Job Alert: NCERT ಉದ್ಯೋಗ ನೇಮಕಾತಿ! ಪರೀಕ್ಷೆ ಇಲ್ಲದೇ ಉದ್ಯೋಗ ಪಡೆಯಬಹುದು!

ಉದ್ಯೋಗಗಳಿಗಾಗಿ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣವಕಾಶ. ನೀವು ಈ ಹುದ್ದೆಳಿಗಾಗಿ ಪರೀಕ್ಷೆ ಬರೆಯುವ ಅಗತ್ಯ ಇಲ್ಲ. ನೀವು ಪರೀಕ್ಷೆ ಬರೆಯದೇನೆ ಉತ್ತಮ ವೇತನದ ಉದ್ಯೋಗವನ್ನ ಪಡೆಯಬಹುದು. ಹೌದು, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಜಂಟಿ ನಿರ್ದೇಶಕರ ಹುದ್ದೆಗೆ ನೇಮಕಾತಿಯನ್ನ ಆರಂಭಿಸಿದೆ. ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಈ ಹುದ್ದೆಗಳಿಗೆ ಪರೀಕ್ಷೆ ಇರುವದಿಲ್ಲ, ಆಯ್ಕೆಯಾದ ಅಭ್ಯರ್ಥಿಗಳು ಆಕರ್ಷಕ ವೇತನವನ್ನ ಪಡೆಯಬಹುದು.

ಈಗಾಗೇ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ನೀವು ಈಗಲೇ ಅರ್ಜಿ ಸಲ್ಲಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನ ನೆಡೆಸಲು ಬಯಸುವವರು ಇಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಅರ್ಜಿ ಸಲ್ಲಿಕೆ ಮಾಡಿ.

NCERT ಉದ್ಯೋಗ ನೇಮಕಾತಿ: ಪರೀಕ್ಷೆ ಇಲ್ಲದೇ ಉದ್ಯೋಗ ಪಡೆಯಬಹುದು!

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಉದ್ಯೋಗಕ್ಕಾಗಿ ಎದುರು ನೋಡುತ್ತಿರುವವರು ಶೀಘರದಲ್ಲೇ ಅರ್ಜಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಬೇಕು. ಅರ್ಜಿಯ ಕೊನೆಯ ದಿನಾಂಕ ಇದರ ಅಧಿಸೂಚನೆಯ ಬಿಡುಗಡೆಯ ದಿನಾಂಕದಿಂದ 30 ದಿನಗಳ ಒಳಗೆ ಅಭ್ಯರ್ಥಿಗಳು NCERTಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೀವು ಈ ಅರ್ಜಿ ಕುರಿತ ಮಾಹಿತಿಯನ್ನ ಪಡೆಯಬಹುದು. NCERTಯ ವೆಬ್‌ಸೈಟ್‌ ncert.nic.inಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸಲು ಅರ್ಹತೆ ಮಾನದಂಡ

ಸಂಬಂಧಿತ ಕ್ಷೇತ್ರದಲ್ಲಿ ಪದವಿಯನ್ನ ಪಡೆದಿರಬೇಕು. ಹಾಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಂಸ್ಥೆಗಳು ಅಥವಾ ಪಿಎಸ್‌ಯುಗಳಲ್ಲಿ ಕೆಲಸ ಮಾಡಿರುವ ಅನುಭವವನ್ನ ಹೊಂದಿರಬೇಕು. ಅಥವಾ ಮನ್ಯತೆ ಪಡೆದ ಸಂಸ್ಥೇಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಅನುಭವವನ್ನ ಹೊಂದಿರಬೇಕು. ಇನ್ನು ಇತ್ತ ಖಾಸಗಿ ವಲಯಕ್ಕೂ ಕೂಡ ಅದೇ ಅನ್ವಯವಗುತ್ತದೆ. ಜೊತೆಗೆ ಕನಿಷ್ಠ 15 ವರ್ಷಗಳ ಅನುಭವವನ್ನ ಹೊಂದಿರಬೇಕಾಗತ್ತದೆ.

ವಯಸ್ಸಿನ ಮಿತಿ: ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ 58 ವರ್ಷದ ಒಗಿನ ಅಭ್ಯರ್ಥಿಗಳು ಯಾರು ಬೇಕದ್ರೂ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.

ವೇತನ: ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 1,44,200 ರೂಗಳಿಂದ 2,18,200 ರೂಗಳ ವರೆಗೆ ವೇತನ ಇರುತ್ತದೆ. ಇನ್ನು ಈ ಅಭ್ಯರ್ಥಿಗಳ ವೇತನಗಳು ಸರ್ಕಾರದ ನಿಯಮಗಳ ಪ್ರಕಾರ ಬದಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

A4 ಸೈಜ್‌ ಕಾಗದದ ಮೇಲೆ ಟೈಪ್‌ ಅಥವಾ ಕೈಯಲ್ಲಿ ಬರೆದು ಅರ್ಜಿಯನ್ನ ತಯಾರಿಸಬೇಕಾಗುತ್ತದೆ. ಇನ್ನು ಈ ಅರ್ಜಿಯಲ್ಲಿ ನಿಮ್ಮ ಮಾಹಿತಿಗಳನ್ನ ಸರಿಯಾಗಿ ತುಂಬಿರಬೆಕಾಗುತ್ತದೆ. ನಂತರ ಇದರ ಜೊತೆಗೆ ಅಗತ್ಯ ದಾಖಲೆಗಳನ್ನ ಲಗತ್ತಿಸಿ, ಅನು ಜೈನ್, ಜಂಟಿ ನಿರ್ದೇಶಕರು, ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಸ್ತ್ರಿ ಭವನ, ನವದೆಹಲಿ - 110001 ಿಳಾಸಕ್ಕೆ ಪೋಸ್ಟ್‌ ಮಾಡಬೇಕಾಗುತ್ತದೆ.

