ನೀವು ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಲು ಇಚ್ಛಿಸಿದರೆ ನಿಮಗಾಗಿ ಇಲ್ಲಿದೆ ಉದ್ಯೋಗ ಅವಕಾಶ. ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್‌ಗಳ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದ್ದು, ಇದಕ್ಕೆ ನೀವು ಸಹ ಅರ್ಜಿ ಸಲ್ಲಿಸಬಹದು. ಆಸಕ್ತರು ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ canarabank.com ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು ಇಲ್ಲಿದೆ.
ಅರ್ಜಿಗಾಗಿ ಕೊನೆಯ ದಿನಾಂಕ ಯಾವುದು?
ಈ ಹುದ್ದೆಗೆ ನೀವು ಅರ್ಜಿ ಸಲ್ಲಸಲು ಬಯಸಿದರೆ ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆನ್‌ಲೈನ್ ಅರ್ಜಿಯನ್ನ 6 ಜನವರಿ 2025 ರಿಂದ ಪ್ರಾರಂಭ ಮಾಡಲಾಗಿದೆ. ಇನ್ನು ಈ ಅರ್ಜಿಗೆ ಕೊನೆಯ ದಿನಾಂಕ 24 ಜನವರಿ 2025 ಆಗಿದ್ದು, ಈ ದಿನಾಂಕದೊಳಗೆ ನೀವು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ ಬೇಕಾಗುವ ಅರ್ಹತೆಗಳೇನು?
ಈ ನೇಮಕಾತಿಯು ಡೇಟಾ ಅನಲಿಸ್ಟ್, ಡೇಟಾ ಮೈನಿಂಗ್ ಎಕ್ಸ್‌ಪರ್ಟ್, ಡಾಟಾ ಸೈಂಟಿಸ್ಟ್, ಅಪ್ಲಿಕೇಶನ್ ಡೆವೆಲಪರ್, ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್, ಆಫೀಸರ್ ಐಟಿ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಟರ್‌ನಂತಹ ಪೋಸ್ಟ್‌ಗಳನ್ನು ಒಳಗೊಂಡಿದೆ. ಅಭ್ಯರ್ಥಿಗಳು BE/B.Tech ಅಥವಾ BE/B.Tech ಪದವೀದರರಾಗಿರಬೇಕು. ಹಾಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಐಟಿಯಲ್ಲಿ ಪದವಿಯನ್ನ ಹೊಂದಿರಬೇಕು. ಈ ಹುದ್ದೆಗೆ ಕೆಲಸದ ಅನುಭವವೂ ಅಗತ್ಯವಿರುತ್ತದೆ. ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿ ಅರ್ಹತೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಾಗಿದೆ.
ಹುದ್ದೆಗೆ ವಯಸ್ಸಿನ ಮಿತಿ ಇರುತ್ತದೆ
ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿಯನ್ನ ಡಿಸೆಂಬರ್ 1, 2024 ರಂತೆ 35 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಮಿತಿ ಬದಲಾಗುತ್ತದೆ. ಹಾಗೆ ಈ ಹುದ್ದೆಯ ಆಯ್ಕೆ ಪ್ರಕ್ರಿಯು ಲಿಖಿತ ಪರೀಕ್ಷೆ, ಸಂದರ್ಶನವನ್ನ ಒಳಗೊಂಡಿರುತ್ತದೆ. ವೃತ್ತಯ ಕುರಿತು ಹಾಗೆ ಸ್ಥಳೀಯ ತಾರ್ಕಿಕತೆ (local reasoning) ಕುರಿತು 100 ಪ್ರಶ್ನೆಗಳನ್ನ ಒಳಗೊಂಡಿರುತ್ತದೆ. ಹಾಗೆ 100 ಅಂಕಗಳಿಗೆ ಎರಡು ಗಂಟೆಗಳ ಅವಧಿ ಇರುತ್ತದೆ. ಪ್ರತೀ ತಪ್ಪು ಉತ್ತರಗಳಿಗೆ 0.25 ಅಂಕಗಳ ನೆಗೆಟಿವ್ ಮೌಲ್ಯಮಾಪನ ಇರುತ್ತದೆ.
