ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಲೆಕ್ಕ ಬಂದಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಕೆಟ್ಟ ಸ್ಥಿತಿಯಲಿದ್ದು, 23.9% ಕುಗ್ಗಿದೆ. ಇನ್ನು ಎರಡನೇ ತ್ರೈಮಾಸಿಕ (ಜುಲೈನಿಂದ ಸೆಪ್ಟೆಂಬರ್) ಕೂಡ ಇಳಿಕೆ ದಾಖಲಿಸುವ ಸಾಧ್ಯತೆ ಹೆಚ್ಚಾಗಿದೆ.
ಜೂನ್ ಗಿಂತ ಜುಲೈ ಸ್ಥಿತಿ ಬಹಳ ಕೆಟ್ಟದಾಗಿದೆ. ಇನ್ನು ಆಗಸ್ಟ್ ತಿಂಗಳ ಆರಂಭ ಅಷ್ಟೇನೂ ಉತ್ತೇಜನಕಾರಿ ಆಗಿರಲಿಲ್ಲ. ಎರಡನೇ ತ್ರೈಮಾಸಿಕದಲ್ಲಿ ಇನ್ನೊಂದು ಕುಸಿತ ಇರಲಿದೆ. ಆದರೆ ಆತಂಕ ಇರುವುದು ಸಾಮಾನ್ಯ ನಿರೀಕ್ಷೆಗಿಂತ ಚೇತರಿಕೆ ನಿಧಾನ ಆಗಬಹುದು ಎಂಬ ಬಗ್ಗೆಯೇ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ವಾಸ್ತವ ಜಿಡಿಪಿ ಕುಸಿತವು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದು ಆಘಾತಕಾರಿ. ಅಂದ ಹಾಗೆ ಈಗಿನ ಕುಸಿತವನ್ನು ಇತಿಹಾಸದ ಯಾವುದೇ ಸಂದರ್ಭಕ್ಕೂ ಹೋಲಿಸಲು ಸಾಧ್ಯವಿಲ್ಲವಾದ್ದರಿಂದ ಕೆಲ ಅಂಕಿ- ಅಂಶಗಳನ್ನು ಇಲ್ಲಿ ನೀಡಲಾಗಿದೆ:

ಖಾಸಗಿ ಖರೀದಿ: 27% ಕುಸಿತ (ನಿರೀಕ್ಷೆ ಇದ್ದದ್ದು -18%)
ಒಟ್ಟಾರೆ ಹೂಡಿಕೆ ಕುಸಿತ: 47.5% (ನಿರೀಕ್ಷೆ ಇದ್ದದ್ದು -30%)
ಸರ್ಕಾರದಿಂದ ಖರೀದಿ: 16.4% ಆಗಿದ್ದು, ಅದು ನಿರೀಕ್ಷೆಯ ಹಾದಿಯಲ್ಲೇ ಇದೆ.
ನಿವ್ವಳ ರಫ್ತು: ವಾಸ್ತವ ಲೆಕ್ಕಾಚಾರದಲ್ಲಿ ಅತಿ ಹೆಚ್ಚು (FY96 ನಂತರ ಮೂರನೇ ದಾಖಲೆ)
ನಾಮಿನಲ್ ಜಿಡಿಪಿ: ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಲ್ಲಿ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 22.6% ಕುಸಿತ. ಉತ್ಪಾದನೆ ನಷ್ಟ ಪ್ರಮಾಣ 15 ಲಕ್ಷ ಕೋಟಿ ಅಂದುಕೊಳ್ಳಬಹುದು (ಕೊರೊನಾ ಮುಂಚಿನ ಸ್ಥಿತಿಗೆ ವರ್ಷದಿಂದ ವರ್ಷಕ್ಕೆ 8% ಬೆಳವಣಿಗೆ ಅಂದುಕೊಂಡಲ್ಲಿ).
ರಿಯಲ್ ಜಿವಿಎ: ಕಳೆದ ವರ್ಷಕ್ಕೆ ಹೋಲಿಸಿದರೆ 22.8% ಕುಸಿತ. ಇದರಲ್ಲಿ ವ್ಯಾಪಾರ ಹಾಗೂ ಸಾಗಾಟ ಅರ್ಧದಷ್ಟು ಕುಸಿದಿದೆ. ಸಾರ್ವಜನಿಕ ಆಡಳಿತ ಹಾಗೂ ರಕ್ಷಣಾ ಕ್ಷೇತ್ರ (ಇದರಲ್ಲಿ ಸರ್ಕಾರದ ವೆಚ್ಚ ಇತರ ಎಲ್ಲವೂ ಸೇರಿದೆ) 10% ಕುಗ್ಗಿದೆ.
ಜಿಡಿಪಿ ಡಿಫ್ಲೇಟರ್: 1.6% ಬೆಳವಣಿಗೆ ಆಗಿದೆ. CPI (ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್) ಗಿಂತ WPI (ಹೋಲ್ ಸೇಲ್ ಪ್ರೈಸ್ ಇಂಡೆಕ್ಸ್)ನಲ್ಲಿ ಇಳಿಕೆ.


Click it and Unblock the Notifications