ನಿಮ್ಮ ಮಾಹಿತಿಯನ್ನ ಸರಿಯದ ರೀತಿಯಲ್ಲಿ ತುಂಬ ಈ ವಿಳಸಕ್ಕೆ ಪೋಸ್ಟ್‌ ಮಾಡಬೇಕು. ನಿಮ್ಮ ಮಾಹಿತಿಗಳು ತಪ್ಪಾದಲ್ಲಿ ನಿಮ್ಮ ಅರ್ಜಿಯನ್ನ ತಿರಸ್ಕರಿಸಲಾಗುವುದು. ಹಾಗೆ ಈ ಅರ್ಜಿಯನ್ನು ಸಲ್ಲಿಸುವ ಮೊದಲು NCERTಯ ಅಧಿಕೃತ ಸೂಚನೆಯನ್ನ ಸರಿಯಾಗಿ
ಓದಬೇಕಾಗುತ್ತದೆ.

NCERTಯ ಉದ್ಯೋಗಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ

NCERT ಉದ್ಯೋಗಗಳು ಆಡಳಿತಾತ್ಮಕ ಪಾತ್ರಗಳು, ಬೋಧನಾ ಸ್ಥಾನಗಳು ಮತ್ತು ಸಂಶೋಧನೆ-ಆಧಾರಿತ ಉದ್ಯೋಗಗಳು ಸೇರಿದಂತೆ ವಿವಿಧ ಹಂತಗಳಲ್ಲಿ ಲಭ್ಯವಿದೆ. ಸಾಮಾನ್ಯ ಸ್ಥಾನಗಳಲ್ಲಿ ವಿಷಯ ತಜ್ಞರು, ವಿಷಯ ಅಭಿವರ್ಧಕರು, ಪಠ್ಯಕ್ರಮ ವಿನ್ಯಾಸಕರು, ಶೈಕ್ಷಣಿಕ ಸಂಶೋಧಕರು ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದ್ದಾರೆ. ಸಂಸ್ಥೆಯು ಶಿಕ್ಷಣ, ವಿಜ್ಞಾನ, ಗಣಿತ, ಸಾಮಾಜಿಕ ಅಧ್ಯಯನಗಳು, ಸಾಹಿತ್ಯ ಮತ್ತು ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಳನ್ನು ಹುಡುಕುತ್ತದೆ. ವಿಷಯ-ನಿರ್ದಿಷ್ಟ ಪಾತ್ರಗಳ ಜೊತೆಗೆ, NCERT ತನ್ನ ಆಡಳಿತಾತ್ಮಕ, ವ್ಯವಸ್ಥಾಪಕ ಮತ್ತು ಬೆಂಬಲ ಸೇವೆಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತದೆ, ಸಂಸ್ಥೆಯು ತನ್ನ ಶೈಕ್ಷಣಿಕ ಉದ್ದೇಶವನ್ನು ಪೂರೈಸಲು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸುತ್ತದೆ.

ಎನ್‌ಸಿಇಆರ್‌ಟಿಯಲ್ಲಿ ಕೆಲಸ ಮಾಡುವುದರಿಂದ ವ್ಯಕ್ತಿಗಳು ಭಾರತದ ಶೈಕ್ಷಣಿಕ ಸುಧಾರಣೆಯ ಭಾಗವಾಗಲು ಅವಕಾಶವನ್ನು ಒದಗಿಸುತ್ತದೆ ಆದರೆ ಉದ್ಯೋಗ ಸ್ಥಿರತೆ, ಸರ್ಕಾರಿ ಸಂಬಳ ಮತ್ತು ರಾಷ್ಟ್ರದ ಶಿಕ್ಷಣ ವ್ಯವಸ್ಥೆಯ ಭವಿಷ್ಯದ ಮೇಲೆ ಅರ್ಥಪೂರ್ಣ ಪ್ರಭಾವ ಬೀರುವ ಅವಕಾಶದಂತಹ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. NCERT ಯಲ್ಲಿನ ಹುದ್ದೆಗಳನ್ನು ಸಾಮಾನ್ಯವಾಗಿ ಅಧಿಕೃತ ಅಧಿಸೂಚನೆಗಳ ಮೂಲಕ ಜಾಹೀರಾತು ಮಾಡಲಾಗುತ್ತದೆ ಮತ್ತು ನೇಮಕಾತಿ ಪ್ರಕ್ರಿಯೆಗಳು ಲಿಖಿತ ಪರೀಕ್ಷೆಗಳು, ಸಂದರ್ಶನಗಳು ಮತ್ತು ಅರ್ಹತೆಗಳ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತವೆ. ಶಿಕ್ಷಣ ಮತ್ತು ನೀತಿ-ನಿರ್ಮಾಣದಲ್ಲಿ ಆಸಕ್ತಿ ಹೊಂದಿರುವವರಿಗೆ, ಎನ್‌ಸಿಇಆರ್‌ಟಿಯಲ್ಲಿ ವೃತ್ತಿಜೀವನವು ಸಾರ್ವಜನಿಕ ವಲಯದಲ್ಲಿ ಲಾಭದಾಯಕ ಮತ್ತು ಪ್ರತಿಷ್ಠಿತ ಆಯ್ಕೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+