ಬೆಂಗಳೂರಿನಲ್ಲಿ ಗೃಹ ಖರೀದಿದಾರರ ಕನಸು ಕಸಿಯುವ ಬಿಲ್ಡರ್‌ಗಳಿಗೆ ಬಿಸಿಮುಟ್ಟಿಸಿದ ಕೆ-ರೇರಾ

ಉದ್ಯೋಗ,ಉದ್ದಿಮೆ ಹೀಗೆ ನಾನಾ ಕಾರಣಗಳಿಂದ ಬೆಂಗಳೂರು ಸೇರಿಕೊಂಡು ಅಲ್ಲೇ ಬದುಕುಕಟ್ಟಿಕೊಂಡ ಅನೇಕ ಮಂದಿಗೆ ಬೃಹತ್ ಬೆಂಗಳೂರಿನಲ್ಲಿ ತಮ್ಮದೇ ಆದ ಮನೆ ಬೇಕು ಎನ್ನುವುದು ಅನೇಕರ ಹಂಬಲ. ಸೈಟ್ ಖರೀದಿಸಿ ಮನೆ ಕಟ್ಟುವ ಗೊಡವೆ ಬೇಡ ಎಂದು ಅನೇಕರು ಪ್ಲ್ಯಾಟ್/ಮನೆಯನ್ನು ಬಿಲ್ಡರ್ ಗಳಿಂದ ಖರೀದಿಸುವ ನಿರ್ಧಾರ ಮಾಡುತ್ತಾರೆ.

ಸ್ವಂತ ಸೂರು ಹೊಂದುವ ಕನಸು ಕಾಣುವ ಮಧ್ಯಮ ವರ್ಗವಂತೂ ಹೇಗೋ ದುಡ್ಡು ಕೂಡಿಟ್ಟು ಸಾಲ ಸೋಲ ಮಾಡಿ ಮನೆ ಖರೀದಿಗೆ ಮುಂದಾಗುತ್ತಾರೆ. ಆದರೆ ಬಿಲ್ಡರ್ ಗಳ ನಿರ್ಲಕ್ಷ್ಯ, ವಂಚನೆಯಿಂದ ಕನಸು ಕಂಡ ಮನೆ ವರ್ಷನೂಗಟ್ಟಲೆ ಕಾಯುವಂತಾದರೇ ಅಥವಾ ಮನೆ ಖರೀದಿಯಿಂದಲೇ ಸಂಕಷ್ಟ ಎದುರಾದರೇ ಮುಂದೇನು ಮಾಡುವುದು ಎಂಬ ಚಿಂತೆ ಎಲ್ಲರನ್ನು ಕಾಡುತ್ತದೆ. ಒಂದು ಕಡೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವೇಗವಾಗಿ ಬೆಳೆಯುತ್ತಿದೆ. ಇನ್ನೊಂದು ಕಡೆ ಸಿಲಿಕಾನ್ ಸಿಟಿಯಲ್ಲಿ ಬಿಲ್ಡರ್‌ಗಳ ವಂಚನೆ ಕೃತ್ಯಗಳು ಗೃಹ ಖರೀದಿದಾರರ ಜೀವನವನ್ನು ಹಾಳು ಮಾಡುತ್ತಿವೆ.

ಬೆಂಗಳೂರಿನಲ್ಲಿ ವಂಚನೆ ಬಿಲ್ಡರ್‌ಗಳಿಗೆ ಕೆ-ರೇರಾದಿಂದ ಬ್ರೇಕ್

ಬಿಲ್ಡರ್‌ಗಳು ಗೃಹ/ನಿವೇಶನ ಖರೀದಿದಾರರಿಂದ ಲಕ್ಷಾಂತರ ರೂ.ಗಳನ್ನು ಮುಂಗಡವಾಗಿ ಪಡೆದುಕೊಳ್ಳುತ್ತಿದ್ದಾರೆ. ನಂತರ ಗೃಹ ಖರೀದಿದಾರರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು, ವಸತಿ ಯೋಜನೆಗಳ ಹೆಸರು ಬದಲಿಸಿ ಖರೀದಿದಾರರನ್ನು ಸಂಕಷ್ಟಕ್ಕೆ ದೂಡಿ ವಂಚಿಸುವಂತಹ ಪ್ರಕರಣ ಹೆಚ್ಚು ಹೆಚ್ಚಾಗಿ ವರದಿಯಾಗುತ್ತಿದೆ. ಹೀಗಾಗಿ ವಂಚನೆಗೆ ಸಿಲುಕಿದ ನೂರಾರು ಗೃಹ ಖರೀದಿದಾರರು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಮೊರೆ ಹೋಗುತ್ತಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆ-ರೇರಾ, ಬಿಲ್ಡರ್‌ಗಳ ವಂಚನೆ ತಡೆಯಲು ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಬಿಲ್ಡರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಸುಲಭವಾಗಲಿದೆ ಮತ್ತು ಗೃಹ ಖರೀದಿದಾರರಿಗೆ ನ್ಯಾಯ ದೊರೆಯುವ ನಿರೀಕ್ಷೆ ಇದೆ.

