ಕರ್ನಾಟಕ ಬ್ಯಾಂಕ್ PO ನೇಮಕಾತಿ 2024: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಿರಿ

ಕರ್ನಾಟಕ ಬ್ಯಾಂಕ್ ಪಿಒ ನೇಮಕಾತಿ 2024: ಕರ್ನಾಟಕ ಬ್ಯಾಂಕ್‌ ಇದೊಂದು ಖಾಸಾಗಿ ಬ್ಯಾಂಕ್‌ ಆಗಿದ್ದು, ಇದು ದೇಶದಾತ್ಯಂತ ತನ್ನ ಶಾಖೆಗಳನ್ನ ಹೊಂದಿದೆ. ಅಲ್ಲದೆ ಕರ್ನಾಟಕ ಬ್ಯಾಂಕ್‌ ತನ್ನ ಶಾಖೆಯಲ್ಲಿ ಪ್ರೊಬೇಷನರಿ ಆಫೀಸರ್‌ ( ಸ್ಕೇಲ್‌ I) ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಿದೆ.

ಕರ್ನಾಟಕ ಬ್ಯಾಂಕ್ ಪಿಒ ನೇಮಕಾತಿ 2024 ಕೊನೆಯ ದಿನಾಂಕ

ಅರ್ಹ ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ ಪಿಒ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸಬೇಕೆಂದಿದ್ದರೆ, ಕರ್ನಾಟಕ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ karnatakabank.comಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 10, 2024 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಈ ಕೂಡಲೆ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಬ್ಯಾಂಕ್ PO ನೇಮಕಾತಿ 2024 ಅರ್ಜಿ ಆಹ್ವಾನ!

ಕರ್ನಾಟಕ ಬ್ಯಾಂಕ್ ಪಿಒ ನೇಮಕಾತಿ 2024 ಹುದ್ದೆಯ ವಿವರಗಳು

ದೇಶದಾದ್ಯಂತ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಖಾಲಿ ಇರುವ ಪ್ರೊಬೇಷನರಿ ಆಫೀಸರ್‌ ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಇನ್ನು ಅಧಿಕೃತವಾಗಿ ಹುದ್ದೆಗಳ ಸಂಖ್ಯೆ ತಿಳಿಸಿಲ್ಲ.

ಕರ್ನಾಟಕ ಬ್ಯಾಂಕ್ ಪಿಒ ನೇಮಕಾತಿ 2024 ಅರ್ಹತೆ

ಶೈಕ್ಷಣಿಕ ಅರ್ಹತೆ

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು. ಅಥವಾ ಕೃಷಿ ವಿಜ್ಞಾನ, ಕಾನೂನಿನಲ್ಲಿ ಪದವೀಧರರಾಗಿರಬೇಕು. ಅಥವಾ ನೀವು ವೃತ್ತಿಪರ ಅರ್ಹತೆಗಳನ್ನು ಹೊಂದಿರಬೇಕು ಅಂದರೆ CA, CS, CMA, ICWA ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆ ಅಥವಾ ಮಂಡಳಿಯಿಂದ ಭಾರತ ಸರ್ಕಾರದ UGC ಅಥವಾ ಇತರ ಸರ್ಕಾರಿ ನಿಯಂತ್ರಕ ಸಂಸ್ಥೆಗಳಲ್ಲಿ ಪದವಿಯನ್ನ ಪಡೆದಿರಬೇಕು. ಅಲ್ಲದೆ ಈಗ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಥವಾ ಸ್ನಾತಕೋತ್ತರ ಪದವಿ ಪಡೆಯುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುವುದಿಲ್ಲ ಎಂದು ಕರ್ಣಾಟಕ ಬ್ಯಾಂಕ್ ತನ್ನ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.

ವಯಸ್ಸಿನ ಮಾನದಂಡ

ಅಭ್ಯರ್ಥಿಯ ಗರಿಷ್ಠ ವಯಸ್ಸು 28 ವರ್ಷಗಳು ಆಗಿರಬೇಕು. ಆದ್ರೆ ಎಸ್‌ಸಿ ಅಥವಾ ಎಸ್‌ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಇರುತ್ತದೆ.

