For Quick Alerts
ALLOW NOTIFICATIONS  
For Daily Alerts

ಕಲ್ಯಾಣ್ ಜ್ಯುವೆಲ್ಲರ್ಸ್ ಐಪಿಒ: ಮಾರ್ಚ್ 16ರಿಂದ ಆರಂಭ

|

ಕೇರಳ ಮೂಲದ ಆಭರಣ ಕಂಪನಿಯಾದ ಕಲ್ಯಾಣ್ ಜ್ಯುವೆಲ್ಲರ್ಸ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಾರಂಭಿಸಿದ್ದು, ಪ್ರತಿ ಷೇರಿಗೆ 86 ರಿಂದ 87 ರೂ. ತೆರೆಯಲಿದೆ.

ಕಲ್ಯಾಣ್ ಜ್ಯುವೆಲ್ಲರ್ಸ್ ಐಪಿಒ ಮಾರ್ಚ್‌ 16 ರಿಂದ 18ರವರೆಗೆ ತೆರೆದಿರಲಿದ್ದು, ಈ ಪ್ರಸ್ತಾಪವು 800 ಕೋಟಿ ರೂ.ಗಳ ಹೊಸ ನಿಧಿ ಸಂಗ್ರಹ ಮತ್ತು 375 ಕೋಟಿ ರೂ.ಗಳ ಮಾರಾಟದ ಪ್ರಸ್ತಾಪವನ್ನು ಸೇರಿದಂತೆ ಒಟ್ಟಾರೆ 1,175 ಕೋಟಿ ಬಂಡವಾಳ ಸಂಗ್ರಹದ ಗುರಿಯನ್ನು ಹೊಂದಿದೆ.

ಕಲ್ಯಾಣ್ ಜ್ಯುವೆಲ್ಲರ್ಸ್ ಐಪಿಒ: ಮಾರ್ಚ್ 16ರಿಂದ ಆರಂಭ

ಪ್ರೊಮೊಟರ್ ಟಿ.ಎಸ್.ಕಲ್ಯಾಣರಾಮನ್ 125 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ವಾರ್ಬರ್ಗ್ ಪಿಂಕಸ್ ಐಪಿಒನಲ್ಲಿ 250 ಕೋಟಿ ರೂ. ಕಲ್ಯಾಣರಾಮನ್ ಮತ್ತು ವಾರ್ಬರ್ಗ್ ಕ್ರಮವಾಗಿ ಕಂಪನಿಯಲ್ಲಿ ಶೇ 24.5 ಮತ್ತು ಶೇ 32 ರಷ್ಟು ಪಾಲನ್ನು ಹೊಂದಿದ್ದಾರೆ. ಇದಕ್ಕೂ ಮೊದಲು 1,750 ಕೋಟಿ ರೂ.ಗಳ ಐಪಿಒ ಮಾಡಲು ಉದ್ದೇಶಿಸಿತ್ತು.

ಭಾರತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 100 ಕ್ಕೂ ಹೆಚ್ಚು ಶೋ ರೂಂಗಳನ್ನು ಕಂಪನಿಯು ನಿರ್ವಹಿಸುತ್ತಿದೆ. ಇದು ಪಶ್ಚಿಮ ಏಷ್ಯಾದಲ್ಲಿ 30 ಶೋ ರೂಂಗಳನ್ನು ಹೊಂದಿದೆ. ಕಂಪನಿಯು ಚಿನ್ನವನ್ನ ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸಿ ಮಾರಾಟ ಮಾಡುತ್ತದೆ. ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಆರ್ಥಿಕ ಕುಸಿತದಿಂದಾಗಿ ಕಂಪನಿಯು ಪಶ್ಚಿಮ ಏಷ್ಯಾದ ಏಳು ಶೋ ರೂಂಗಳನ್ನು ಮುಚ್ಚಿದೆ.

English summary

Kalyan Jewellers IPO Start From March 16 Price Band Rs 86 To Rs 87

Kerala-based jewellery chain Kalyan jewellers has priced its initial public offer (IPO) at Rs 86-87 per share. The IPO will be open from March 16-18
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X