ಬೆಂಗಳೂರು, ಏಪ್ರಿಲ್ 4: ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲವು ಕಂಪನಿಗಳು ನಿರಂತರವಾಗಿ ತಮ್ಮ ಬೆಸ್ಟ್ ಫರ್ಮಾರ್ಸ್‌ಗಳನ್ನು ಗುರುತಿಸಿ ಉಡುಗೊರೆ ನೀಡುವ ಮೂಲಕ ಉತ್ತಮ ಕೆಲಸ ತೆಗೆಯಲು ಮುಂದಾಗುತ್ತವೆ. ಈ ಬಾರಿ ಜೆಕೆ ಸಿಮೆಂಟ್ ಕಂಪನಿ ತಮ್ಮ ವಿತರಕರಿಗೆ ನೀಡಿರುವ ಕೊಡುಗೆ ಎಲ್ಲರನ್ನು ಕಣ್ಣರಳಿಸುವಂತೆ ಮಾಡಿದೆ.
ಬೋನಸ್‌ಗಳು ಮತ್ತು ಪ್ರವಾಸಗಳು ಸಾಮಾನ್ಯ ಉಡುಗೊರೆಗಳಾಗಿದ್ದರೂ ಜೆಕೆ ಸಿಮೆಂಟ್ ಕಂಪನಿ ತಮ್ಮ ಅಸಾಧಾರಣ ವಿತರಕರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದೆ. ಇತ್ತೀಚೆಗೆ ಜೆಕೆ ಸಿಮೆಂಟ್ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ವಿತರಕರಿಗೆ ಎರಡು ವಿಭಿನ್ನ ಕೊಡುಗೆಗಳನ್ನು ನೀಡಿದೆ.

ಜೆಕೆ ಸಿಮೆಂಟ್ ತನ್ನ ಟಾಪ್ 65 ಅತ್ಯುತ್ತಮ ಕಾರ್ಯನಿರ್ವಹಣೆಯ ವಿತರಕರನ್ನು ಮಹೀಂದ್ರಾ ಎಕ್ಸ್‌ಯುವಿ ಮತ್ತು ಸ್ಕಾರ್ಪಿಯೊವನ್ನು ನೀಡುವ ಮೂಲಕ ರಾಷ್ಟ್ರವ್ಯಾಪಿಯಾಗಿ ಪುರಸ್ಕರಿಸಿದೆ. ಕಂಪನಿಯು ತಮ್ಮ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಕಂಪನಿಯ ಬೆಳವಣಿಗೆಗೆ ಕೊಡುಗೆ ನೀಡಿದ ವಿತರಕರಿಗೆ ಕೃತಜ್ಞತೆಯ ಸಂಕೇತವಾಗಿ ಕಾರುಗಳನ್ನು ನೀಡಿದೆ.
ಜೆಕೆ ಸಿಮೆಂಟ್‌ನ ಈ ಕಾರ್ಯವು ಅದರ ಡೀಲರ್ ನೆಟ್‌ವರ್ಕ್‌ನೊಂದಿಗೆ ಬಲವಾದ ಮತ್ತು ಲಾಭದಾಯಕ ಪಾಲುದಾರಿಕೆಯನ್ನು ನಿರ್ಮಿಸುವ ಅದರ ಮೂಲ ತತ್ವವನ್ನು ಸಾರಿದೆ. 2018 ರಲ್ಲಿ ಗುಜರಾತ್‌ನ ಸೂರತ್ ಮೂಲದ ಕೋಟ್ಯಾಧಿಪತಿ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ತಮ್ಮ ಕಂಪನಿಯ ಸಿಬ್ಬಂದಿಗೆ 600 ಕಾರುಗಳನ್ನು ವಿತರಿಸಿದ್ದರು.
ತಾವು ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ದೈಹಿಕ ವಿಕಲಚೇತನ ಮಹಿಳೆ ಸೇರಿದಂತೆ ನಾಲ್ವರು ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಚ್ಚಹೊಸ ಕಾರುಗಳ ಕೀಗಳನ್ನು ಹಸ್ತಾಂತರಿಸದ್ದರು. ಸಾವ್ಜಿ ಧೋಲಾಕಿಯಾ ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದು, "ನಮ್ಮ ಉದ್ಯೋಗಿಗಳಿಗೆ ನಮ್ಮ ಲಾಯಲ್ಟಿ ಬೋನಸ್ ಕಾರ್ಯಕ್ರಮದ ಭಾಗವಾಗಿ ಸುಮಾರು 1,700 ವಜ್ರ ಕಲಾವಿದರು ಮತ್ತು ಎಂಜಿನಿಯರ್‌ಗಳಿಗೆ ಕಾರುಗಳನ್ನು ನೀಡಲಾಗಿದೆ" ಎಂದು ಹೇಳಿದ್ದರು.
2016 ರಲ್ಲಿ ಧೋಲಾಕಿಯಾ ಅವರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ 400 ಫ್ಲಾಟ್‌ಗಳು ಮತ್ತು 1,260 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. 2015 ರಲ್ಲಿ 491 ಕಾರುಗಳು ಮತ್ತು 200 ಫ್ಲ್ಯಾಟ್‌ಗಳನ್ನು ಉಡುಗೊರೆಯಾಗಿ ಹಸ್ತಾಂತರಿಸಲಾಗಿತ್ತು. ಆದರೆ ಅವರು ಕಳೆದ ವರ್ಷ ಆ ರೂಢಿಯನ್ನು ಬಿಟ್ಟುಬಿಟ್ಟರು.
ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರದೇಶದ ಅಮ್ರೇಲಿ ಮೂಲದ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ತನ್ನ ಚಿಕ್ಕಪ್ಪನಿಂದ ಸಣ್ಣ ಸಾಲದಿಂದ ತನ್ನ ವ್ಯವಹಾರವನ್ನು ಪ್ರಾರಂಭಿಸಿದ್ದವರು. ಸೂರತ್‌ನಲ್ಲಿರುವ ಅಲಯನ್ಸ್ ಗ್ರೂಪ್ ತನ್ನ ಉದ್ಯೋಗಿಗಳಿಗೆ 2021 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿತ್ತು.


Click it and Unblock the Notifications