ಕರ್ನಾಟಕ ಬ್ಯಾಂಕ್ ನೇಮಕಾತಿ 2024 ಆನ್‌ಲೈನ್‌ ಅರ್ಜಿ: ಅರ್ಜಿ ಶುಲ್ಕ

ಸಾಮಾನ್ಯ ಆಥವಾ ಕಾಯ್ದಿರಿಸದ ಅಥವಾ OBC ಅಥವಾ ಇತರರಿಗೆ ಅರ್ಜಿ ಶುಲ್ಕ 800 ರೂ. ಆಗಿರುತ್ತದೆ ಮತ್ತು ಇದರಲ್ಲಿ ತೆರಿಗೆಗಳು ಅನ್ವಯವಾಗಿರುತ್ತವೆ.
ಹಾಗೆ SC/ST ಗಾಗಿ ಅರ್ಜಿ ಶುಲ್ಕ 700 ರೂ. ಆಗಿರುತ್ತದೆ ಮತ್ತು ತೆರಿಗೆಗಳು ಅನ್ವಯವಾಗಿರುತ್ತವೆ.

ಕರ್ಣಾಟಕ ಬ್ಯಾಂಕ್ ಪಿಒ ನೇಮಕಾತಿ 2024: ಸಂಬಳದ ವಿವರ

ಪ್ರೊಬೇಷನರಿ ಆಫೀಸರ್‌ ( ಸ್ಕೇಲ್‌ I) ಹುದ್ದೆಯ ತಿಂಗಳ ವೇತನ 48,480 ರೂ. ಆಗಿರುತ್ತದೆ.
ಇನ್ನು ರ‍್ಯಾಂಕ್‌ಗೆ ಅನುಗುಣವಾಗಿ (48480-2000/7-62480-2340/2-67160-2680/7-85920 ರೂ.) ವೇತನ ಬದಲಾಗುತ್ತದೆ.

ಕರ್ನಾಟಕ ಬ್ಯಾಂಕ್ PO ನೇಮಕಾತಿ 2024 ಆಯ್ಕೆ ಪ್ರಕ್ರಿಯೆ

ಬೆಂಗಳೂರು, ಚೆನ್ನೈ, ಮುಂಬೈ, ನವದೆಹಲಿ, ಹೈದರಾಬಾದ್, ಕೋಲ್ಕತ್ತಾ, ಪುಣೆ, ಮಂಗಳೂರು, ಹುಬ್ಬಳ್ಳಿ/ಧಾರವಾಡ, ಮೈಸೂರು, ಶಿವಮೊಗ್ಗ ಮತ್ತು ಕಲಬುರ್ಗಿಯ ಹಲವಾರು ನಗರಗಳ ಕೇಂದ್ರಗಳಲ್ಲಿ ಡಿಸೆಂಬರ್ 22ರಂದು ನಿಗದಿಪಡಿಸಲಾದ ಸ್ಥಳಗಳಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆಯನ್ನ ನಡೆಸಲಾಗುವುದು. ಇನ್ನು ಆನ್‌ಲೈನ್ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಬ್ಯಾಂಕಿನ ಪ್ರಧಾನ ಕಛೇರಿ ಮಂಗಳೂರಿನಲ್ಲಿ ಅಥವಾ ಬ್ಯಾಂಕ್ ನಿರ್ಧರಿಸಿದಂತೆ ಯಾವುದೇ ಸ್ಥಳದಲ್ಲಿ ಸಂದರ್ಶನವನ್ನ ನಡೆಸಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರಿನಲ್ಲಿರುವ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜು ಅಥವಾ ಬ್ಯಾಂಕ್ ನಿರ್ಧರಿಸಿದ ಸ್ಥಳದಲ್ಲಿ 'ಇಂಡಕ್ಷನ್ ತರಬೇತಿ ಕಾರ್ಯಕ್ರಮ'ಕ್ಕೆ ತಮ್ಮ ಸ್ವಂತ ವೆಚ್ಚದಲ್ಲಿ ಹೋಗಬೇಕು. ಇನ್ನು ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅವರನ್ನು ಬ್ಯಾಂಕಿನ ಯಾವುದೇ ಶಾಖೆಗಳು ಅಥವಾ ಕಚೇರಿಗಳಿಗೆ ಪೋಸ್ಟ್ ಮಾಡಲಾಗುತ್ತದೆ. ಅವರ ಒಂದು ವರ್ಷದ ಅವಧಿಯನ್ನ ಟ್ರೈನಿಂಗ್‌ ಪಿರೀಡ್‌ ಎಂದು ಪರಿಗಣಿಸಲಾಗುವುದು, ನಂತರ ನಿಮ್ಮ ಹುದ್ದೆಯನ್ನ ದೃಢೀಕರಿಸಲಾಗುವುದು.