ಏನಿದು ಪ್ರಕರಣ:

ಬೆಂಗಳೂರಿನ ಲಲಿತಾ ಮತ್ತು ಇತರರು ಹಲವು ವರ್ಷಗಳ ಹಿಂದೆ ವಿನ್ಯಾಸನಗರ್ ಬಡಾವಣೆಯಲ್ಲಿ ನಿವೇಶನಗಳನ್ನು ಖರೀದಿಸಿದ್ದರು. ನಂತರ ಈ ಬಡಾವಣೆಯ ಹೆಸರನ್ನು 'ವಿಜಯನಗರ ಎಕೋ ವಿಲೇಜ್ 'ಎಂದು ಬದಲಾಯಿಸಲಾಯಿತು. ಖರೀದಿದಾರರಿಗೆ ಕ್ರಯಪತ್ರ ಮತ್ತು ಖಾತಾ ನೀಡಿದ್ದರೂ, ನಿವೇಶನಗಳನ್ನು ಹಸ್ತಾಂತರಿಸಿರಲಿಲ್ಲ. ಈ ಸಮಸ್ಯೆಯನ್ನು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಮುಂದೆ ಇಟ್ಟಿದ್ದರು. ಪ್ರಾಧಿಕಾರವು ಖರೀದಿದಾರರ ಪರವಾಗಿ ನಿಂತು, ಬಿಲ್ಡರ್‌ಗೆ ಹೊಸ ನಿವೇಶನಗಳನ್ನು ಮಾರಾಟ ಮಾಡುವುದನ್ನು ತಡೆಯುವ ಆದೇಶ ಹೊರಡಿಸಿದೆ. ಪ್ರಕರಣ ವಿಚಾರಣೆಯೂ ಇನ್ನೂ ಬಾಕಿ ಇದೆ.

ಏಳು ಮಂದಿ ಸಲ್ಲಿಸಿದ್ದ ದೂರನ್ನು ಆಲಿಸಿದ ಪ್ರಾಧಿಕಾರದ ಅಧ್ಯಕ್ಷ ಎನ್.ರಾಕೇಶ್ ಸಿಂಗ್ ಮತ್ತು ಸದಸ್ಯೆ ನೀಲಮಣಿ ಎನ್.ರಾಜು ಅವರಿದ್ದ ಪೀಠ, ಆ ರೀತಿ ಹೆಸರು ಬದಲಿಸಿರುವ ವಸತಿ ಯೋಜನೆಯ ನಿವೇಶನಗಳನ್ನು ನೋಂದಣಿ ಮಾಡದಂತೆ ಎಲ್ಲಾ ನೀಡುವಂತೆ ನೋಣದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ಆದೇಶಿಸಿದೆ.

ವಸತಿ ಯೋಜನೆಗಳ ಹೆಸರಿನಲ್ಲಿ ಮುಂಗಡ ಹಣ ಪಡೆದುಕೊಂಡು ಗ್ರಾಹಕರನ್ನು ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದವು. ಕೆ-ರೇರಾ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಯೋಜನೆಗಳ ಹೆಸರು ಬದಲಿಸುವುದನ್ನು ತಡೆಯುವ ಮೂಲಕ ಬಿಲ್ಡರ್‌ಗಳ ಈ ಕೃತ್ಯಕ್ಕೆ ಕಡಿವಾಣ ಹಾಕಿದೆ. ಇದರಿಂದ ಗೃಹ ಖರೀದಿದಾರರ ವಿಶ್ವಾಸ ಹೆಚ್ಚಾಗಿದೆ.

ಕೆ-ರೇರಾ ಎಂದರೇನು?

ಕೆ-ರೇರಾ ಎಂದರೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ. ಇದು ರಿಯಲ್ ಎಸ್ಟೇಟ್ ವಲಯದಲ್ಲಿನ ಪಾರದರ್ಶಕತೆ ಹೆಚ್ಚಿಸಿ, ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾದ ಒಂದು ಸರ್ಕಾರಿ ಸಂಸ್ಥೆ.

2016 ರಲ್ಲಿ ಭಾರತದಲ್ಲಿ ಅಸಂಘಟಿತ ರಿಯಲ್ ಎಸ್ಟೇಟ್ ವಲಯಾದ ನಿಯಂತ್ರಣದ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ರೇರಾ ಕಾಯಿದೆ ಮೋಸದ ಬಿಲ್ಡರ್ ಗಳು ಮತ್ತು ತಪ್ಪುದಾರಿಗೆಳೆಯುವ ಮಾಹಿತಿಗಳಿಂದ ಖರೀದಿದಾರರ ಹಕ್ಕುಗಳ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ.

ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ (RERA) ಪೂರ್ಣ ರೂಪವಾಗಿದ್ದು, ಕೆಲ ರಾಜ್ಯಗಳಲ್ಲಿ ಹೊರತುಪಡಿಸಿ ಭಾರತದ ಬಹುತೇಕ ಎಲ್ಲಾ ರಾಜ್ಯಗಳು ರಿಯಲ್ ಎಸ್ಟೇಟ್ ಕ್ಷೇತ್ರವನ್ನು ನಿಯಂತ್ರಿಸಲು ರಾಜ್ಯ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿಯನ್ನು ಸ್ಥಾಪಿಸಿದೆ. ಕರ್ನಾಟಕದಲ್ಲಿ ಕೆ-ರೇರಾ (ರೇರಾ ಕರ್ನಾಟಕ) ಎಂದು ಕರೆಯಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+