ಕರ್ನಾಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳೇ ಅಲರ್ಟ್... ಪರೀಕ್ಷೆ ಯಾವಾಗ ಎಂದು ಕಾದು ಕುಳಿತಿದ್ದವರು ಓದಲೇ ಬೇಕಾದ ಸುದ್ದಿ ಇದು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2026 ರ 2ನೇ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ವೇಳಾಪಟ್ಟಿ ನೋಡಿ ನಿಮ್ಮ ಪರೀಕ್ಷೆಗೆ ತಯಾರಾಗೋದನ್ನ ಮರೆಯಬೇಡಿ.

ಹೌದು, ಪ್ರಾಕ್ಟಿಕಲ್ ಪರೀಕ್ಷೆಯ ವೇಳಾಪಟ್ಟಿ ರಿಲೀಸ್ ಆಗಿದೆ. ಈ ವರ್ಷದ ಪ್ರಾಕ್ಟಿಕಲ್ ಪರೀಕ್ಷೆಗಳು ಜನವರಿ 27ರಿಂದ ಶುರುವಾಗಲಿವೆ. ಅಲ್ಲಿಂದ ಫೆಬ್ರವರಿ 2ರ ವರೆಗೂ ನಡೆಯಲಿವೆ. ಅಂದರೆ ಒಟ್ಟಾರೆಯಾಗಿ ಎಲ್ಲಾ ಪ್ರಾಯೋಗಿಕ ಪರೀಕ್ಷೆಗಳು ಒಂದು ವಾರದ ಅವಧಿಯಲ್ಲಿ ಮುಗಿಯಲಿವೆ. ಹೀಗಾಗಿ ವಿದ್ಯಾರ್ಥಿಗಳು ಈ ವೇಳಾಪಟ್ಟಿಯನ್ನು ನೋಡಿಕೊಂಡು ಪರೀಕ್ಷೆಗೆ ತಯಾರಾದರೆ ಉತ್ತಮ.
ಅಂದಹಾಗೆ ಪ್ರಾಕ್ಟಿಕಲ್ ಪರೀಕ್ಷೆಯ ವೇಳಾಪಟ್ಟಿಗಾಗಿ ಗೊಂದಲ ಪಡಬೇಡಿ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ kseab.karnataka.gov.in ಮೂಲಕ ಸಂಪೂರ್ಣ ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿಯೂ ನೇರ ಮಾಹಿತಿ ಪಡೆಯಬಹುದು. ಇದು ವಿದ್ಯಾರ್ಥಿಗಳಿಗೆ ಬಹು ಅನುಕೂಲಕರ ಆಯ್ಕೆಯಾಗಿದೆ. ಏಕೆಂದರೆ ಪರೀಕ್ಷಾ ವೇಳಾಪಟ್ಟಿ ಡೌನ್‌ಲೋಡ್ ಮಾಡಿ ತಮ್ಮ ಬಳಿ ಇಟ್ಟುಕೊಳ್ಳಬಹುದು. ಹಾಗೂ ಬೇಕಾದಾಗ ಪರಿಶೀಲಿಸಬಹುದು.
ಇನ್ನು ಪ್ರಾಯೋಗಿಕ ಪರೀಕ್ಷೆಗಳ ನಂತರ, 2ನೇ ಪಿಯುಸಿ ಮುಖ್ಯ ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿವೆ. ಈ ಪರೀಕ್ಷೆಗಳನ್ನು ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಮಂಡಳಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ವ್ಯವಸ್ಥೆಯನ್ನು ಅಳವಡಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ಅಥವಾ ಅಸಂಬಂಧಿತ ಕಾರ್ಯಗಳನ್ನು ತಡೆಯಲು ಸಂಪೂರ್ಣ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳು ಶಾಂತಿಯಿಂದ ಮತ್ತು ಸುಗಮವಾಗಿ ತಮ್ಮ ಪರೀಕ್ಷೆ ಬರೆಯಲು ಎಲ್ಲವೂ ಸಿದ್ಧವಾಗಿದೆ.
ಪ್ರಾಯೋಗಿಕ ಪರೀಕ್ಷೆಗಳ ನಿರ್ವಹಣೆಗೆ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳಲ್ಲಿ ಪ್ರತಿ ವಿಜ್ಞಾನ ವಿಷಯಕ್ಕೆ ಪ್ರಾಂಶುಪಾಲರು ಸಂಯೋಜಕರಾಗಿ, ಮತ್ತು ಗರಿಷ್ಠ ಇಬ್ಬರು ಹಿರಿಯ ವಿಜ್ಞಾನ ಉಪನ್ಯಾಸಕರು ಸದಸ್ಯರಾಗಿ ನೇಮಕಗೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಮಯಪಟ್ಟಿ ಸಿದ್ಧಪಡಿಸುವ ಜವಾಬ್ದಾರಿ ಈ ಸಮಿತಿಯ ಮೇಲಿದೆ. ನಿಷ್ಪಕ್ಷಪಾತ ಧೋರಣೆಯನ್ನು ಖಚಿತಪಡಿಸಲು ಆಂತರಿಕ ಮತ್ತು ಬಾಹ್ಯ ಪರೀಕ್ಷಕರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ.
ಕೆಎಸ್ಇಎಬಿ ತಿಳಿಸಿದಂತೆ, ಪ್ರಾಯೋಗಿಕ ಪರೀಕ್ಷೆಗಳ ಸಮಯದಲ್ಲಿ ಯಾವುದೇ ಅಕ್ರಮ ತಡೆಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ನ್ಯಾಯಯುತವಾಗಿ, ಶಾಂತವಾಗಿ ಮತ್ತು ಸುಗಮವಾಗಿ ತಮ್ಮ ಪರೀಕ್ಷೆ ಬರೆಯಲು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ಈ ಕ್ರಮಗಳು ವಿದ್ಯಾರ್ಥಿಗಳ ಭದ್ರತೆ ಮತ್ತು ಪರೀಕ್ಷೆಗಳ ವೈಧತೆಗಾಗಿ ಮುಖ್ಯವಾಗಿದೆ.
ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ಮತ್ತು ಮುಖ್ಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಗಮನದಿಂದ ಪರಿಶೀಲಿಸಿ, ಸರಿಯಾಗಿ ತಯಾರಾಗುವಂತೆ ತಮ್ಮ ಶಾಲೆ ಮತ್ತು ಸಿಬ್ಬಂದಿಯಿಂದ ಮಾರ್ಗದರ್ಶನ ಪಡೆಯುವುದು ಮುಖ್ಯ. ಸಮಯಕ್ಕೆ ಸರಿಯಾಗಿ ಪರೀಕ್ಷೆ ಕೇಂದ್ರಗಳಿಗೆ ಹಾಜರಾಗುವುದು ಮತ್ತು ಎಲ್ಲಾ ನಿಯಮಗಳನ್ನು ಪಾಲಿಸುವುದು ಅತ್ಯಾವಶ್ಯಕವಾಗಿದೆ.


Click it and Unblock the Notifications