ಕರ್ನಾಟಕ ಬ್ಯಾಂಕ್ ಪಿಒ ನೇಮಕಾತಿ 2024 ಪಠ್ಯಕ್ರಮ

ಈ ಪರೀಕ್ಷೆಯು ಒಟ್ಟು 202 ಪ್ರಶ್ನೆಗಳನ್ನು ಒಳಗೊಂಡಿದ್ದು, ಇದರ ಗರಿಷ್ಠ ಅಂಕ 225 ಆಗಿದೆ. ಹಾಗೆ 150 ನಿಮಿಷಗಳ ಕಾಲ ಆನ್‌ಲೈನ್ ಪರೀಕ್ಷೆ ನಡೆಸಲಾಗುವುದು. ಇನ್ನು ಈ ಪರೀಕ್ಷೆಯಲ್ಲಿ ಇಂಗ್ಲಿಷ್‌, ರೀಸನಿಂಗ್‌, ಸಾಮಾನ್ಯ ಜ್ಞಾನ, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌, ಕಂಪ್ಯೂಟರ್‌ ಜ್ಞಾನ ಜೊತೆಗೆ ಇದರಲ್ಲಿ ಇಂಗ್ಲೀಷ್‌ ಭಾಷೆಯ ಶಾರ್ಟ್‌ ನೋಟ್ಸ್‌ ಹಾಗೆ ಪ್ರಭಂದದ ಕುರಿತಂತೆ ಎರಡು ಪ್ರಶ್ನೆಗಳನ್ನ ಕೇಳಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

1. ಕರ್ನಾಟಕ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ karnatakabank.comಗೆ ಅಥವಾ https://karnatakabankpo.azurewebsites.net/ ವೆಬ್‌ಸೈಟ್‌ಗೆ ಭೇಟಿ ನೀಡಿ.

2.'ಕೆರಿಯರ್ ಪೇಜ್' ಮೇಲೆ ಕ್ಲಿಕ್ ಮಾಡಿ ಮತ್ತು ನಂತರ "ಅಪ್ಲೈ ಆನ್‌ಲೈನ್‌" ಆಯ್ಕೆಯನ್ನು ಕ್ಲಿಕ್ ಮಾಡಿ. ಕರ್ನಾಟಕ ಬ್ಯಾಂಕ್ ಪಿಒ ನೇಮಕಾತಿ 2024ರ ಅರ್ಜಿ ಪ್ರಕ್ರಿಯೆಗೆ ಹೊಸ ಪುಟ ತೆರೆಯುತ್ತದೆ.

3. ಮೂಲಭೂತ ವಿವರಗಳನ್ನು ಒದಗಿಸುವ ಮೂಲಕ ನೋಂದಣಿ ಮಾಡಿಕೊಳ್ಳಿ. ನಂತರ, ಲಾಗಿನ್ ಮಾಡಿ ಮತ್ತು ಅರ್ಜಿಯನ್ನು ಭರ್ತಿ ಮಾಡಿ. ಯಶಸ್ವಿ ನೋಂದಣಿಯ ನಂತರ, ಸಿಸ್ಟಮ್ ಅಪ್ಲಿಕೇಶನ್ ಸಂಖ್ಯೆಯನ್ನು ರಚಿಸುತ್ತದೆ ಮತ್ತು ನಿಮ್ಮ ಲಾಗಿನ್ ಡೀಟೇಲ್ಸ್‌ಗಳನ್ನ ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ.

4. ಲಾಗಿನ್ ಡೀಟೇಲ್ಸ್‌ಗಳನ್ನ ಸ್ವೀಕರಿಸಿದ ನಂತರ, ಪುಟಕ್ಕೆ ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

5. ಅರ್ಜಿ ಶುಲ್ಕವನ್ನು ಪಾವತಿಸಿ, ನಂತರ, ಅರ್ಜಿಯ ಅಂತಿಮ ಸಲ್ಲಿಕೆಗೆ ಮುಂದುವರಿಯಿರಿ.
6. ಸಲ್ಲಿಸು ಕ್ಲಿಕ್ ಮಾಡಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಅದರ ಹಾರ್ಡ್ ಪ್ರತಿಯನ್ನು ನಿಮ್ಮಲ್ಲೇ ಉಳಿಸಿಕೊಳ್ಳಿ.

ಕರ್ನಾಟಕ ಬ್ಯಾಂಕ್ ಪಿಒ ನೇಮಕಾತಿ 2024: ಪ್ರಮುಖ ದಿನಾಂಕಗಳು

ಆನ್‌ಲೈನ್ ನೋಂದಣಿ ಪ್ರಾರಂಭ ದಿನಾಂಕ: ನವೆಂಬರ್ 30, 2024
ಆನ್‌ಲೈನ್ ನೋಂದಣಿಗೆ ಕೊನೆಯ ದಿನಾಂಕ: ಡಿಸೆಂಬರ್ 10, 2024 (23:59ರ ವರೆಗೆ)
ಪರೀಕ್ಷೆಯ ದಿನಾಂಕ: ಡಿಸೆಂಬರ್ 22, 2024

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+