ಬೆಂಗಳೂರು ಮಹಿಳೆಯೊಬ್ಬರು ತಾವು ಸಂದರ್ಶನಕ್ಕೆ ಹೋದಾಗ ತಮಗಾದ ಅನುಭವದ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನಕ್ಕೆ ಹೋದ ವೇಳೆ ಸಿಇಒ ವರ್ತನೆಯನ್ನ ಕಂಡು ಕೆಲಸದ ಆಫರ್‌ಅನ್ನ ನಿರಾಕರಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಕಂಟೆಂಟ್ ರೈಟರ್ ವಿಭಾ ಗುಪ್ತಾ ಅವರು ತಮಗಾದ ಅನುಭವದ ಕುರಿತು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಅಲ್ಲದೆ ವಿಭಾ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ನೆಟ್ಟಿಗರು ಪ್ರತಿಕ್ರಿಯೆಯನ್ನ ನೀಡಿದ್ದಾರೆ.
ವಿಭಾ ಗುಪ್ತಾ ಅವರು ಮೊದಲು ಮುಖಾಮುಖಿ ಸಂದರ್ಶನಕ್ಕೆ ಹೋದಾಗ ಅವರಿಗೆ 15 ನಿಮಿಷಗಳು ಕಾಯುವಂತೆ ಹೇಳಿದ್ದರು. ಇನ್ನು ಸಿಇಒ ಕೆಲಸದಲ್ಲಿ ನಿರತರಾಗಿರಬಹುದು ಎಂದು ವಿಭಾ ಭಾವಿಸಿದ್ದರಂತೆ. ಆದ್ರೆ ಸಿಇಒ ಪ್ರವೃತ್ತಿ, ಅವರು ತಮ್ಮ ಉದ್ಯೋಗಿಗಳಿಂದಿಗೆ ನಡೆದುಕೊಳ್ಳುವ ರೀತಿ ಎಲ್ಲವನ್ನ ಗಮನಿಸಿದಾಗ ಅವರಿಗೆ ಈ ಕೆಲಸವನ್ನ ನಿರಾಕರಿಸುವಂತೆ ಮಾಡಿತ್ತಂತೆ.

ಮೊದಲು ಅವರು ಸಂದರ್ಶನಕ್ಕೆ ಹೋದಾಗ ಅವರಿಗೆ 15 ನಿಮಿಷಗಳ ಕಾಲ ಕಾಯಲು ಹೇಳಿದ್ದರಂತೆ. ಇದರಿಂದಾಗಿ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದ್ರೆ, ಸಿಎಒ ಯಾವುದೋ ಕೆಲಸದಲ್ಲಿ ಇರಬಹುದು. ಅಥವಾ ಯಾವುದೋ ಕರೆಯಲ್ಲಿ ನಿರತರಾಗಿರಬಹುದು ಎಂದು ಭಾವಿಸಿದ್ದರು. ಆದ್ರೆ ಮೊದಲಲ್ಲೇ ಕಾಯುವಂತೆ ಮಾಡಿದ್ದು ಅವರಿಗೆ ಕೊಂಚ ಬೇಸರ ಉಂಟುಮಾಡಿತ್ತು.
ಕಂಪನಿ ಉದ್ಯೋಗಿಗಳಿಗೆ ಅಗೌರವ
ಗುಪ್ತಾ ಅವರು ಹೆಚ್‌ಆರ್ ಬಳಿ ನೀವು ಕಂಪಿ ಕುರಿತ ವಿಡಿಯೋವನ್ನು ಕಳುಹಿಸಿದ್ದೀರ ಎಂದು ಕೇಳೀದಾಗ ಹೆಚ್‌ಆರ್ ಇಲ್ಲ ಎಂದರು. ಅದಕ್ಕೆ ಸಿಇಒ ಸಂದರ್ಶನಕ್ಕೆ ಬಂದವರ ಮುಂದೆಯೇ ಅವರನ್ನ ವ್ಯಂಗ್ಯವಾಡಿದ್ದರು. ಹೌದು ಹೆಚ್‌ಆರ್ ಇಂದ ತಪ್ಪಾಗಿದೆ ಆದ್ರೆ ಅಭ್ಯರ್ಥಿಯ ಮುಂದೆಯೇ ಸಿಇಒ ಹೆಚ್‌ಆರ್ ಬಗ್ಗೆ ಅಗೌರವ ತೋರುವುದು ಎಷ್ಟು ಸರಿ ಎಂದು ಗುಪ್ತ ಹೇಳಿದ್ದಾರೆ.
ಕಾಪಿರೈಟಿಂಗ್ ಅನ್ನು ಚಾಟ್‌ಜಿಪಿಟಿ ಎಂದ ಸಿಇಒ
ಇನ್ನು ಗುಪ್ತಾ ಅವರ ಎದುರು ಸಿಇಒ ಕಾಪಿರೈಟಿಂಗ್ ಕೆಲಸವನ್ನ ಚಾಟ್‌ಜಿಪಿಟಿ ಎಂದು ಕರೆದಿದ್ದಾರೆ. ಇದರಿಂದಾಗಿ ಇವರು ಆ ಕೆಲಸದ ಬಗ್ಗೆ ಅಸಡ್ಡೆ ತೋರುತ್ತಿರುವುದು ಎದ್ದು ಕಾಣುತ್ತಿದೆ ಎಂದು ಗುಪ್ತಾ ಭಾವಿಸಿದರು. ಅಲ್ಲದೆ ಆ ಕೆಲಸವನ್ನು ಆವರು ಗೌರವಿಸುವುದಿಲ್ಲ ಎಂಬುದು ಅವರಿಗೆ ತಿಳಿಯಿತು.
ಹಿಂದಿನ ಕಂಪನಿಗಳ ಬಗ್ಗೆ ಟೀಕೆ
ಅಲ್ಲದೆ ಸಿಇಒ ಗುಪ್ತಾ ಅವರ ಹಿಂದಿನ ಕಂಪನಿಗಳ ಬಗ್ಗೆ ಅವರು ಟೀಕೆ ಮಾಡಿದರು. ಆ ಕಂಪನಿಗಳಲ್ಲಿರುವ ಕೆಲಸಗಳು ಬೋರಿಂಗ್ ಎಂದು ಹೇಳಿದ್ರು. ಎಲ್ಲಾ ಕಂಪನಿಗಳು ಅದರದ್ದೇ ಆದ ಘನತೆಗಳನ್ನ ಹೊಂದಿರುತ್ತದೆ. ತನ್ನದೇ ಆದಂತ ಧ್ವನಿಯನ್ನ ಹೊಂದಿದೆ. ಹಾಗೆ ಎಲ್ಲವೂ ಕೂಡ ಆಕರ್ಷಕವಾಗಿರಲೇ ಬೇಕು ಅಂತ ಇಲ್ಲ. ಅಲ್ಲದೆ ಗುಪ್ತಾ ಅವರು ಅವರ ಕಂಪನಿಯ ಕಂಟೆಂಟ್‌ಗಳನ್ನ ಪರಿಶೀಲನೆ ಮಾಡಿದ್ರು. ಆಗ ಅವರಿಗೆ ಅದೆಲ್ಲಾ ಎಐನಿಂದ ರಚಿತವಾಗಿರುವಂತೆ ಕಂಡವು. ಇದರಿಂದಾಗಿ ಗುಪ್ತಾ ಅಸಮಧಾನ ವ್ಯಕ್ತಪಡಿಸಿದ್ರು.
ಸಿಇಒ ಸ್ಥಾನದಲ್ಲಿರುವ ಅವರು ಬಹಳ ಶ್ರಮಪಟ್ಟು ಈ ಸ್ಥಾನಕ್ಕೆ ಬಂದಿರಬಹುದು. ಆದರೆ ತಮ್ಮ ಕಂಪನಿಯಲ್ಲಿರುವ ಉದ್ಯೋಗಿಗಳೊಂದಿಗೆ ಅವರು ಹೇಗೆ ವರ್ತಿಸುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ. ಇನ್ನು ಸಂದರ್ಶನದ ನಂತರ ಗುಪ್ತಾ ಅವರು ಹೆಚ್‌ಆರ್‌ಗೆ ಮೆಸೆಜ್ ಮಾಡುವ ಮೂಲಕ ತಮ್ಮ ಕೆಲಸವನ್ನು ನಿರಾಕರಿಸಿದ್ದಾರೆ. ಇನ್ನು ಕುರಿತು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸಂದರ್ಶಕರು ಅಥವಾ ಉದ್ಯೋಗದಾತರು ಅಸಮರ್ಪಕ ಕಾಮೆಂಟ್‌ಗಳನ್ನು ಮಾಡುವುದು, ಅಗೌರವ ತೋರುವುದು ಅಥವಾ ತಾರತಮ್ಯದ ನಡವಳಿಕೆಯಲ್ಲಿ ತೊಡಗಿರುವಂತಹ ವೃತ್ತಿಪರವಲ್ಲದ ನಡವಳಿಕೆಯನ್ನು ಪ್ರದರ್ಶಿಸಿದಾಗ ಅಂತಹ ಪ್ರಕರಣಗಳು ಸಾಮಾನ್ಯವಾಗಿ ಗಮನ ಸೆಳೆಯುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ವಿಚಾರಗಳು ಕೂಡ ಅತಿ ವೇಗದಲ್ಲಿ ಹರಡುತ್ತವೆ.
