ಹೌದು, ಭಾರತದ ಟೆಲಿಕಾಂ ವಲಯದಲ್ಲಿ ಧೂಳೆಬ್ಬಿಸುತ್ತಿರುವ ರಿಲಯನ್ಸ್ ಜಿಯೋ ಇದೀಗ ಹಣಕಾಸು ವಲಯದಲ್ಲೂ ಸದ್ದು ಮಾಡಲು ಸಜ್ಜಾಗಿದೆ. ಮ್ಯೂಚುವಲ್ ಫಂಡ್ ಯೋಜನೆಗಳನ್ನು ಆರಂಭಿಸಲು ರಿಲಯನ್ಸ್‌ನ ಅಂಗ ಸಂಸ್ಥೆ ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಮುಂದಾಗಿದೆ. ಇದಕ್ಕೆ ಅನುಮತಿಯೂ ಸಿಕ್ಕಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿ. (ಜೆಎಫ್‌ಎಸ್‌ಎಲ್) ಮತ್ತು ಬ್ಲ್ಯಾಕ್‌ರಾಕ್‌ನ 50:50 ಜಂಟಿ ಉದ್ಯಮವಾದ ಜಿಯೋಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿ.ಗೆ ಭಾರತದಲ್ಲಿ ಮ್ಯೂಚುಯಲ್ ಫಂಡ್ ವ್ಯವಹಾರವನ್ನು ಶುರುಮಾಡಲು ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಒಪ್ಪಿಗೆಯನ್ನು ನೀಡಿದೆ
ಇನ್ನುಂದೆ ದೇಶದಲ್ಲಿ ಮ್ಯೂಚುವಲ್ ಫಂಡ್ ವ್ಯವಹಾರದ ಕಾರ್ಯಾಚರಣೆ ಆರಂಭ ಮಾಡುವುದಕ್ಕೆ ಅನುಮತಿ ಸಿಕ್ಕಿದೆ. ಇದರ ಮೂಲಕ ಹೂಡಿಕೆ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು ಆಗಬಹುದು.

ಈಗಲೇ ಭಾರತದಲ್ಲಿ ಹೆಚ್ಚುತ್ತಿರುವ ರೀಟೇಲ್ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಹೊಸ ಹೂಡಿಕೆಗಳ ಯೋಜನೆಗಳನ್ನು ಜಿಯೋಬ್ಲ್ಯಾಕ್ ರಾಕ್ ಅಸೆಟ್ ಮ್ಯಾನೇಜ್ ಮೆಂಟ್ ತರಲಿದೆ.ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸಿದ್ಧಾರ್ಥ್ ಸ್ವಾಮಿನಾಥನ್ ಅವವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರ ಮಾರ್ಗದರ್ಶನದ ಮೂಲಕ, ಭಾರತೀಯ ಚಿಲ್ಲರೆ ಮ್ಯೂಚುಯಲ್ ಫಂಡ್ ಹೂಡಿಕೆದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ಹೊಸ ಹೂಡಿಕೆ ಯೋಜನೆಗಳನ್ನು ತರಲು ಕಂಪನಿ ಸಿದ್ದವಾಗಿದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ಗೆ ಇರುವ ಡಿಜಿಟಲ್ ವ್ಯಾಪರಕತೆ ಮತ್ತು ಸ್ಥಳೀಯ ಮಾರುಕಟ್ಟೆ ಬಗ್ಗೆ ಇರುವಂಥ ಆಳವಾದ ತಿಳಿವಳಿಕೆ ಹಾಗೂ ಇದರ ಜೊತೆಗೆ ಬ್ಲ್ಯಾಕ್ ರಾಕ್ ಗೆ ಇರುವಂಥ ಜಾಗತಿಕ ಹೂಡಿಕೆ ಪರಿಣತಿ ಮತ್ತು ಪ್ರಮುಖ ರಿಸ್ಕ್ ಮ್ಯಾನೇಜ್ ಮೆಂಟ್ ಟೆಕ್ನಾಲಜಿ ಜೊತೆಯಾಗಿ ಈ ಜಂಟಿ ಉದ್ಯಮವು ವಿಶಿಷ್ಟ ಅಸೆಟ್ ಮ್ಯಾನೇಜ್ ಮೆಂಟ್ ಆಗಲಿದೆ.
ಜಿಯೋ ಬ್ಲ್ಯಾಕ್ ರಾಕ್ ಅಸೆಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ವೈಶಿಷ್ಟ್ಯ ಏನೆಂದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಾರದರ್ಶಕ ಬೆಲೆ ಹಾಗೂ ನಾವೀನ್ಯತೆಯ ಉತ್ಪನ್ನಗಳನ್ನು ಹೂಡಿಕೆದಾರರಿಗೆ ಒದಗಿಲಿದೆ.