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಈ ಹುದ್ದೆ ನೇಮಾತಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿ ಮಾಡದೆ ಈ ಹದ್ದೆಗೆ ಅರ್ಜಿ ಸಲ್ಲಸಬಹುದು.
ಈ ಹುದ್ದೆಯ ಸಂಬಳದ ಬಗ್ಗೆ ತಿಳಿಯಿರಿ
ಈ ಹದ್ದೆಯ ವಾರ್ಷಿಕ ವೇತನ 18 ಲಕ್ಷದಿಂದ 27 ಲಕ್ಷದವರೆಗೆ ಇರುತ್ತದೆ. ಅಂದರೆ ಪ್ರತೀ ತಿಂಗಳ ಸಂಬಳ 1,50,000 ರಿಂದ 2,25,000 ರೂ. ಇರುತ್ತದೆ. ಇದು ಅಭ್ಯರ್ಥಿಯ ಅರ್ಹತೆ, ಅನುಭವ ಮತ್ತು ಪ್ರಸ್ತುತ ಪ್ಯಾಕೇಜ್ ಅನ್ನು ಅನುಗುಣವಾಗಿರುತ್ತದೆ.
ಇನ್ನು ಈ ನೇಮಕಾತಿ ಬಗ್ಗೆ ತಿಳಿಯಲು ಹಾಗೆ ಈ ಪೋಸ್ಟ್‌ಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ, ನೀವು ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಕೆನೆರಾ ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಸಲು ನೀವು ಈ ಕೆಳಗನ ಹಂತಗಳನ್ನ ಅನುಸರಿಸಬೇಕು.
ಹಂತ 1: ಕೆನೆರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ canarabank.com ಗೆ ಭೇಟಿ ನೀಡಿ, "ವೃತ್ತಿ" ವಿಭಾಗವನ್ನ ಆಯ್ಕೆ ಮಾಡಬೇಕು.
ಹಂತ 2: ಅಧಿಸೂಚನೆಯನ್ನು ಪ್ರವೇಶಿಸಿ ಅರ್ಹತೆ ಮತ್ತು ಅವಶ್ಯಕತೆಗಳನ್ನು ಅರತಕೊಂಡು ಸ್ಪೆಷಲಿಸ್ಟ್ ಆಫೀಸರ್ಸ್ ನೇಮಕಾತಿ 2025 ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಬೇಕು.
ಹಂತ 3: "ಹೊಸ ನೋಂದಣಿ" ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಈ ಮೂಲಕ ನಿಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳ್ಳುತ್ತದೆ.
ಹಂತ 4: ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಹಾಗೆ ನಿಮ್ಮ ಸಿಗ್ನೇಚರ್‌ವೊಂದಿಗೆ ಲಾಗ್ ಇನ್ ಮಾಡಿ ಮತ್ತು ನಿಖರವಾದ ವೈಯಕ್ತಿಕ, ಶೈಕ್ಷಣಿಕ ಮತ್ತು ವೃತ್ತಿಪರ ವಿವರಗಳೊಂದಿಗೆ ಅರ್ಜಿ ನಮೂನೆಯನ್ನ ಭರ್ತಿ ಮಾಡಿ.
ಹಂತ 5: ಡಾಕ್ಯುಮೆಂಟ್‌ಗಳನ್ನ ಅಪ್‌ಲೋಡ್ ಮಾಡಿ, ನಿಮ್ಮ ಛಾಯಾಚಿತ್ರ, ಸಹಿ ಮತ್ತು ಅಗತ್ಯವಿರುವ ದಾಖಲೆಗಳನ್ನ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪ್ರತ್ಯೇಕ ರೂಪದಲ್ಲಿ ಅಪ್‌ಲೋಡ್ ಮಾಡಿ.
ಹಂತ 6: ಅರ್ಜಿ ಶುಲ್ಕವಿದ್ದರೆ, ಅರ್ಜಿ ಶುಲ್ಕವನ್ನು ಪಾವತಿಸಲು ಆನ್‌ಲೈನ್ ಪಾವತಿ ಗೇಟ್‌ವೇ ಬಳಸಿ.
ಹಂತ 7: ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ನಿಮ್ಮ ಉಲ್ಲೇಖಕ್ಕಾಗಿ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ ನಿಮ್ಮೊಂದಿಗೆ ಇಟ್ಟುಕೊಳ್ಳಿ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications