ಬೆಂಗಳೂರು, ಜೂನ್ 28: ಕರ್ನಾಟಕದ ಕೈಗಾ ಸ್ಥಾವರದಲ್ಲಿ ಪರಮಾಣು ವಿದ್ಯುತ್ ಉತ್ಪಾದಿಸುವ ಯೋಜನೆಗೆ ಸಂಬಂಧಿಸಿದ ಗುತ್ತಿಗೆಯನ್ನು ಪಡೆಯುವಲ್ಲಿ ಮೂಲಸೌಕರ್ಯ ಸಂಸ್ಥೆ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ (MEIL) ಯಶ ಕಂಡಿದೆ.
ಭಾರತದ ಪರಮಾಣು ವಿದ್ಯುತ್ ನಿಗಮ (NPCIL) ಶುದ್ದ ಮತ್ತು ಸುರಕ್ಷಿತವಾದ ಅಣು ವಿದ್ಯುತ್ ಉತ್ಪಾದನೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ಕೈಗಾದಲ್ಲಿ ೨* 700 ಮೆಗಾವ್ಯಾಟ್ (MW) ವಿದ್ಯುತ್ ಉತ್ಪಾದಿಸುವ ಯೋಜನೆ ಯನ್ನು ಒಳಗೊಂಡಿದೆ. NPCIL ಇದಕ್ಕಾಗಿ ಟೆಂಡರ್ ಕರೆದಿದ್ದು, 12,800 ಕೋಟಿ ರೂ.ಮೌಲ್ಯದ ಟೆಂಡರ್ ಅನ್ನು ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ತನ್ನ ತೆಕ್ಕೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ರಾಜ್ಯ-ಚಾಲಿತ NPCIL ನಿಂದ ಇದುವರೆಗಿನ ಅತಿ ಹೆಚ್ಚು ಮೌಲ್ಯದ ಟೆಂಡರ್ ಆಗಿದೆ.

ಕರ್ನಾಟಕದ ಕೈಗಾದಲ್ಲಿ ಎರಡು 700 ಮೆಗಾವ್ಯಾಟ್ (MW) ವಿದ್ಯುತ್ ರಿಯಾಕ್ಟರ್‌ಗಳ ನಿರ್ಮಾಣವನ್ನು ಒಳಗೊಂಡಿದೆ ಎಂದು MEIL ಜೂನ್ 26 ರಂದು ಹೇಳಿದೆ, ಇದು ರಾಜ್ಯ-ಚಾಲಿತ NPCIL ನಿಂದ ಇದುವರೆಗಿನ ಅತಿ ಹೆಚ್ಚು ಮೌಲ್ಯದ ಟೆಂಡರ್ ಆಗಿದೆ. ಅದೇ ವರ್ಷದಲ್ಲಿ ಅಕ್ಟೋಬರ್ ನಲ್ಲಿ ತಾಂತ್ರಿಕ ಬಿಡ್ ಒಪನ್ ಆಗಿತ್ತು. ಈ ಬಿಡ್ ಗೆ ತೀವ್ರ ಪೈಪೋಟಿ ಇದ್ದು ಬಿ ಎಚ್ ಇ ಎಲ್ , ಲಾರ್ಸೆನ್ & ಟೂಬ್ರೊ ಲಿಮಿಟೆಡ್ (L&T) ಮತ್ತು ಮಣಿಪಾಲ್ ಎನರ್ಜಿ ಆ್ಯಂಡ್ ಇನ್ಫ್ರಾಟೆಕ್ ಲಿಮಿಟೆಡ್ (ಎಂಇಐಎಲ್)ಸಂಸ್ಥೆಗಳು ಬಿಡ್ ಸಲ್ಲಿಸಿತ್ತು.
ಎಂಇಐಎಲ್ ನಿರ್ದೇಶಕ ಸಿ.ಎಚ್.ಸುಬ್ಬಯ್ಯ ಮಾತನಾಡಿ, " ಈ ಒಪ್ಪಂದವು ಎಂಇಐಎಲ್ಗೆ ಮಹತ್ವದ ಯೋಜನೆ ಜೊತೆಗೆ ಪರಮಾಣು ಇಂಧನ ಕ್ಷೇತ್ರದ ಪ್ರವೇಶಕ್ಕೆ ನಮ್ಮ ಕಾರ್ಯತಂತ್ರದ ಸಮರ್ಥ ವೇದಿಕೆಯಾಗಿದೆ ಎಂದರು. ಉತ್ಕೃಷ್ಟತೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿರುವ ಎಂಇಐಎಲ್ ಈ ಯೋಜನೆ ಮೂಲಕ ದೇಶದ ಶುದ್ಧ ಇಂಧನ ಪರಿಹಾರ ಮತ್ತು ಸ್ವಾವಲಂಬನೆಗೆ ಕೊಡುಗೆ ನೀಡಲು ಉತ್ಸುಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಉತ್ಪಾದಿಸದ ಮೂಲಗಳಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಭಾರತವು ತನ್ನ ಪರಮಾಣು ಶಕ್ತಿ ವಲಯದಲ್ಲಿ $ 26 ಶತಕೋಟಿಯನ್ನು ಆಹ್ವಾನಿಸಲಿದೆ ಎಂದು ಫೆಬ್ರವರಿಯಲ್ಲಿ ರಾಯಿಟರ್ಸ್ ವರದಿ ಮಾಡಿತ್ತು
ಮೇಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ಸ್, ಚುನಾವಣಾ ಬಾಂಡ್‌ಗಳ ಎರಡನೇ ಅತಿ ದೊಡ್ಡ ಖರೀದಿದಾರ ಸಂಸ್ಥೆಯಾಗಿದ್ದು ಇದು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ. ಇದು ಹೈಡ್ರೋಕಾರ್ಬನ್‌ಗಳು, ಎಲೆಕ್ಟ್ರಿಕ್ ಬಸ್‌ಗಳು, ರಕ್ಷಣೆ, ವಿದ್ಯುತ್, ಸಾರಿಗೆ ಮತ್ತು ಉತ್ಪಾದನೆಯಲ್ಲಿ ಹೆಜ್ಜೆಗುರುತನ್ನು ಹೊಂದಿರುವ $5- ಬಿಲಿಯನ್ ಇನ್ಫ್ರಾಸ್ಟ್ರಕ್ಚರ್ಸ್ ಕಂಪನಿಯಾಗಿದೆ.


Click it and Unblock the Notifications