ಇದರೊಂದಿಗೆ ಬ್ಲ್ಯಾಕ್ ರಾಕ್ ನ ರಿಸ್ಕ್ ಮ್ಯಾನೇಜ್ ಮೆಂಟ್ ಪರಿಣತಿಯ ಅಪ್ಲಿಕೇಷನ್ ಬೆಂಬಲ ಸಹ ಇರುತ್ತದೆ. ಇದರಲ್ಲಿ ಬ್ಲ್ಯಾಕ್ ರಾಕ್ ಗೆ ಸೇರಿದ ಜಾಗತಿಕವಾಗಿ ಹೆಸರಾದಂಥ ಸ್ವಂತ ಟೆಕ್ನಾಲಜಿ ಪ್ಲಾಟ್ ಫಾರ್ಮ್ ಅಲಾದೀನ್ ಕೂಡ ಒಳಗೊಂಡಿದೆ. ಈ ಪ್ಲಾಟ್ ಫಾರ್ಮ್ ಒಂದು ಸಾಮಾನ್ಯ ಡೇಟಾ ಲಾಂಗ್ವೇಜ್ ಮೂಲಕವಾಗಿ ಹೂಡಿಕೆ ನಿರ್ವಹಣೆ ಪ್ರಕ್ರಿಯೆ ಮಾಡುವುದನ್ನು ಇದು ಏಕೀಕರಣಗೊಳಿಸುತ್ತದೆ.
ಹೂಡಿಕೆಯಲ್ಲಿ ದೊಡ್ಡ ಕಾಂತ್ರಿ
ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿ. ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಇದರ ಜೊತೆಗೆ ಸ್ಥಳೀಯ ಜನರ ಬಗ್ಗೆ ಹೆಚ್ಚಿನ ತಿಳಿವಳಿಯನ್ನು ಸಹ ಜಿಯೋ ಫೈನಾನ್ಶಿಯಲ್ ಇದೀಗ ತಿಳಿದುಕೊಂಡಿದೆ. ಇನ್ನೂ ಬ್ಲ್ಯಾಕ್‌ರಾಕ್ ಜಾಗತಿಕ ಹೂಡಿಕೆ ಮತ್ತು ಅಪಾಯ ನಿರ್ವಹಣಾ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದೆ. ಈ ಎರಡೂ ಕಂಪನಿಗಳು ಒಟ್ಟಾಗಿ ಸೇರಿ ಹೂಡಿಕೆ ಯೋಜನೆಗಳನ್ನು ಆರಂಭಿಸಿದ್ದರೆ ಹೂಡಿಕೆಯಲ್ಲಿ ದೊಡ್ಡ ಕಾಂತ್ರಿಯಾಗಬಹುದು.
ಈ ಕುರಿತು ಜಿಯೋ ಫೈನಾನ್ಷಿಯಲ್ ಲಿಮಿಟೆಡ್ ಕಾರ್ಯ ನಿರ್ವಾಹಕೇತರ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ಭಾರತದ ವೇಗವಾದ ಬೆಳವಣಿಗೆಗೆ ದಿಟ್ಟ ಆಕಾಂಕ್ಷೆಗಳನ್ನು ಹೊಂದಿವುದಕ್ಕೆ ಹೊಸ ಪೀಳಿಕೆಯ ತಲೆಮಾರಿನವರೇ ಕಾರಣ. ಆದ್ದರಿಂದ ಬ್ಲ್ಯಾಕ್‌ರಾಕ್‌ನೊಂದಿಗಿನ ನಮ್ಮ ಪಾಲುದಾರಿಕೆಯು ಜಾಗತಿಕ ಹೂಡಿಕೆ ಪರಿಣತಿ ಮತ್ತು ಜಿಯೋದ ಡಿಜಿಟಲ್-ಮೊದಲ ಹೊಸ ಯೋಜನೆಗಳು ಗಟ್ಟಿಯಾದ ಸಂಯೋಜನೆ ಆಗಿದೆ.ಇವೆರಡು ಜೊತೆಯಾಗಿ ಪ್ರತಿ ಭಾರತೀಯರಿಗೂ ಹೂಡಿಕೆಗೆ ಅನುಕೂಲವಾಗುತ್ತದೆ. ಹೂಡಿಕೆಯ ವಿಧಾನಗಳು ಕೂಡ ಸರಳವಾಗಿ ಇರುತ್ತದೆ. ಹಾಗಾಗೇ ನಾವು ಇದನ್ನು ಎಲ್ಲರಿಗೂ ಇದು ತಲುಪುವಂತೆ ಮಾಡಲು ಸದಾ ಸಿದ್ದವಾಗಿರುತ್ತೇವೆ. ಭಾರತದಲ್ಲಿ ಆರ್ಥಿಕ ಸಬಲೀಕರಣವನ್ನು ಹೆಚ್ಚು ಮಾಡುವಲ್ಲಿ ಜಿಯೋಬ್ಲಾಕ್‌ರಾಕ್ ಆಸ್ತಿ ನಿರ್ವಹಣೆ ಪರಿವರ್ತಕ ಪಾತ್ರವನ್ನು ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಲ್ಯಾಕ್ ರಾಕ್ ಅಂತಾರಾಷ್ಟ್ರೀಯ ಮುಖ್ಯಸ್ಥ ರಾಶೆಲ್ ಲಾರ್ಡ್ ಭಾರತದಲ್ಲಿ ಇಂದು ಅಸೆಟ್ ಮ್ಯಾನೇಜ್ ಮೆಂಟ್ ನಲ್ಲಿನ ಅವಕಾಶಗಳು ತುಂಬ ರೋಮಾಂಚಕಾರಿಯಾಗಿದೆ. ಜಿಯೋಬ್ಲಾಕ್‌ರಾಕ್‌ನ ಡಿಜಿಟಲ್ ಮೊದಲು ಎಂಬ ಗ್ರಾಹಕ ಪ್ರತಿಪಾದನೆ, ಕಡಿಮೆ ವೆಚ್ಚದಲ್ಲಿ ಸಾಂಸ್ಥಿಕ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಹೂಡಿಕೆದಾರರಿಗೆ ತಲುಪಿಸುವುದು, ಭಾರತದಲ್ಲಿ ಹೆಚ್ಚಿನ ಜನರು ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶದ ಹಲವು ಪ್ರಯೋಜನಗಳನ್ನು ಪಡೆಯಲು ಈ ಯೋಜನೆಗಳು ಅನುವು ಮಾಡಿಕೊಂಡುತ್ತೇವೆ ಎಂದು ಹೇಳಿದ್ದಾರೆ.
ಸಿಇಒ ಸಿದ್ ಸ್ವಾಮಿನಾಥನ್ ಅವರು ಮಾತನಾಡಿ. ಜಿಯೋಬ್ಲಾಕ್‌ರಾಕ್ ಅಸೆಟ್ ಮ್ಯಾನೇಜ್ ಮೆಂಟ್ ಭಾರತದಾದ್ಯಂತ ಹೂಡಿಕೆದಾರರಿಗೆ ಸಾಂಸ್ಥಿಕ ಗುಣಮಟ್ಟದ ಹೂಡಿಕೆ ಉತ್ಪನ್ನಗಳನ್ನು ಡಿಜಿಟಲ್ ರೂಪದಲ್ಲಿ ತಲುಪಿಸುವ ಗುರಿಯನ್ನು ಇದು ಹೊಂದಿದೆಹೂಡಿಕೆ. ಜಿಯೋಬ್ಲಾಕ್‌ರಾಕ್ ಆಸ್ತಿ ನಿರ್ವಹಣೆಯನ್ನು ಮುನ್ನಡೆಸಲು ಮತ್ತು ಹೂಡಿಕೆದಾರರು ಹೂಡಿಕೆಯ ಸಾಮರ್ಥ್ಯವನ್ನು ನೇರವಾಗಿ ಬಳಸಿಕೊಳ್ಳಲು ಸಬಲಗೊಳಿಸುವ ಮೂಲಕ ಭಾರತದಲ್ಲಿ ಅಸೆಟ್ ಮ್ಯಾನೇಜ್ ಮೆಂಟ್ ಪರಿವರ್ತನೆಗೆ ಸಹಾಯ ಮಾಡುವುದು ನಮಗೆ ಗೌರವವನ್ನು ನೀಡುತ್ತದೆ ಎಂದು ಹೇಳಿದ್ಧಾರೆ.
ಜಿಯೋ ಫೈನಾನ್ಶಿಯಲ್ ಷೇರುಗಳು ಏರಿಕೆ
ರಿಲಯನ್ಸ್ ಜಿಯೋ ಮ್ಯೂಚುಯಲ್ ಫಂಡ್ ಯೋಜನೆಗಳನ್ನುಆರಂಭಿಸುತ್ತಿದೆ ಎಂಬ ಘೋಷಣೆ ಹೊರಬಿದ್ದಂತೆ ಷೇರುಪೇಟೆಯಲ್ಲಿ ಜಿಯೋ ಫೈನಾನ್ಶಿಯಲ್ ಷೇರುಗಳು ಏರಿಕೆ ಕಂಡಿದೆ. ನಿನ್ನೆ( ಮೇ. 28 ಮಂಗಳವಾರದಂದು) ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿ. ಷೇರುಗಳು ಎನ್‌ಎಸ್‌ಇನಲ್ಲಿ 10.90 ರೂ. ಅಥವಾ ಶೇ. 3.87ರಷ್ಟು ಏರಿಕೆಯನ್ನು ಕಂಡಿತ್ತು.


Click it and Unblock the Notifications