ಈ ರೀತಿಯ ಅನೇಕ ಸಂದರ್ಭಗಳಲ್ಲಿ, ಅಭ್ಯರ್ಥಿಗಳು ಅನಾನುಕೂಲ ಅಥವಾ ಅಗೌರವವನ್ನು ಅನುಭವಿಸಿದರೆ ಉದ್ಯೋಗವನ್ನ ನಿರಾಕರಿಸುವುದು ಉತ್ತಮ, ಅಂತಹ ಕಥೆಗಳು ಮಹತ್ವದ್ದಾಗಿವೆ ಏಕೆಂದರೆ ಅವರು ಸಂದರ್ಶನಗಳ ಸಮಯದಲ್ಲಿ ವೃತ್ತಿಪರತೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಾರೆ, ಇದು ಪ್ರಸ್ತಾಪವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಭ್ಯರ್ಥಿಯ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು.ಗುಪ್ತಾ ಅವರ ಲಿಂಕ್ಡ್‌ಇನ್ ಪೋಸ್ಟ್ ಹಲವು ಚರ್ಚೆಗಳನ್ನು ಹುಟ್ಟುಹಾಕಿತು. ನೇಮಕಾತಿ ಪ್ರಕ್ರಿಯೆಯ ವೇಳೆ ಕೆಲಸದ ಸ್ಥಳದ ಸಂಸ್ಕೃತಿ ಮತ್ತು ಗೌರವದ ಬಗ್ಗೆ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿತು. ಇನ್ನು ಈ ಕುರಿತು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದು, ಕೆಲಸ ಮಾಡಲು ಭಯಾನಕ ಸ್ಥಳವೆಂದು ತೋರುತ್ತದೆ. ಎಷ್ಟೇ ಸಂಬಳ ಕೊಟ್ಟರೂ ಕೂಡ ಅಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗೆ ಇನ್ನೊಬ್ಬರು ಅಂತಹ ವಾತಾವರಣದಿಂದ ಹೊರಬರುವುದು ಎಂದಿದ್ದಾರೆ.
ಜನರನ್ನು ಸಂದರ್ಶನ ಮಾಡುವಾಗ ಸೌಜನ್ಯದಿಂದ ನಡೆದುಕೊಳ್ಳುವುದು ಮುಖ್ಯ. ಇದು ಎಲ್ಲಾ ಕಂಪನಿಗಳಿಗೂ ಪಾಠವಾಗಿದೆ. ಅಭ್ಯರ್ಥಿಗಳನ್ನು ಘನತೆ ಮತ್ತು ಗೌರವದಿಂದ ಪರಿಗಣಿಸಬೇಕು. ಇಲ್ಲದಿದ್ದರೆ, ಅವರು ಉತ್ತಮ ಅವಕಾಶದಿಂದ ದೂರವಿರಲು ಅಭ್ಯರ್ಥಿಗಳು ಬಯಸುತ್ತಾರೆ. ವಿಭಾ ಗುಪ್ತಾ ಅವರ ಕಥೆಯು ಸಂಸ್ಥೆಯಲ್ಲಿ ಪ್ರತಿ ಹಂತದಲ್ಲೂ ಕೂಡ ವೃತ್ತಿಪರರು ಹೇಗೆ ವರ್ತಿಸಬೇಕು ಎಂಬುದನ್ನು ಇಲ್ಲಿ ತಿಳಿಯಬಹುದು
More From GoodReturns

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications