'ಕಾಂತಾರ' ಚಿತ್ರ 2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯನ್ನು ಮಾಡಿ ರಾತ್ರೋ ರಾತ್ರಿ ರಿಷಬ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದ ಚಿತ್ರ. ಈ ಚಿತ್ರ ರಿಷಬ್ ಶೆಟ್ಟಿ ಅವರು ಬದಕನ್ನಾಗಿ ಬದಲಾಗಿಸಿದಂತಹ ಸಿನಿಮಾ ಎಂದೇ ಹೇಳಬಹುದು. ಇವರೇ ಸ್ವತಃ ನಟಿಸಿ, ನಿರ್ದೇಶಿಸಿದ 'ಕಾಂತಾರ' ಪ್ಯಾನ್ ಇಂಡಿಯಾ ಸಕ್ಸಸ್ ಚಿತ್ರವಾಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಸಿನಿಮಾವನ್ನು ಮಾಡಬೇಕು ಎಂದು ರಿಷಬ್ ಶೆಟ್ಟಿ ಮುಂದಾಗಿದ್ದು 'ಕಾಂತಾರ ಚಾಪ್ಟರ್ 1' ಚಿತ್ರದ ತಯಾರಿಯಲ್ಲಿ ಇದ್ದಾರೆ. ಆದ್ರೆ ಇದೀಗ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1' ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ವರದಿಯಾಗುತ್ತಿದೆ.

ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ 'ಕಾಂತಾರ ಚಾಪ್ಟರ್ 1' ಚಿತ್ರ ಇನ್ನೇನು ಕೆಲವೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ಆದರೆ ಇದೀಗ ಈ ದೊಡ್ಡ ಮಟ್ಟದ ಸಿನಿಮಾಕ್ಕಾಗಿ ರಿಷಬ್ ಶೆಟ್ಟಿ ತಮ್ಮ ಸಂಭಾವನೆಯನ್ನು ಶೇ. 2400ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿಗೆ ಇವರು ಕೂಡ ಸೇರಿದ್ಧಾರೆ ಎಂದು ಚರ್ಚೆಗಳು ಶುರುವಾಗಿದೆ.
ಈ ಕುರಿತು ಬಾಲಿವುಡ್ ವೆಬ್ ಸೈಟ್ ಮನರಂಜನಾ ಪೋರ್ಟಲ್ ಕೊಯಿಮೊಯ್ ವರದಿ ಮಾಡಿರುವ ಪ್ರಕಾರ, ರಿಷಬ್ ಶೆಟ್ಟಿ ಅವರು ಚಿತ್ರದಲ್ಲಿ ಬರಹಗಾರ, ನಿರ್ದೇಶಕ ಮತ್ತು ನಾಯಕ ನಟರಾಗಿ ಕಾರ್ಯನಿರ್ವಹಿಸಿದ್ದರು. ಆ ಚಿತ್ರಕ್ಕಾಗಿ ಅವರು ಸುಮಾರು 4 ಕೋಟಿ ರೂ. ಸಂಭಾವನೆ ಪಡೆದಿದ್ದರು. 'ಕಾಂತಾರ' ಚಿತ್ರವು ವಿಶ್ವಾದ್ಯಂತ 400 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಸಂಪಾದಿಸಿ ಗಲ್ಲಾ ಪಟ್ಟಿಗೆಯನ್ನು ಧೋಳಿಫಟವನ್ನು ಮಾಡಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ.
ರಿಷಬ್ ಶೆಟ್ಟಿ ಈಗ ವರದಿಗಳ ಪ್ರಕಾರ, 'ಕಾಂತಾರ ಚಾಪ್ಟರ್ 1 ಚಿತ್ರಕ್ಕಾಗಿ 100 ಕೋಟಿ ರೂ. ಸಂಭಾವನೆಯನ್ನು ಪಡೆದಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕರೊಂದಿಗೆ ಲಾಭ ಹಂಚಿಕೆ ಒಪ್ಪಂದವನ್ನೂ ಸಹ ಮಾಡಿಕೊಂಡಿದ್ದಾರೆ. ಇದರಿಂದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ಹೆಚ್ಚುವರಿಯಾಗಿ 50 ಕೋಟಿ ರೂ. ಗಳಿಸುವ ಅವಕಾಶವನ್ನು ಹೊಂದಿದೆ.
'ಕಾಂತಾರ ಚಾಪ್ಟರ್ 1 ಚಿತ್ರವು ಅಕ್ಟೋಬರ್ 2, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡಯಾಗುವ ಸಾಧ್ಯತೆ ಕೂಡ ಇದೆ. ಚಿತ್ರದ ಕಥಾಹಂದರವು ಪೌರಾಣಿಕ ಹಿನ್ನಲೆ ಮತ್ತು ಪೂರ್ವಜರ ಕಥೆಯನ್ನು ಒಳಗೊಂಡಿದೆ. ಫ್ರಾಂಚೈಸಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಭರವಸೆ ನೀಡುತ್ತದೆ.
'ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಸುಮಾರು 500ಕ್ಕೂ ಹೆಚ್ಚು ವೃತ್ತಿಪರ ತರಬೇತಿ ಪಡೆದ ಹೋರಾಟಗಾರರು ಮತ್ತು ಸುಮಾರು 3,000 ವ್ಯಕ್ತಿಗಳ ತಾಂತ್ರಿಕ ತಂಡವನ್ನು ಒಳಗೊಂಡ ಬೃಹತ್ ಯುದ್ಧದ ಸನ್ನಿವೇಶವನ್ನು ಕೂಡ ಚಿತ್ತೀಕರಣವನ್ನು ಮಾಡಲಾಗಿದೆ. ಈ ಚಿತ್ರದ ಸನ್ನಿವೇಶಕ್ಕಾಗಿ 25 ಎಕರೆ ಪ್ರದೇಶದಲ್ಲಿ ಒಂದು ಪಟ್ಟಣವನ್ನು ಕೂಡ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಸುಮಾರು 45 ರಿಂದ 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಇದು ಭಾರತೀಯ ಚಲನಚಿತ್ರ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಆಕ್ಷನ್ ಸೆಟ್ ಎಂದೇ ಹೇಳಬಹುದು.


Click it and Unblock the Notifications